ದುಡಿಮೆಗಾಗಿ ಹೊರಟವರು ಮಸಣ ಸೇರಿದರು

ತಮ್ಮ ಜೀವನ ಸಾಗಿಸುವುದಕ್ಕಾಗಿ ಕೋಳಿ ಪಾರಂಗಳಲ್ಲಿ ಕೆಲಸಕ್ಕಾಗಿ ಹೊರಟಿದ್ದ ನತದೃಷ್ಟ ಕಾರ್ಮಿಕರು ಮಸಣ ಸೇರಿದ್ದಾರೆ. ಅವರಲ್ಲಿ ಹೆಚ್ಚಿನವರು ಸಣ್ಣವಯಸ್ಸಿನವರು. ಟಾಟಾ ಎಸ್ ಗಾಡಿ ಮತ್ತು ಟಿಪ್ಪರ್ ನಡುವೆ ಎನ್ 13ರಲ್ಲಿ ಕೂಕನಪಳ್ಳಿ ಸಮೀಪ ಈ ಅಪಘಾತ ನಡೆದಿದೆ. ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಹೆಚ್ಚಿನ ಕೂಲಿಯ ಆಸೆಗಾಗಿ ಇವರೆಲ್ಲಾ ಕೋಳಿ ಪಾರಂಗೆ ಕೆಲಸಕ್ಕೆ ಹೊರಟಿದ್ದರು. ಅವರಲ್ಲಿ ಬಾಲಕಾರ್ಮಿಕರೇ ಹೆಚ್ಚು. ಬದುಕು ಕಟ್ಟಿಕೊಳ್ಳಲು ಹೊರಟವರು ಮಸಣ ಸೇರಿದ ದೃಶ್ಯ ಎಲ್ಲರ ಮನಕಲುಕುವಂತಿತ್ತು. ಅದರಲ್ಲೂ ಎಳೆಯ ವಯಸ್ಸಿನ ಬಾಲ ಕಾರ್ಮಿಕರು ಬಲಿಯಾಗಿದ್ದನ್ನು ನೋಡಿದರೆ ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿರುವುದು ಎದ್ದು ಕಾಣುವಂತಿತ್ತು.
Please follow and like us:
error