ಖ್ಯಾತ ವಕೀಲರಾದ ಎಸ್.ಎ. ಕಬೀರ್ ಅವರ ನಿಧನ


ಕೊಪ್ಪಳ,ಅ.೧೩ಃ ಜಿಲ್ಲೆಯ ಖ್ಯಾತ ವಕೀಲರಾದ ಎಸ್.ಎ.ಕಬೀರ (೮೪) ಅವರು ಇಂದು ಹೈದರಾಬಾದ್ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಕೆಲವು ದಿನಗಳಿಂದ ಅವರು ಕಿಡ್ನಿ ಹಾಗೂ ಲಂಗ್ಸ್ ತೊಂದರೆಯಿಂದ ಬಳಲುತ್ತಿದ್ದರು. ಹೈದರಾಬಾದ್ ಆಸ್ಪತ್ರೆಯಲ್ಲಿಯೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಸಂಜೆ ೭:೩೦ ಗಂಟೆಗೆ ಕೊನೆಯುಸಿರೆಳದರು.
ಖ್ಯಾತ ವಕೀಲರಾದ ದಿ. ಎಸ್.ಎ.ಕಬೀರ್ ಅವರು ತಮ್ಮ ಕಾನೂನು ಪದವಿಯನ್ನು ಹೈದರಾಬಾದನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಪೂರೈಸಿ ಅಖಂಡ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ೫೦ ವರ್ಷಗಳ ಸುದಿರ್ಘ ವಕೀಲಿ ಸೇವೆ ಸಲ್ಲಿಸಿದ್ದಾರೆ.
ದಿವಂಗತರು ಪತ್ನಿ, ೯ ಜನ ಹೆಣ್ಣು ಮಕ್ಕಳ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ದಿವಂಗತರ ಅಂತ್ಯಕ್ರಿಯ ನಾಳೆ ( ರವಿವಾರ) ಮಧ್ಯಾಹ್ನ ೨ ಗಂಟೆಗೆ ಕಿನ್ನಾಳ ರಸ್ತೆಯ ಖಬರಸ್ತಾನನಲ್ಲಿ ಜರುಗಲಿದೆ ಎಂದು ಮಹ್ಮದ ಅಲಿಮುದ್ದೀನ್   ತಿಳಿಸಿದ್ದಾರೆ.

Leave a Reply