ನಮ್ಮ ಅಭಿವೃದ್ಧಿ ಬಯಸದ ಕಸಾಪ ಹುದ್ದೆ ಬೇಡ

ಕೊಪ್ಪಳ, ಡಿ. ೭. ಹೈ. ಕ. ಭಾಗಕ್ಕೆ ಅಗತ್ಯವಾಗಿರುವ ೩೭೧ ನನ್ನು ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಚರ್ಚೆ ಮಾಡಲು ಸಹ ಸಿದ್ಧರಿಲ್ಲದ ಕನ್ನಡ ಸಾಹಿತ್ಯ ಪರಿಷತ್ ಹುದ್ದೆಯೂ ಬೇಡವೆಂದು ಮಂಜುನಾಥ ಜಿ. ಗೊಂಡಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳ ತಾಲೂಕ ಅಧ್ಯಕ್ಷ ಜಿ. ಎಸ್. ಗೋನಾಳರಿಗೆ ಕೊಪ್ಪಳ ತಾಲೂಕ ಕಾರ್ಯದರ್ಶಿ ಹುದ್ದೆಗೆ ನೀಡಿರುವ ರಾಜೀನಾಮೆ ಪತ್ರವನ್ನು ಕಳುಹಿಸಿದೆ ಎಂದವರು ತಿಳಿಸಿದ್ದಾರೆ. ಆರ್ಟಿಕಲ್ ೩೭೧ ತಿದ್ದುಪಡಿ ವಿಷಯವನ್ನು ಚರ್ಚೆ ಮಾಡಲು ಸಹ ನಮ್ಮದೇ ರಾಜ್ಯದ ಕನ್ನಡಪರ ಸಂಸ್ಥೆಯೊಂದು ಸಿದ್ಧವಿಲ್ಲ ಎಂದಾದರೆ, ಕೇಂದ್ರ ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸುತ್ತೆ ಎಂಬ ಹಗಲು ಗನಸು ಕಾಣುವದನ್ನು ಬಿಟ್ಟು ತೀವ್ರವಾದ ಹೋರಾಟಕ್ಕೆ ಇಳಿಯಬೇಕು, ಹೈ. ಕ. ಭಾಗದ ಜನರು ಸಮ್ಮೇಳವನ್ನು ಭಹಿಷ್ಕಾರ ಮಾಡಬೇಕು, ಅಂದಾಗ ಮಾತ್ರ ಕಸಾಪ ಕೇಂದ್ರದ ಪದಾಧಿಕಾರಿಗಳಿಗೆ ಅರ್ಥವಾಗುತ್ತದೆ. ಕಸಾಪ ದವರು ಸಹ ಸಮ್ಮೇಳವನ್ನು ತಮ್ಮ ತಮ್ಮ ಸ್ವಾರ್ಥ ಮತ್ತು ಹಿತಾಸಕ್ತಿಗೆ ತಕ್ಕಂತೆ ಮಾಡಿದ್ದಾರೆ ಹೊರತು ಎಲ್ಲೂ ಒಟ್ಟಿಗೆ ಕರೆದುಕೊಂಡು ಹೋಗುವ ಗೋಜಿಗೆ ಹೋಗಿಲ್ಲ. ಸಮ್ಮೇಳನದಲ್ಲಿ ಕೆಲವರು ತಮ್ಮ ಅನುಕೂಲಕ್ಕೆ ಕೆಲಸ ಮಾಡುವರನ್ನು ಮಾತ್ರ ಹತ್ತಿರಬಿಟ್ಟುಕೊಂಡಿದ್ದಾರೆ. ಕಸಾಪ ದವರು ಸರಕಾರಿ ಹಣದಲ್ಲಿ ಸಮ್ಮೇಳನ ಮಾಡುವದರಿಂದ ಅದು ಸರಕಾರದ ಇನ್ನೊಂದು ಕಾರ್ಯಕ್ರಮವಷ್ಟೆ ಆಗುತ್ತದೆ. ಮಾದ್ಯಮದವರಾದರೂ ಈ ನಿಟ್ಟಿನಲ್ಲಿ ಎಚ್ಚರಗೊಳ್ಳಬೇಕು, ಇಲ್ಲವಾದರೆ, ಸಮ್ಮೇಳನ ಕೇವಲ ಆಡಳಿತ ಪಕ್ಷದ ಮೆರವಣಿಗೆ ಆಗಿ ಬಿಡುತ್ತದೆ ಅಷ್ಟೆ ಎಂದು ಹೇಳಿರುವ ಗೊಂಡಬಾಳ ದಲಿತ ಸಾಹಿತ್ಯ ಪರಿಷತ್ತು, ಕರ್ನಾಟಕ ವಾಲ್ಮೀಕಿ ಸೇನೆ ಜಂಟಿಯಾಗಿ ರಾಜ್ಯದಾದ್ಯಂತ ಹೈ. ಕ. ಭಾಗಕ್ಕೆ ೩೭೧ ತಿದ್ದುಪಡಿಗೋಸ್ಕರ ವಿಶೇಷ ಕಾರ್ಯಕ್ರಮ ರೂಪಿಸುತ್ತದೆ ಎಂದಿರುವ ಅವರು, ಅಗತ್ಯಬಿದ್ದರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ಪರ್ಧೆ ಮಾಡುವದಾಗಿ ತಿಳಿಸಿದ್ದಾರೆ.
Please follow and like us:
error