You are here
Home > Koppal News > ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಂಗಣ್ಣ ಕರಡಿ ಕರೆ

ಸರಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಂಗಣ್ಣ ಕರಡಿ ಕರೆ

– ಕೊಪ್ಪಳ :-  ಮಹಾತ್ಮ ಗಾಂಧಿಜಿಯವರು ಕಂಡ ಗ್ರಾಮೀಣ ಭಾಗದ ಕನಸು ನನಸಾಗಬೇಕಾದರೆ ಮೊದಲು ಹಳ್ಳಿಗಳು ಸುದಾರಿಸಬೇಕು ಆನಿಟ್ಟಿನಲ್ಲಿ ಇಂತಹ ಕಾಮಗಾರಿಗಳ  ಅವಶ್ಯಕತೆ ಹಳ್ಳಿಗಳಿಗಿದೆ. ಹಳ್ಳಿಗಳಿಂದ ರಾಷ್ಟ್ರದ ಭವಿಷ್ಯ ಉಜ್ಜವಲವಾಗಬೇಕಾಗಿದೆ. ಆದ್ದರಿಂದ ರಾಜಕಿಯ ಭಿನ್ನ ಬೇದಗಳನ್ನು ಮರೆತು ಗ್ರಾಮದವರೆಲ್ಲ ಒಗ್ಗಟ್ಟಿನಿಂದ ಸರಕಾರದ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗವನ್ನು ಪಡೆಸಿಕೊಳ್ಳಲು ಸಂಗಣ್ಣ ಕರಡಿ ಶಾಸಕರು ಸಲಹೆ ನೀಡಿದರು. 
ಅವರು ಕೊಪ್ಪಳ ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾ.ಪಂ ಆವರಣದಲ್ಲಿ ಆಯೋಜಿಸಿದ್ದ ಸುವರ್ಣ ಗ್ರಾಮಕ್ಕೆ ಆಯ್ಕೆಯಾದ ಕಾತರಕಿ ಗೂಡ್ಲಾನೂರು ಸುವರ್ಣ ಗ್ರಾಮದ ಗುದ್ದಲಿ ಪೂಜೆಯನ್ನುನೆರವೆರಿಸಿ ಮಾತನಾಡುತ್ತಾ ಪ್ರತಿಯೊಬ್ಬರು ಮನೆಗೊಂದು ಶೌಚಾಲಯ ನಿರ್ಮಿಸಿ ಪರಿಸರವನ್ನು ಕಾಪಾಡಬೇಕು  ಭಯಾನಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಇನ್ನಿತರ ರೋಗಗಳಿಂದ ಮುಕ್ತ ಗ್ರಾಮವಾಗಬೇಕೆಂದ ಮಾತನಾಡಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷರಾದ ಯಲ್ಲನಗೌಡ್ರ ಮಾಲೀಪಾಟೀಲ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ರಾಘವೇಂದ್ರ ಹಿಟ್ನಾಳ, ತಾಲೂಕ ಪಂಚಾಯತ ಅಧ್ಯಕ್ಷರಾದ ದೇವಪ್ಪ ಮ್ಯಾಕಳಿ, ತಾಲೂಕ ಪಂಚಾಯತ ಉಪಾಧ್ಯಕ್ಷರಾದ ಸುಜಾತ ಮಾಲಿಪಾಟೀಲ, ತಾಲೂಕ ಪಂಚಾಯತ ಸದಸ್ಯರಾದ ಮುದೆಗೌಡ್ರ ಪಾಟೀಲ ಮಾತನಾಡಿದರು. ತಾಲೂಕ ಪಂಚಾಯತ  ಮಾಜಿ ಅಧ್ಯಕ್ಷರಾದ  ವೆಂಕನಗೌಡ್ರ ಹಿರೇಗೌಡ್ರ, ಗ್ರಾ.ಪಂ ಉಪಾಧ್ಯೆಕ್ಷೆ ಶೋಭಾ ನಾಗನಗೌಡ್ರ ಗ್ರಾಮದ ಗುರು ಹಿರಿಯರಾದ ಸೋಮಣ್ಣ ಬೈರಣ್ಣವರ, ಅಂದಣ್ಣ ಅಂಗಡಿ, ಕೃಷ್ಣಾರೆಡ್ಡಿ ಗಲಬಿ, ಮಲ್ಲಣ್ಣ ಗುಗರಿ, ಬಸವರಾಜ ಅಂಗಡಿ, ಇತರರು ಉಪಸ್ಥಿತರಿದ್ದರು. 
ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರು ಸಂಗಣ್ಣ ಕರಡಿ, ಜಿಲ್ಲಾ ಪಂಚಾಯತಿ ರಾಘವೇಂದ್ರ ಹಿಟ್ನಾಳ, ಇತರರಿಗೆ  ಸನ್ಮಾನ ಮಾಡಲಾಯಿತು. 
ಕಾರ್ಯಕ್ರಮದ ನಿರೂಪಣೆಯನ್ನು ಜಗದಯ್ಯ ಸಾಲಿಮಠ ನಿರ್ವಹಿಸಿದರು.  ವೆಂಕನಗೌಡ್ರ ಹಿರೇಗೌಡ್ರ ಸ್ವಾಗತಿಸಿ ವಂದಿಸಿದರು. 

Leave a Reply

Top