ಮೋಸಂಬಿ ಹುಡುಗ- ಶರಣು ವೈ ಎಂ ( ಹಂಪಿ)

(ಈ ಸಣ್ಣ ಕಥೆಯು “ತಿಂಗಳು” ಮಾಸಿಕ ಪತ್ರಿಕೆಯ ಫೆಬ್ರವರಿ ತಿಂಗಳಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.)
“ದಯವಿಟ್ಟು ನನ್ನನ್ನು ದ್ವೇಷಿಸಬೇಡಿ…”
ಎಂದು ಅಂಗೈ ಅಗಲದ ಮೊಬೈಲ್‌ನ ಹೆಬ್ಬೆರಳಿನಲ್ಲಿ ಅವಸರದಲ್ಲಿ ಟಕಟಕ ಟೈಪಿಸಿ ‘ಡಾಲಿ’ ಎಂಬ ಹುಡುಗನ ಹೆಸರಿಗೆ ಕಳಿಸಿಯಾಯ್ತು.
ಮನಸು ಯಾಕೋ ತಹತಹನೆ. ಕುಂತಲ್ಲಿ ಕೂಡಕ್ಕಾಗ್ತಿಲ್ಲ. ನಾನು ನಿಜವಾಗ್ಲೂ ಸರಿ ಮಾಡ್ತಿದ್ದೀನಾ?
ಇಲ್ಲ. ನಾನು ಮಾಡ್ತಿರೋದು ಅಕ್ಷರಶಃ ಸರಿ. ಇಟ್ ಇಸ್ ಮೈ ಓನ್ ಡಿಸೀಶನ್. ಹಾಗಂತ ನನ್ಗೆ ನಾನು ಮನವರಿಕೆ ಮಾಡಿಕೊಂಡು ಮೊಬೈಲನ್ನು ಬೆಡ್ ಮೇಲೆ ಎಸೆದೆ.
ಕಿಚನ್ ರೂಮಿಂದ ಅಮ್ಮ ಕೂಗ್ತಿದಾಳೆ, ಅಪ್ಪ ಟಿ.”. ರೂಮಿಂದ ‘ಪಪ್ಪಿ’ ಅಂತ ಕರೀತಿದಾರೆ, ಆದ್ರೆ ನನ್ಗೆ ಕನಸಿನಲ್ಲಿ ಯಾರೋ ಬಂದು ಮಾತಾಡಿಸಿದ ಅನುಭವ. ಮೊಬೈಲನ್ನು ಬೆಡ್ ಮೇಲೆ ಎಸೆದು ಹಾಗೆಯೇ ಮಲಗಿಬಿಟ್ಟೆ. ಪಕ್ಕದಲ್ಲೇ ಮೊಬೈಲ್ ಇದೆ. ಅದು ಸೈಲೆಂಟ್ ಮೋಡ್‌ನಲ್ಲಿರೋದ್ರಿಂದ ಕತ್ಲಲ್ಲಿ ಲೈಟ್ ಆನ್ ಅಂಡ್ ಆಫ್ ಆಗ್ತಿದೆ. ಅದು ‘ಡಾಲಿ ಕಾಲಿಂಗ್’ ಅಂತ ಕಾಣ್ತಿತ್ತು. ಅದನ್ನು ನೋಡಿ ಕಟ್ ಮಾಡಿದೆ.
‘ಇಲ್ಲ. ನಾನು ಆತನನ್ನು ಪ್ರೀತಿಸಬಾರದಿತ್ತು’ ನೀನು ನನ್ನನ್ನು ಪ್ರೀತಿಸ್ತಿದಿಯಾ? ಅಂತ ಇನ್‌ಡೈರೆಕ್ಟ್ ಆಗಿ ಪದೇ ಪದೇ ಮೆಸೇಜ್ ಮಾಡಿ ಅಂದು ರಾತ್ರಿ ಕೇಳಲೇಬಾರದಿತ್ತು. ‘ಪಾಪ’ ಅವು ನನ್ನ ಎಲ್ಲ ಎರಡು ಸಾಲಿನ ಕಂಗ್ಲಿಶ್ ಮೆಸೇಜ್‌ಗೆ ಕೂಡ್ಲೇ ಉತ್ತರಿಸುತ್ತಿದ್ದ.
