ಕಿರಿದರಲ್ಲಿ ಹಿರಿದರ್ಥ ಹಿಡಿದಿಡುವುದೇ ಚುಟಕು ಸಾಹಿತ್ಯ

ಕೊಪ್ಪಳ: ನೂರು ಶಬ್ದಗಳನ್ನು ಹತ್ತು ಶಬ್ದಗಳಲ್ಲಿ ಹೇಳುವುದೇ ಚುಟುಕು ಸಾಹಿತ್ಯ. ಕಿರಿದರಲ್ಲಿ ಹಿರಿದರ್ಥ ಹಿಡಿದಿಡುವುದೇ ಚುಟಕು ಸಾಹಿತ್ಯದ ವಿಶೇಷ. ಯುವ ಕವಿಗಳು ದೊಡ್ಡ ದೊಡ್ಡ ಸಾಹಿತಿಗಳ ಗ್ರಂಥ ಅಧ್ಯಯನ ಮಾಡಬೇಕು. ಸತತ ಅಧ್ಯಯನದಿಂದ ಮಾತ್ರ ಉತ್ತಮ ಚುಟುಕುಗಳನ್ನು ರಚಿಸಲು ಸಾಧ್ಯವಾಗುತ್ತದೆ. ಕವಿಗಳು ತಮ್ಮ ಕವಿತೆಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದಬೇಕು, ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಬೇಕು ಎಂದು ತಿರುಳ್ಗನ್ನಡ ಕಲೆ ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ರವಿವಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ದೇವಾಲಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದ ಇಟಗಿಯ ಮಹಾದೇವ ದೇವಾಲಯದ ಆವರಣದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಕವಿ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡ ರಾಜ್ಯಮಟ್ಟದ ಕವಿಗೊಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು. 
ಹಾಸನದ ಎನ್.ಎಲ್.ಚನ್ನೇಗೌಡರು ಕವಿತೆ ವಾಚಿಸುವುದರ ಮೂಲಕ ಕವಿಗೋಷ್ಠಿ ಉದ್ಘಾಟಿಸಿzರು. ಪತ್ರಕರ್ತರಾದ ಎಂ.ಪರಶುರಾಮಪ್ರಿಯ, ನಿವೃತ್ತ ಉಪನ್ಯಾಸಕರಾದ ಪಾರ್ವತಿದೇವಿ ಶಂಕರ, ಎನ್.ಜಡೆಯಪ್ಪ, ವೀರಣ್ಣ ವಾಲಿ, ರಾಜ್ಯ ಪತ್ರಕರ್ತರ ವೇದಿಕೆಯ ಅಧ್ಯಕ್ಷರಾದ ಮಹೇಶಬಾಬು ಸುರ್ವೆ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಶಿವಪ್ರಸಾದ ಹಾದಿಮನಿ(ರಾಜಕೀಯ), ಮಹೇಶ ಬಳ್ಳಾರಿ (ಹೈ.ಕ), ದೀಪಾ ನಾಗನೂರಮಠ(ಸುನಾಮಿ), ವಾಸುದೇವ ಕುಲಕರ್ಣಿ(ಪ್ರಕೃತಿ), ಪುಷ್ಪಲತಾ ಏಳುಭಾವಿ(ಕೃಷ್ಣನ ಕೊಳಲನಾದ), ಮಹೇಶ ಪೂಜಾರ(ನೆನೆಯಬಾರದೆ).
