ಸಿಂಡಿಕೇಟ ಬ್ಯಾಂಕಿನ ರೈತರ ದಿನಾಚರಣೆ.

ಕೊಪ್ಪಳ-೨೨- ಸಿಂಡಿಕೇಟ ಬ್ಯಾಂಕಿನ ಕ್ಷೇತ್ರಿಯ ಕಾರ್ಯಾಲಯ ಬಳ್ಳಾರಿ ಹಾಗು ಸಿಂಡಿಕೇಟ ಬ್ಯಾಂಕ್
ಮುನಿರಾಬಾದ ಆರ್.ಎಸ್. ಹೊಸಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ರೈತರ ದಿನಾಚಾರಣೆ
ಕಾರ್ಯಕ್ರಮ ವನ್ನು ಹುಲಗಿ ಗ್ರಾಮದ ಸಾಂಸ್ಕೃತಿಕ ಭವನದಲ್ಲಿ ಆಯೊಜಿಸಲಾಗಿತ್ತು,
ಮುನಿರಾಬಾದ ಸಿಂಡಿಕೇಟ ಬ್ಯಾಂಕ ವ್ಯವಸ್ಥ್ತಾಪಕ ರಾಮಚಂದ್ರ ಕೆ.ವ್ಹಿ ಪ್ರಾಸ್ತಾವಿಕವಾಗಿ
ಪಾತನಾಡುತ್ತಾ, ಸಿಂಡಿಕೇಟ ಬ್ಯಾಂಕ ಭಾರತ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ೧೯೬೪ರಲ್ಲಿ
ಕೃಷಿ ಸಾಲವನ್ನು ನಿಡಲು ಮುಂದೆಬಂದಿರುತ್ತದೆ. ಶೇ ೭೦% ಕೃಷಿ ಹಾಗೂ ಉಪಕಸಬುಗಳಮೆಲೆ
ಅವಲಂಬನೆ ಯಾಗಿರುತ್ತz. ಸಿಂಡಿಕೇಟ ಬ್ಯಾಂಕ ರೈತ & ರೈತ ಮಹಿಳೆ ಕೃಷಿ
ತಾಂತ್ರಿಕತೆಯಬಗ್ಗೆ, ರೈತರ ಪಾಠಶಾಲೆಗಳ ಮುಖಾಂತರ ತಾಂತ್ರಿಕ ಸಮಸ್ಯೆಗಳ ಪರಿಹಾರ
ಮಾಡಿಕೊಳ್ಳಬೆಕಾದ ಸಾಮರ್ಥ್ಯ ಅಭಿವೃದ್ದಿ ಪಡಿಸುವದು ಬಡವರಿಗೆ ಹೆಚ್ಚಿನ ಪ್ರಮಾಣ ಪಡೆಯಲು
ಬ್ಯಾಂಕ ನಿಂದ ಸಾಲಪಡೆದು ಹೈನು ಗಾರಿಕೆ, ಕುರಿ ಸಾಕಾಣಿಕೆ, ಮಾಡಿಕೊಂಡು ಅಬಿವೃದ್ಧಿ
ಹೊಂದಲು ಶ್ರಮಿಸುತ್ತದೆ ಜೊತೆಗೆ ಬತ್ತದ ಪದ್ದತಿಯ ಬಿತ್ತನೆಯ ಬಗ್ಗೆ ಸಾವಯವ ಗೊಬ್ಬರ ಇತರ
ವಿಷಯ ಬಗ್ಗೆ ಮಹೀತಿ ನಿಡಿದರು.
    ಎಸ್.ಎಮ ದೇಸಾಯಿ ರಿಜಿನಲ್ ಮ್ಯಾನೆಜರ ಸಿಂಡಿಕೇಟ ಬ್ಯಾಂಕ ಬಳ್ಳಾರಿ ಇವರು ಮಾತನಾಡುತ್ತ ರೈತ ಈ ದೇಶದ್ದ ಬೆನ್ನೆಲುಬು ರೈತರ ದಿನಾಚರಣೆ ಪ್ರಗತಿ  ಪರ ರೈತರು ಬ್ಯಾಂಕ ನಿಂದ ಸಾಲ ಪಡೆದು ಸಕಾಲದಲ್ಲಿ ಮರುಪಾವತಿಸಲು ತಿಳಿಸಿದರು.
ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಟಿ. ಜನಾಂದ್ರನ್ ಮಾತನಾಡುತ್ತಾ, ರೈತರು ಸಾವಯವ ಗೊಬ್ಬರ ಹಾಕಿ ಭೂಮಿಯ ಫಲವತ್ತತೆ ಹೆಚ್ಚಿಸಲು ಇತ್ತೀಚಿನ ದಿನಗಳಲ್ಲಿ ರೈತರು ರಾಸಾಯನಿಕ ಗೊಬ್ಬರಕ್ಕೆ ಮಾರುಹೋಗಿ ಭುಮಿಯ ಫಲವತ್ತತೆಯನ್ನು ಕಳೆದುಕೋಳ್ಳುತ್ತಿದ್ದಾರೆ. ರೈತರು ಘನತ್ಯಾಜ್ಯ ವಿಲೆವಾರಿ ಘಟಕ, ಎರೆಹುಳು ಗೊಬ್ಬರ ಹಾಕಿ ಫಲವತ್ತತೆ ಹೆಚ್ಚಿಸಿಕೊಳ್ಳು ಕರೆನೀಡಿದರು.
 ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೌಳಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬ್ಯಾಂಕಿನಿಂದ ಸಾಲ ಸೌಲಭ್ಯವನ್ನು ಕೊಡಲು ಆರ್ಥಿಕವಾಗಿ ಸಭಲರಾಗಲು ತಿಳಿಸಿದರು.
    ಸಹಾಯಕ ಕೃಷಿ ಅಧಿಕಾರಿ ವಿದ್ಯಾದರ ಕೃಷಿ ಇಲಾಖೆ ಮಾಹಿತಿ ನೀಡಿದರು. ರಾಮಣ್ಣ ನಾಯಕ, ಶಂಕ್ರಪ್ಪ, ಜಂಭಣ್ಣ, ಸಿಂಟಡೆಕೇಟ್ ಬ್ಯಾಂಕ ಸಿಬ್ಬಂದಿ,  ಉಪಸ್ಥಿತರಿದ್ದರು. ಈ ಕಆರ್ಯಕ್ರಮದಲ್ಲಿ ೮೦ ಜನ ರೈತರು, ರೈತಮಹಿಳೆಯರು ಉಪಸ್ಥಿತರಿದ್ದರು.
ಪ್ರಗತಿಪರ ರೈತರಾದ ಹುಸೇನಪೀರ ಜವಳಿ, ಭರಮಪ್ಪ ಮುಂಗಲಿ, ಹಂಬಮ್ಮ ಕಟ್ಟಿ, ವೀಣಾದೇವಿ ಪಾಟೀಲ, ನಗರೇಶ, ಶಿವಪ್ಪ ಎಲಿಗಾರ, ಹನಮಪ್ಪ ಹೆಗ್ಗ, ವಿರುಪಾಕ್ಷಪ್ಪ ಆಡೂರ, ಹೆಚ್. ಅನಂತು, ಜಂಬಣ್ಣ ಮೇಟಿ,    ಸನ್ಮಾಸಿಸಲಾಯಿತು.
ವಿಕೇಂದ್ರೀಕೃತ ತರಬೇತಿ ಸಂಯೋಜಕ ಎಸ್.ಐ ಆರ್ ಡಿ ಮೈಸೂರ ಹೆಚ್.ಎ. ಹೊನ್ನುಂಚಿ ಸ್ವಾಗತಿಸಿದರು. ಕುಲಕರ್ಣಿ ನಿರೂಪಿಸಿದರು. ತ್ರಿವೇಣಿ ಪ್ರಾರ್ಥಿಸಿದರು. ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕಿ ಶ್ರಿಮತಿ ಸುಮಾ ವಂದಿಸಿದರು. 

Please follow and like us:
error