You are here
Home > Koppal News > ಗವಿಶ್ರೀಗಳವರಿಂದ ಅತಿರುದ್ರ ಮಹಾಯಾಗಕ್ಕೆ ಚಾಲನೆ

ಗವಿಶ್ರೀಗಳವರಿಂದ ಅತಿರುದ್ರ ಮಹಾಯಾಗಕ್ಕೆ ಚಾಲನೆ

ಕೊಪ್ಪಳ : ತಾಲೂಕಿನ ಬೂದಗೂಂಪಾ ಗ್ರಾಮದ ಅತ್ಯಂತ ಮಹಿಮೇವುಳ್ಳ ಶ್ರೀ ಪ್ರಸನ್ನ ಭೂದೇಶ್ವರ ಸಹಿತ ಭೂದೇಶ್ವರ ದೇವಸ್ಥಾನದಲ್ಲಿ ದಿನಾಂಕ. ೨೯ ರ ಗುರುವಾರ ರಂದು ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಸಂಸ್ಥಾನ ಗವಿಮಠದ   ಶ್ರೀ ಅಭಿನವ ಗವಿಸಿದ್ದೇಶ್ವರರ ಸಮ್ಮುಖದಲ್ಲಿ ಗೂ ಪೂಜೆ ಮಹಾ ಸಂಕಲ್ಪ ಚತುರ್ವೆದ ಸಹಿತಾ ಸ್ವಾಹಾಕಾರ ಪೂರ್ವಾಂಗ ಸಹಿತ ಅತಿರುದ್ರ ಸ್ವಾಹಾಕಾರ ಶತ ಚಂಧಿಯಾಗ ಪಾರಾಯಣ್ ಆರಂಭವಾಯಿತು. ಈ ಸಂದರ್ಭದಲ್ಲಿ ೧೦.೦೦೦ ಮೋದಕಗಳನ್ನು ಮಹಾ ಗಣಪತಿ ಹೋಮಕ್ಕೆ ಪೂರ್ಣಾಹುತಿ ಅರ್ಪಿಸಲಾಯಿತು. ಮಾಜಿ ಸಂಸದರಾದ   ಎಚ್ ಜಿ.ರಾಮುಲು ಮತ್ತು ಅವರ ಕುಟುಂಬದವರಿಗೆ ಶ್ರೀಗಳಿಂದ ಆರ್ಶಿವಚನ ಮಾಡಲಾಯಿತು.
ಈ ವಿಶೇಷ ಸಂದರ್ಭದಲ್ಲಿ ಪ್ರಮುಖರಾದ ಮಾಜಿ ಮಂತ್ರಿಗಳು ಹಾಗೂ ಹೆಚ್.ಕೆ.ಡಿ.ಸಿ.ಅಧ್ಯಕ್ಷರಾದ ಮಲ್ಲಿಕಾರ್ಜುನ ನಾಗಪ್ಪ ರವರು, ಹೊಸಪೇಟಿ ಮಾಜಿ ಶಾಸಕ ಗವಿಯಪ್ಪನವರು, ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀನಾಥರವರು, ಕರಿಯಣ್ಣ ಸಂಗಟಿ, ಅರ್ಜುನಸಾ ಕಾಟವಾ, ಯಮನಪ್ಪ ಕಬ್ಬೆರ್, ಮಹೇಶ ಹಳ್ಳಿ, ಜಾಕೀರ್ ಹುಸೇನ್ ಕಿಲ್ಲೆದಾರ್, ವೈಜನಾಥ ದಿವಟರ್, ಎಸ್.ಬಿ.ಮಾಲಿಪಾಟೀಲ್, ಯಲ್ಲಪ್ಪ ಕಾಟ್ರಳ್ಳಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Top