ಡಿಜಿ ಐಜಿಪಿ ಶಂಕರ್ ಬಿದರಿ ನೇಮಕಾತಿ ರದ್ದು

ಬೆಂಗಳೂರು :ವಿವಾದದ ಗೂಡಾಗಿದ್ದ ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ ನೇಮಕಾತಿಗೆ ಹೊಸ ತಿರುವು ಸಿಕ್ಕಿದೆ.ಕೇಂದ್ರ ಆಡಳಿತ ನ್ಯಾಯಮಂಡಳಿ(CAT)ಹಾಲಿ ಡಿಜಿ ಐಜಿಪಿ ಶಂಕರ್ ಬಿದರಿ ಅವರ ನೇಮಕಾತಿಯನ್ನು ರದ್ದುಗೊಳಿಸಿದೆ.

ಮಾಜಿ ಡಿಜಿ ಐಜಿಪಿ ನೀಲಂ ಅಚ್ಯುತ್ ರಾವ್ ಅವರು ನ.30,2011ರಂದು ನಿವೃತ್ತಿ ಹೊಂದಿದ ನಂತರ ಶಂಕರ್ ಬಿದರಿ ಅವರನ್ನು ನೇಮಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು.
ಆದರೆ,ಶಂಕರ್ ಬಿದರಿ ನೇಮಕಾತಿಯನ್ನು ಡಿಜಿ ಐಜಿಪಿ ಸ್ಥಾನಕ್ಕೆ ಗೃಹರಕ್ಷಕ ದಳದ ಡಿಜಿಪಿ ಎ.ಆರ್. ಇನ್ಫಾಂಟ್ ಅವರು ಪ್ರಶ್ನಿಸಿದ್ದರು.ಸೇವಾ ಹಿರಿತನ ಮತ್ತು ಉತ್ತಮ ಸೇವಾ ದಾಖಲೆಗಳ ಆಧಾರದ ಮೇಲೆ ಇನ್ಫಾಂಟ್ ಅವರಿಗೆ ಸಿಗಬೇಕಿದ್ದ ಸ್ಥಾನವನ್ನು ಸ್ವಜನಪಕ್ಷಪಾತ ಮಾಡಿ ಶಂಕರ್ ಬಿದರಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು.
ನೂತನ ಮಹಾ ನಿರ್ದೇಶಕ ಶಂಕರ್ ಬಿದರಿ ಅವರ ಅಧಿಕಾರ ಅವಧಿ 2012ರ ಮೇ ತಿಂಗಳಿಗೆ ಮುಗಿಯುತ್ತಿತ್ತು.ಈ ಹಿಂದೆ ಎ.ಆರ್.ಇನ್ಫಾಂಟ್ ಅವರ ಹೆಸರನ್ನು ಆರೆಸ್ಸೆಸ್ ಮುಖಂಡರು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಸೂಚಿಸಿದ್ದರು.
ಇನ್ಫಾಂಟ್ ಅವರನ್ನು ಹಂಗಾಮಿ ಡಿಜಿ ಐಜಿಪಿಯಾಗಿ ನೇಮಿಸಲಾಗಿದೆ.ಡಿಜಿಪಿ ಸುಶಾಂತ್ ಮಹಾಪತ್ರ ಹೆಸರೂ ಚಿಂತನೆಯಲ್ಲಿದೆ. ಅಂತಿಮ ಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೊಗ(UPSC)ಗೆ ಕಳುಹಿಸಿಕೊಡಾಗುವುದು. ನಂತರ ಹೊಸ ಡಿಜಿಪಿ ನೇಮಕ ತೀರ್ಮಾನವಾಗಲಿದೆ ಎಂದು ಗೃಹ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.    ಕೃಪೆ : ಗಲ್ಫ್ ಕನ್ನಡಿಗ

Leave a Reply