fbpx

ಆ.೧೦ ರಿಂದ ಜಿಲ್ಲಾದ್ಯಂತ ಹದಿಹರೆಯದ ಮಕ್ಕಳಿಗೆ ಜೀವನ ಕೌಶಲ್ಯ ತರಬೇತಿ

ಕೊಪ್ಪಳ,
ಆ.೧೦ ಕೊಪ್ಪಳ ಜಿಲ್ಲಾಡಳಿತ ಹಾಗೂ ಯುನಿಸೆಫ್
ಸಂಯುಕ್ತಾಶ್ರಯದಲ್ಲಿ ಬಾಲಿಕಾ ಸಂಘದ ಸದಸ್ಯರಿಗೆ ಜೀವನ ಕೌಶಲ್ಯ ತರಬೇತಿ
ಕಾರ್ಯಕ್ರಮವನ್ನು ಆ.೧೦ ರಿಂದ ಜಿಲ್ಲಾದ್ಯಂತ ಆಯೋಜಿಸಲಾಗಿದೆ.
     ಜಿಲ್ಲಾಡಳಿತ
ಮತ್ತು ಯುನಿಸೆಫ್ ಸಹಕಾರದೊಂದಿಗೆ ಅನುಷ್ಠಾನಗೊಳಿಸಲಾಗಿರುವ ಮಕ್ಕಳ ರಕ್ಷಣಾ ಯೋಜನೆಯಡಿ
ಜಿಲ್ಲೆಯ ೧೧ ರಿಂದ ೧೮ ವರ್ಷ ವಯೋಮಾನದ ಹೆಣ್ಣುಮಕ್ಕಳನ್ನು ಸೇರಿಸಿ, ಪ್ರತಿ ಅಂಗನವಾಡಿ
ಹಂತದಲ್ಲಿ ಕಿಶೋರಿ ಸಂಘ (ಬಾಲಿಕಾ ಸಂಘ)ಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಈಗ ಒಟ್ಟು
೯೦೦ ಬಾಲಿಕಾ ಸಂಘಗಳಿದ್ದು, ಸುಮಾರು ೩೫,೦೦೦ ಕಿಶೋರಿಯರು ಸದಸ್ಯರಾಗಿದ್ದಾರೆ. ಜಿಲ್ಲೆಯ
ಎಲ್ಲಾ ಹದಿಹರೆಯದ ಮಕ್ಕಳಿಗೆ ಬಾಲ್ಯವಿವಾಹ, ಲಿಂಗ ತಾರತಮ್ಯ, ಬಾಲ ಕಾರ್ಮಿಕ ಪದ್ಧತಿ,
ಲೈಂಗಿಕ ದೌರ್ಜನ್ಯ, ಸಾಗಾಣಿಕೆ ಮುಂತಾದ ಅನಿಷ್ಠ ಪದ್ಧತಿಗಳ ಬಗ್ಗೆ ಮಾಹಿತಿ ನೀಡಿ, ಅವರು
ಬಲಿಯಾಗದಂತೆ ರಕ್ಷಣೆ ಮಾಡುವುದು ಈ ಸಂಘಗಳ ಉದ್ದೇಶವಾಗಿದೆ.  
      ಈ
ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಹಂತ ಹಂತವಾಗಿ ಜೀವನ ಕೌಶಲ್ಯ ತರಬೇತಿಯನ್ನು
ಹಮ್ಮಿಕೊಳ್ಳಲಾಗಿದ್ದು, ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಿಶೋರಿಯರಿಗೆ ಹಾಗೂ ಪ್ರೌಢ ಶಾಲಾ
ಮಟ್ಟದಲ್ಲಿ ಆಯಾ ಪ್ರೌಢಶಾಲೆಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು
ಆಯೋಜಿಸಲಾಗಿದೆ.
     ತರಬೇತಿಯಲ್ಲಿ ಬಾಲಿಕಾ ಸಂಘದ ಸದಸ್ಯರಿಗೆ ಲಿಂಗತಾರತಮ್ಯ
ಹಾಗೂ ಲಿಂಗ ವ್ಯತ್ಯಾಸ ಬಗ್ಗೆ, ಮಕ್ಕಳ ಹಕ್ಕುಗಳ ಹಾಗೂ ವ್ಯವಸ್ಥೆಗಳ ಬಗ್ಗೆ,
