ಸ್ವಂತ ಖರ್ಚಿನಲ್ಲಿ ಬೋರ್ ವೆಲ್ ಹಾಕಿಸಿದ ನಗರಸಭೆ ಸದಸ್ಯ

ಕೊಪ್ಪಳ : ಜವಾಹರ ರಸ್ತೆಯ ಬಸವಣ್ಣ ಗುಡಿ ಪಕ್ಕದಲ್ಲಿ  ನೂತನ ನಗರಸಭಾ ಸದಸ್ಯರಾದ ಚೆನ್ನಪ್ಪ ಕೋಟ್ಯಾಳ ಇವರು ತಮ್ಮ ಸ್ವಂತ ಖರ್ಚಿನಿಂದ ಸಾರ್ವಜನಿಕ ಉಪಯೋಗಕ್ಕಾಗಿ ಬೋರ್‌ವೆಲ್‌ನ್ನು ಹಾಕಿಸಿದ್ದಾರೆ.  
ಬೋರ್ ವೆಲ್ ಗೆ ಜೆಡಿಎಸ್‌ನ ಮುಖಂಡರಾದ ಸುರೇಶ ಭೂಮರಡ್ಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಓಣಿಯ ಹಿರಿಯರು,ಮುಖಂಡರು ಭಾಗವಹಿಸಿದ್ದರು.  ನೂತನ ನಗರಸಭಾ ಸದಸ್ಯ ಚೆನ್ನಪ್ಪ ಕೋಟ್ಯಾಳರ ಈ ಸೇವೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts

Leave a Comment