ಆತನಿಗೆ ನಿದ್ರೆ ಅಂದ್ರೆ ಬಹಳ ಇಷ್ಟ. ಕುಂಬಕರ್ಣನ ಮಾವನ ಮಗನಿರಬೇಕು. ಆದ್ರೆ ನನ್ನ ಮೆಸೇಜ್‌ಗಾಗಿ ರಾತ್ರಿಯೆಲ್ಲ ಪಾಪ ಕಾಯುತ್ತಿದ್ದ. ಯಾವಾಗ, ಯಾವ ಕ್ಷಣ ತನ್ನ ಪ್ರೀತಿಗೆ ಪಟ್ಟಾಬಿsಷೇಕವಾಗಿಬಿಡುತ್ತೋ ಎಂಬ ತವಕ ಅವನನ್ನು ಕಾಡುತ್ತಿತ್ತು! ಇದೇ ರೀತಿ ಇಡೀ ಎರಡು ರಾತ್ರಿಗಳು ಮೆಸೇಜ್‌ನಲ್ಲಿ ಚಾಟ್ ಮಾಡಿದ್ದಾಯ್ತು.
ಕಳ್ಳ! ಅವು ಒಳಗೊಳ್ಗೆ ಪ್ರೀತಿಸ್ತಿದಾನೆ, ನಾನು ಅಷ್ಟೇ ಅಂದುಕೋ…
ಆದ್ರೆ ಯಾಕೋ ಈಗ ಮನಸಾಗ್ತಿಲ್ಲ. ಮೆಸೇಜ್ ಮಾಡಲು ಏನೋ ತಡೆಯುತ್ತಿದೆ. ಅದು “ಬೇಡ ಹುಡುಗಿ, ಬೇಡ ಹುಡುಗಿ” ಎಂಬ ಕಿವಿಮಾತು ಹೇಳ್ತಿದೆ.
ಹಾಗಂತ ಅವನೇನೂ ನನ್ನ ಅರ್ಧದಲ್ಲಿಯೇ ಕೈ ಕೊಡೋನೇನಲ್ಲ. ಸುಂದರಾಂಗ ಶ್ರೀಮಂತನೇನೂ ಅಲ್ಲ. ನನ್ನ ‘ಡಾಲಿ’ ಹೆಸರಿಗೆ ತಕ್ಕಂತೆ ಕಿಲಕಿಲ ಅಂತ ನಗುವ ‘ಮುದ್ದು ಡಾಲಿ’. ಫಸ್ಟ್ ಟೈಮ್ ನನ್ನ ಸ್ಕೂಟಿ ಹತ್ತಿದಾಗಂತೂ ಅವು ಸೇಪಿsಗೆ ಇರಲಿ ಎಂದು ಬುಕ್ ಹೌಸ್‌ನಿಂದ ತಂದ ಪುಸ್ತಕಗಳನ್ನು ನ”ಬ್ಬರ ಮಧ್ಯೆ ಅಡ್ಡವಿಟ್ಟಿದ್ದ ‘ಭೂಪ’.
ಪಾಪ ನನ್ಗೆ ಅವು ಕೈ ಕೊಡುವ, ಕೆಟ್ಟದಾಗಿ ಬಿಹೇವ್ ಮಾಡುವ ಪ್ರಶ್ನೆಯೇ ಇಲ್ಲ. ಆದ್ರೂ ಈಗ ನನಗ್ಯಾಕೋ ಇದು ಪ್ರೀತಿ ಅಂತಾನೆ ಅನಿಸ್ತಿಲ್ಲ! ಹಾಗಂತ ನನ್ನ ಒಳಮನಸು ಅನ್ತಿತ್ತು ಅಷ್ಟೆ. ಕಣ್ಣುಬಿಟ್ಟು ಮೊಬೈಲ್ ಕಡೆ ನೋಡಿದ್ರೆ ‘೧ ಮೆಸೇಜ್ ರಿಸೀವ್ಡ್’ ಅಂತ. ಕೀಪ್ಯಾಡ್ ಲಾಕ್ ಆಗಿದ್ದನ್ನು ಪಾಸ್‌ವರ್ಡ್ ಟೈಪಿಸಿ ಓಪನ್ ಮಾಡಿದೆ. (ಮನೆಯಲ್ಲಿ ಅಪ್ಪಿತಪ್ಪಿ ಯಾರೂ ಓಪನ್ ಮಾಡಬಾಡ್ದೇ ಇರಲಿ ಅಂತ!)