ಅಪೌಷ್ಟಿಕತೆ, ಆರೋಗ್ಯ, ಸ್ವಚ್ಛತೆ, ಶೌಚಾಲಯ ನಿರ್ಮಾಣ ಹಾಗೂ ನೈರ್ಮಲೀಕರಣ, ತಾಯಂದಿರ
ಮರಣ ಮತ್ತು ಶಿಶುಮರಣ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ ನಂತಹ ಅನಿಷ್ಟ ಪದ್ಧತಿಗಳಿಂದ
ಮಕ್ಕಳ ರಕ್ಷಣೆ, ಹದಿಹರೆಯದಲ್ಲಿ ದೇಹ ಮತ್ತು ಮನಸ್ಸಿನಲ್ಲಾಗುವ ಪರಿವರ್ತನೆಗಳು ಹಾಗೂ
ಚಂದದ ಬದುಕಿಗೆ ಬೇಕಾದ ಅಂಶಗಳು ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡುವ
ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹದಿಹರೆಯದ ಮಕ್ಕಳಿಗೆ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮ ವೇಳಾಪಟ್ಟಿ.
ಕೊಪ್ಪಳ,
ಆ.೧೦ ಕೊಪ್ಪಳ ಜಿಲ್ಲಾಡಳಿತ ಹಾಗೂ ಯುನಿಸೆಫ್ ಸಂಯುಕ್ತಾಶ್ರಯದಲ್ಲಿ
ಬಾಲಿಕಾ ಸಂಘದ ಸದಸ್ಯರಿಗೆ ಜೀವನ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆ.೧೦ ರಿಂದ
ಜಿಲ್ಲಾದ್ಯಂತ ಆಯೋಜಿಸಲಾಗಿದ್ದು, ಕಾರ್ಯಕ್ರಮದ ವೇಳಾಪಟ್ಟಿ ವಿವರ ಇಂತಿದೆ.
ಯಲಬುರ್ಗಾ
ತಾಲೂಕು: ಆ.೧೦-ಚಿಕ್ಕಮ್ಯಾಗೇರಿ, ಗದಗೇರಿ, ಆ.೧೧-ಬಳೂಟಗಿ, ಬಂಡಿ, ಆ.೧೨-ಮುಧೋಳ,
ಕರಮುಡಿ, ಆ.೧೩-ಬೇವೂರು, ವಣಗೇರಿ, ಆ.೧೭-ಸಂಗನಾಳ, ರಾಜೂರು, ಆ.೧೮-ಹಿರೇಮ್ಯಾಗೇರಿ,
ಕಲ್ಲೂರು, ಆ.೧೯-ಬೆಣಕಲ್, ಇಟಗಿ, ಆ.೨೦-ಕುಕನೂರು, ಬಳಗೇರಿ, ಆ.೨೧-ಮಂಡಲಗಿರಿ,
ಯರೇಹಂಚಿನಾಳ, ಆ.೨೪-ಮಂಗಳೂರು, ಕುದರಿಮೋತಿ, ಆ.೨೫-ತಾಳಕೇರಿ, ಮಾಟಲದಿನ್ನಿ,
ಆ.೨೬-ಮುರಡಿ, ಹಿರೇವಂಕಲಕುಂಟಾ, ಆ.೨೭-ತಳಕಲ್, ಬನ್ನಿಕೊಪ್ಪ.
ಕೊಪ್ಪಳ ತಾಲೂಕು:
ಆ.೩೧-ಬೆಟಗೇರಿ, ಸಿಂದೋಗಿ, ಸೆಪ್ಟಂಬರ್.೦೧-ಕವಲೂರು, ಹಟ್ಟಿ, ಸೆ.೦೨-ಬೋಚನಹಳ್ಳಿ,
ಮತ್ತೂರು, ಸೆ.೦೩-ಬಹದ್ದೂರಬಂಡಿ, ಗೊಂಡಬಾಳ, ಸೆ.೦೪-ಗಿಣಗೇರಾ, ಹಿರೇಬಗನಾಳ,
ಸೆ.೦೭-ಇರಕಲ್‌ಗಡಾ, ಹಾಸಗಲ್, ಸೆ.೦೮-ಓಜನಹಳ್ಳಿ, ಕೋಳೂರು, ಸೆ.೦೯-ಕುಣಿಕೇರಿ, ಹುಲಿಗಿ.

