ನಾಳೆ ಮುಷ್ಕರ ಯಾವ ಸೇವೆ ಇರುತ್ತೆ? ಯಾವುದು ಇರಲ್ಲ?

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಆರ್ಥಿಕ ಕಾನೂನು ಗಳನ್ನು ವಿರೋಧಿಸಿ 10 ಕಾರ್ಮಿಕ ಸಂಘಟನೆಗಳು ಬುಧವಾರ ದೇಶವ್ಯಾಪಿ ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದು, ಸಾರಿಗೆ, ಬ್ಯಾಂಕು, ವಿಮೆ, ಅಂಚೆ ಹಾಗೂ ಕೈಗಾರಿಕಾ ವಲಯಗಳ ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನೆಗೆ ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ನೌಕರರು ಬೆಂಬಲ ನೀಡಿದ ಕಾರಣ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಪ್ರಯಾಣಿಕರಿಗೆ ತೊಂದರೆ ಆಗಲಿದೆ.
 ಈ ಸೇವೆ ಇರಲಿದೆ.
– ಭಾರತೀಯ ರೈಲ್ವೆಯನ್ನು ಈ ಮುಷ್ಕರದಿಂದ ಹೊರಗಿಡಲಾಗಿದೆ.
– ಎಸ್‍ಬಿಐ, ಬ್ಯಾಂಕ್ ಆಫ್ ಬರೋಡಾ ಹೊರತು ಪಡಿಸಿ ಎಲ್ಲಾ ಬ್ಯಾಂಕ್‍ಗಳು ಸ್ಥಗಿತ
– ಹಾಲು, ಔಷಧ ವಾಹನಗಳು, ಖಾಸಗಿ ಬಸ್, ಲಾರಿ, ಸಿಟಿ ಟ್ಯಾಕ್ಸಿಗಳು ಸಂಚರಿಸಲಿದೆ.
ಈ ಸೇವೆ ಇರುವುದಿಲ್ಲ.
– ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಸೇವೆ ಇರಲ್ಲ
– ಮಕ್ಕಳಿಗೆ ಬಿಸಿಯುಟ ಇರಲ್ಲ
– ಬ್ಯಾಂಕ್, ಜೀವವಿಮಾ ನಿಗಮ ಸ್ಥಗಿತ
– ರಸ್ತೆಯಲ್ಲಿ ಆಟೋ ಸಂಚಾರ ಇರುವುದಿಲ್ಲ
ಕಾರ್ಮಿಕರ ಬೇಡಿಕೆ ಏನು?
– ಕನಿಷ್ಠ ವೇತನ 15 ಸಾವಿರ ನಿಗದಿಗೊಳಿಸಬೇಕು
– ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದುಗೊಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು
– ಕನಿಷ್ಟ ಪಿಂಚಣಿ 3 ಸಾವಿರಕ್ಕೆ ಏರಿಸಬೇಕು
– ಬೋನಸ್ ಭವಿಷ್ಯ ನಿಧಿ, ಗ್ರಾಚ್ಯುಟಿ ಮಿತಿ ಹೆಚ್ಚಿಸಬೇಕು
– ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ನೀಡಬೇಕು
– ಆರೋಗ್ಯ, ಶಿಕ್ಷಣ ವಲಯಕ್ಕೆ ಅನುದಾನ ಕಡಿತಕ್ಕೆ ವಿರೋಧ
– ವಿಮೆ, ಬಿಎಸ್‍ಎನ್‍ಎಲ್, ರೈಲ್ವೆ ಇಲಾಖೆ ಖಾಸಗೀಕರಣಕ್ಕೆ ವಿರೋಧ
– ಸಾರ್ವಜನಿಕ ಉದ್ದಿಮೆಗಳನ್ನು ರಕ್ಷಿಸಬೇಕು
– ರೈತರ ಆತ್ಮಹತ್ಯೆ ತಡೆಯಬೇಕು
– ಭೂಸ್ವಾಧೀನ ತಿದ್ದುಪಡಿಗೆ ವಿರೋಧ
– ರಸ್ತೆ ಸಾರಿಗೆ ಮತ್ತು ಸುರಕ್ಷಾ ಮಸೂದೆಯನ್ನು ಹಿಂಪಡೆಯುವುದು.

Please follow and like us:
error