ಸಾಚಾರ ವರದಿಗೆ ಒತ್ತಾಯಿಸಿ ಕೊಪ್ಪಳ ಜಿಲ್ಲಾದ್ಯಂತ ಕರಪತ್ರ ಚಳುವಳಿ

 ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ರಾಜಿಂದರ್ ಸಾಚರ್ ರವರು ಮುಸ್ಲಿಂರ ಸ್ತತಿಗತಿಯ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಿ ೭ವರ್ಷ ಕಳೆದರೂ ಕೂಡ ಯುಪಿಎ ಸರ್ಕಾರ ವರದಿಯನ್ನು ಅನುಷ್ಠಾನಕ್ಕೆ ತರದೇ ಇರುವುದನ್ನು ವಿರೋಧಿಸಿ, ಸಾಚಾರ್ ಜಾರಿಗಾಗಿ ಹೋರಾಟ ಸಮಿತಿಯವರು ಆ ವರಧಿಯಲ್ಲಿನ ಮುಖ್ಯಾಂಶಗಳನ್ನು ಉಳ್ಳಂತಹ ಕರಪತ್ರಗಳನ್ನು ಪ್ರಕಟಿಸಿ ರಂಜಾನ್ ಹಬ್ಬದ ಈ ದಿನದಂದು ಜಿಲ್ಲೆಯ ಎಲ್ಲಾ ಈದ್ಗಾ ಮೈದಾನಗಳು ಹಾಗೂ ಪ್ರಾರ್ಥನಾ ಸ್ಥಳಗಳ ಹತ್ತಿರ ಕರ ಪತ್ರಗಳನ್ನು ಹಂಚುವ ಮೂಲಕ ಮುಸ್ಲಿಮರಲ್ಲಿ ಜಾಗೃತಿ ಮೂಡಿಸಲು ಹಾಗೂ ವರಧಿಯ ಅನುಷ್ಠಾನಕ್ಕೆ ಒತ್ತಾಯಿಸಿರುತ್ತಾರೆ. 
ಗಂಗಾವತಿಯ ಈಗ್ದಾ ಮೈದಾನದಲ್ಲಿ ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಇಕ್ಬಾಲ್ ಅನ್ಸಾರಿ ಹೋರಾಟ ಸಮಿತಿಯು ಅತ್ಯುತ್ತಮ ಕೆಲಸ ಮಾಡುತ್ತಿದ್ದು ಅವರಿಒಗೆ ನನ್ನ ಬೆಂಬಲವಿದ್ದು, ಸಮಾಜದ ಜನ ಒಗ್ಗಟ್ಟಾಗಿ ತಮ್ಮ ಹಕ್ಕುಗಳ ಪಡೆಯುವುದಕ್ಕಾಗಿ ಸಾಚಾರ್ ವರದಿ  ಹರಾಟ ಸಮಿತಿಯೊಂದಿಗೆ ಗುರುತಿಸಿಕೊಳ್ಳಬೇಕು ಮತ್ತು ಅವರಿಗೆ ಸಹಕರಿಸಬೇಕು ಎಂದು ಕರೆನೀಡಿದರು. 
ಕರಪತ್ರ ಚಳುವಳಿಯಲ್ಲಿ ಸಮಿತಿಯ ಸಂಚಾಲಕರೊಂದಿಗೆ ವಿದ್ಯಾರ್ಥಿ ಮುಖಂಡರುಗಳಾದ ಪರಮೇಶ್ವರ, ಬಸವರಾಜ್, ಚಂದ್ರು, ಕಿಶೋರ್, ಶಿವಕುಮಾರ್, ಸೈದಪ್ಪ, ಅಂಬ್ರೇಶ ಹಾಗೂ ಕಾರ್ಮಿಕ ನಾಯಕ ವಿರುಪಾಕ್ಷಪ್ಪ ಉಪಸ್ಥಿತರಿದ್ದರು.
ಸಾಚಾರ್ ವರದಿಯ ಜಾರಿಗಾಗಿ ಒತ್ತಾಯಿಸಿ ಶೀಘ್ರದಲ್ಲ ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳ ಸಭೆ ಕರೆದು, ಜಿಲ್ಲಾ ಸಮಿತಿಯನ್ನು ಅಸ್ಥಿತ್ವಕ್ಕೆ ತರಲಾಗುವುದು ಹಾಗೂ ವರದಿ ಜಾರಿಯಾಗುವ ವರಗೆ ಹಂತ ಹಂತವಾಗಿ ಹೋರಾಟವನ್ನು ಮಾಡಲಾಗುವುದು ಎಂದು ಕಾರ್ಮಿಕ ಮುಖಂಡ  ತಿಳಿಸಿದ್ದಾರೆ.  
Please follow and like us:
error

Related posts

Leave a Comment