ಗಂಗಾವತಿ ತಾಲೂಕು: ಸೆ.೧೦-ಮುಸಲಾಪುರ, ಚಿಕ್ಕಮಾದಿನಾಳ, ಸೆ.೧೧-ಹಣವಾಳ,
ಚಿಕ್ಕಡಂಕನಕಲ್, ಸೆ.೨೧-ಕರಡೋಣಾ, ಹಿರೇಖೇಡ, ಸೆ.೨೨-ಗೌರಿಪುರ, ಆಗೋಲಿ,
ಸೆ.೨೩-ಶ್ರೀರಾಮನಗರ, ಹೊಸಕೇರಾ, ಸೆ.೨೮-ಹೇರೂರು, ಕೇಸರಹಟ್ಟಿ, ಸೆ.೨೯-ಚಿಕ್ಕಜಂತಕಲ್,
ಢಣಾಪುರ, ಸೆ.೩೦-ಆನೆಗುಂದಿ, ಮಲ್ಲಾಪುರ, ಅಕ್ಟೋಬರ್.೦೧-ವಡ್ಡರಹಟ್ಟಿ, ಬಸಾಪಟ್ಟಣ,
ಅ.೦೫-ವೆಂಕಟಗಿರಿ, ಚಿಕ್ಕಬೆಣಕಲ್, ಅ.೦೬-ಬೂದಗುಂಪಾ, ಯರಡೋಣ, ಅ.೦೭-ಮರ್ಲಾನಹಳ್ಳಿ,
ಉಳ್ಕಿಹಾಳ, ಅ.೦೮-ಕಾರಟಗಿ, ಬೇವಿನಾಳ, ಅ.೦೯-ಮುಷ್ಟೂರು, ಸುಳೇಕಲ್.
ಕುಷ್ಟಗಿ
ತಾಲೂಕು: ಅ.೧೩-ನಿಲೋಗಲ್, ಹನುಮನಾಳ, ಅ.೧೪-ತುಗ್ಗಲಡೋಣಿ, ಮಾಲಗಿತ್ತಿ,
ಅ.೧೫-ಹಿರೇಗೊಣ್ಣಾಗರ, ಯರಗೇರಾ, ಅ.೧೬-ಹನುಮಸಾಗರ, ಕಬ್ಬರಗಿ, ಅ.೨೮-ಕಾಟಾಪುರ,
ಹೂಲಗೇರಾ, ಅ.೨೯-ಚಳಗೇರಾ, ಬೆನಕನಾಳ, ಅ.೩೦-ತಳುವಗೇರಾ, ಕೊರಡಕೇರಾ, ಅ.೩೧-ಬನ್ನಿಗೋಳ,
ಬಿಜಕಲ್, ನವೆಂಬರ್.೦೨-ದೋಟಿಹಾಳ, ಕ್ಯಾದಿಗುಪ್ಪ, ನ.೦೩-ಕಂದಕೂರು, ಹಿರೇಮನ್ನಾಪುರ,
ನ.೦೪-ತಾವರಗೇರಾ, ಮೇಣದಾಳ, ನ.೦೫-ಕಿಲ್ಲಾರಹಟ್ಟಿ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ
ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Please follow and like us:
error

Leave a Reply

error: Content is protected !!