ಕಾನೂನು ಪದವಿ ಪಡೆದ ಮಹಿಳೆಯರಿಗೆ ತರಬೇತಿಗಾಗಿ ಆರ್ಥಿಕ ಸಹಾಯ

 : ಅರ್ಜಿ ಆಹ್ವಾನ
ಕೊಪ್ಪಳ ಜ. : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕಾನೂನು ಪದವಿ ಪಡೆದ ಮಹಿಳೆಯರಿಗೆ ಕಾನೂನು ಆಡಳಿತ ತರಬೇತಿ ಪಡೆಯಲು ಆರ್ಥಿಕ ಸಹಾಯ ಯೋಜನೆ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಿದೆ.
  ಈ ಯೋಜನೆಗಾಗಿ ಅರ್ಜಿ ಸಲ್ಲಿಸಲು ಕಾನೂನು ಪದವಿ ಪಡೆದ ಮಹಿಳೆಯಾಗಿರಬೇಕು, ವಯೋಮಿತಿ ೩೫ ವರ್ಷದೊಳಗಿರಬೇಕು, ಕುಟುಂಬದ ವಾರ್ಷಿಕ ಆದಾಯ ರೂ. ೪೦೦೦೦ ಮೀರಿರಬಾರದು, ಬಾರ್ ಕೌನ್ಸಿಲ್‌ನಲ್ಲಿ ಹೆಸರು ನೋಂದಾಯಿಸಿರಬೇಕು, ಎರಡು ವರ್ಷ ಅನುಭವ ಇರುವ ವಕೀಲರ ಅಧೀನದಲ್ಲಿ ತರಬೇತಿ ಪಡೆಯುತ್ತಿರಬೇಕು.  ಅರ್ಹ ಮಹಿಳೆಯರು ಅರ್ಜಿಯನ್ನು ಜ. ೧೦ ರ ಒಳಗಾಗಿ ಸಲ್ಲಿಸಬೇಕು.  ಹೆಚ್ಚಿನ ವಿವರಗಳನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ದೂರವಾಣಿ ಸಂ: ೨೨೨೭೦೩ ಇವರನ್ನು ಸಂಪರ್ಕಿಸಬಹುದಾಗಿದೆ .
Please follow and like us:
error