ಮಹಾದೇವನ) ಲಲಿತಾ ಭಾವಿಕಟ್ಟಿ (ಕುವೆಂಪು) ಎಂಎಸ್.ಪಾಶಾ (ದೇವಾಲಯ ಚಕ್ರವರ್ತಿ) ಪ್ರಕಾಶ ಗೊಂಡಬಾಳ (ಆಸೆ) ಸರೋಜಾ ಬಾಕಳೆ (ಬಡತನದ ಇಂಡಿಯ) ಗುರುಶಾಂತಯ್ಯ ಬಿ.ಜಿ. (ಕನ್ನಡದ ನೆಲವ ನೋಡುಬಾ) ಗೋರಳ್ಳಿ ಜಗದೀಶ (ಅವ್ವ ನನ್ನವ್ವ) ಹನುಮಪ್ಪ ಬಾರಕೇರ (ದೇವಾಲಯ) ಶರಣಯ್ಯ ಸೊಪ್ಪಿಮಠ (ತಿಳುವಳಿಕೆ ಇಲ್ಲದವರು) ಜಡೆಯಪ್ಪ (ಭ್ರಷ್ಠಾಚಾರ) ವಿಮಲಾ ಇನಾಮದಾರ (ಶಿಲಾ ಬಾಲಿಕೆ) ವಿರೇಶ ಲಕ್ಷಾಣಿ (ಪಿತಾಮಹರು) ಸೋಮು ಕುದರಿಹಾಳ (ಅಪ್ಪ) ಎ.ಪಿ. ಅಂಗಡಿ (ನಗುವ ಚಲ್ಲಿ) ಶಿಲ್ಪಾ ರಮೇಶ (ಚಂದಮಾಮ ಇಟಗಿ) ಶ್ರೀಕಾಂತ ಪೂಜಾರ (ಇಟಗಿ) ಮಾನಪ್ಪ ಬೆಲ್ಲದ (ನಿರೀಕ್ಷೆ) ಕಂಪಲಾಪುರ ಗೋಪಾಲ (ಶಿಕ್ಷೆ) ಶ್ರೀನಿವಾಸ ಚಿತ್ರಗಾರ (ಮೇರಾ ಭಾರತ ಮಹಾನ್) ಗವಿಸಿದ್ದಪ್ಪ ಬಾರಕೇರ (ಇಟಗಿ ದೇವಾಲಯ) ಸತ್ಯ ನಾರಾಯಣ ಶೀಟಿ (ಯುಗಧರ್ಮ) ಶರಣಪ್ಪ ಉಮಚಗಿ (ಚರಿತ್ರೆಯ ಹಂತ) ರುಕ್ಮೀಣಿಬಾಬುರಾವ್ ಶೀಖಂಡೆ (ಗಂಡುಗಲಿ ಕುಮಾರರಾಮ) ರಮೇಶ ಬನ್ನಿಕೊಪ್ಪ (ಈ ನೆಲದ ನೋವು) ಗೋರೂರ ಪಂಕಜ (ಗುರಿಗಳಿಲ್ಲದ ಕಣ್ಣು ಮುಂದೆ) ಲಕ್ಷ್ಮೀ ದೇವಪ್ಪ (ಬಡವೆಯ ಬವಣೆ) ಜಿ.ಕೆ.ವೆಂಕಟೇಶ (ರೈತ) ಹೂಜನಹಳ್ಳಿ ಗುಜ್ಜವ್ವ (ನರಕ) ಅನ್ನಪೂರ್ಣ ಮನ್ನಾಪೂರ (ವಜ್ರವಡತೆ) ಜಿ.ಎಸ್. ಗೋನಾಳ (ಭಾರ) ವೀರಣ್ಣ ವಾಲಿ (ಅಂತರ) ಡಾ. ರೇಣುಕಾ ಕರಿಗಾರ (ಕ್ಷಮಿಸು) ಹನುಮಂತಪ್ಪ ಉಪ್ಪಾರ (ಕನಸು) ಕಳಕೇಶ ಬಳಿಗಾರ (ಪ್ರೀತಿ) ಕನಕಪ್ಪ ತಳವಾರ (ಶಹರಿ) ಸತೀಶ ಹೆಚ್. ಆರ್ (ಕಣ್ಣೊಳಗಿನ ಬೆಳಕು) ಯಲ್ಲಪ್ಪ (ನಾನೇಕೆ ಸುರಿಯಲಿ) ಮಲ್ಲಪ್ಪ ಒಡೆಯರ (ಕವಿತೆ ಕಾಡಿದ ಪ್ರಶ್ನೆಗಳು) ಫಕೀರಪ್ಪ ವಜ್ರಬಂಡಿ (ನವಶತಮಾನಕಂಡ) ಎನ್. ಖಾದರಬಾದಶಹ (ಅಂಚೆ) ಬಸವರಾಜ ಹಿತ್ತಲಮನಿ (ಭರವಸೆ) ಉಮೇಶ ಅಬ್ಬಿಗೇರಿ (ಗಾಂಧಿ ತಾತ) ಕೆ. ಆರ್. ಕುಲಕರ್ಣಿ (ಮುಚ್ಚುತಾಯ ಮನದಿ) ವಾಯ್ .ಬಿ.ಜೂಡಿ (ನೆಲಗಳ್ಳರು) ಎನ್.ಟಿ.ಸಜ್ಜನ (ಧಿಕ್ಕಾರ) ಕವನಗಳನ್ನು ವಾಚಿಸಿದರು. 
ಶ್ರೀಕಾಂತ ಪೂಜಾರ ನಿರೂಪಿಸಿದರು. ಮಹೇಶಬಾಬು ಸುರ್ವೆ ಸ್ವಾಗತಿಸಿದರು. ಜಿ.ಎಸ್. ಗೋನಾಳ ವಂದಿಸಿದರು. 
Please follow and like us:
error