ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ

 ಕೊಪ್ಪಳ ಜಿಲ್ಲಾ ಮೋಚಿಗಾರ (ಮೋಚಿ) ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ದಿನಾಂಕ : ೧೬-೦೨-೨೦೧೪ ರಂದು ಜಿಲ್ಲೆಯ ಸಮಜದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಸಾಹಿತ್ಯ ಭವನ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದೆ.  ಕಾರಣ ಜಿಲ್ಲೆಯ ಸಮಾಜದ ವಿದ್ಯಾರ್ಥಿಗಳು ೨೦೧೨-೧೩ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ದ್ವಿತೀಯ ವರ್ಷದಲ್ಲಿ ಒಂದೇ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿಮಾಡಿ ದಿನಾಂಕ: ೧೪-೦೨-೨೦೧೪ರ ಒಳಗಾಗಿ ಸಲ್ಲಿಸಲು ತಿಳಿಸಲಾಗಿದೆ.  ಅರ್ಜಿ ನಮೂನೆಗಳು ಆಯಾ ತಾಲೂಕ ಅಧ್ಯಕ್ಷರಲ್ಲಿ ಅಥವಾ ನಮ್ಮಲ್ಲಿ ಪಡೆಯಬಹುದಾಗಿದೆ.  ಈ ಅವಕಾಶವನ್ನು ಸಮಾಜದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಲು ಸಮಾಜದ ಜಿಲ್ಲಾ ಅಧ್ಯಕ್ಷರಾದ ದಾನಪ್ಪ ಜಿ. ಕವಲೂರ ರವರು ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ- ದಾನಪ್ಪ ಕವಲೂರ ಅಧ್ಯಕ್ಷರು-೯೪೪೮೨೬೩೦೦೩, ವೀರೇಶ ಹುಲ್ಲೂರ ಸಂಘಟನಾ ಕಾರ್ಯದರ್ಶಿ-೯೭೪೧೪೨೬೨೬೧. ಇವರನ್ನು ಸಂಪರ್ಕಿಸಬಹುದು.
Please follow and like us:
error