‘ಐ ಲವ್ ಯು… ಅಂಡ್ ಐ ಮಿಸ್ ಯು ಪಪ್ಪಿ’ ಅಂತ ಮೆಸೇಜ್.
ಈ ‘ಹುಂಬು ಪ್ರೇಮಿ’ಯನ್ನು ನಾನು ಹೇಗೆ ಅರ್ಥೈಸಿ ಹೇಳಲಿ? ನಾನು ತಪು ಮಾಡಿಬಿಟ್ಟೆ! ನಾನು ಇಷ್ಟು ಸಲುಗೆ ಕೊಡಬಾರದಿತ್ತು. ಅಯ್ಯೋ ನಾನು ದೊಡ್ಡ ತಪು ಮಾಡಿಬಿಟ್ಟೆ… ನಾನು ಪಾಪಿಯಾದೆ… ದೇವ್ರೇ…!!!
* * *
ಅದರ ಇಂದಿನ ದಿನವೇ
‘ನನಗ್ಯಾಕೋ ಇದೆಲ್ಲ ಜಸ್ಟ್ ಅಟ್ರ್ಯಾಕ್ಶನ್ ಅಂತ ಅನಿಸ್ತಿದೆ… ನಿಜವಾಗ್ಲೂ’
ಅಂತ ಭಾರವಾದ ಮನಸಿನಿಂದ ಮೆಸೇಜ್ ಮಾಡಿದ್ದೆ. ಕಳುಹಿಸಿದ ಮೆಸೇಜ್‌ಗೆ ಆತ ಹೇಗೆ ರಿಯಾಕ್ಟ್ ಆಗ್ತಾನೆ? ಇದನ್ನು ಓದಿ ಕೋಪಗೊಳ್ಳುತ್ತಾನಾ?… ಆತನು ಇದನ್ನು ಒಪ್ಪಬಹುದಾ…? ನನಗೇನೋ ಹಾಗನ್ನಿಸುತ್ತಿಲ್ಲ. ಹುಡುಗ್ರು ಪ್ರೀತಿಸ್ತಾರೆ… ದೂರವಾಗಿಬಿಡ್ತಾರೆ… ಮರೆತುಬಿಡ್ತಾರೆ… ಆದ್ರೆ ಅದೇ ಹುಡುಗೀರು ‘ಈ’ ರೀತಿ ಕೈಕೊಟ್ಟುಬಿಟ್ರೆ ಹುಡುಗ್ರು ‘ದೇವದಾಸ್’ ಆಗ್ತಾರೆ… ಇದು ಯಾವ ನ್ಯಾಯರೀ…? ಹುಡುಗ್ರುಗೆ ಒಂದು, ಹುಡುಗೀರಿಗೆ ಒಂದು ನಿಯಮಾನ…?
ಅದೆಲ್ಲ ಹಾಳಾಗಿಹೋಗ್ಲಿ ಮತ್ತೆ ನನ್ನ ವಿಚಾರಕ್ಕೆ ಬರೋಣ…
ನಾನಂದುಕೊಂಡಂತೆ ಅವನು ಕೂಡಲೇ ರಿಪ್ಲೈ ಮಾಡಿದ್ದಾನೆ.
‘ಅದು ನಿನ್ಗೆ ಅಟ್ರ್ಯಾಕ್ಶನ್ ಅನಿಸಬಹುದು. ಆದ್ರೆ ನನ್ಗೆ ಮಾತ್ರ ಅದು ನಿಜವಾದ ಪ್ರೀತಿ, ತಿಳಿದ್ಕೋ…’ ಅಂತಿತ್ತು.
ಇದನ್ನು ಓದಿದ ಕೂಡ್ಲೇ, ಇಲ್ಲ ಇದನ್ನು ‘ಇಲ್ಲಿಗೆ’ ನಿಲ್ಲಿಸಬೇಕು. ಎಂಟು ದಿನಗಳಲ್ಲಿ ಒಂದು ಸಾವಿರದ ಎರಡ್ನೂರು ಚಿಲ್ಲರೆ ಮೆಸೇಜ್, ನೂರು ಫೋನ್ ಕಾಲ್, ಅದ್ರಲ್ಲಿ ಸುಮಾರು ಏನಿಲ್ಲಾ ಅಂದ್ರೂ ದಿನಕ್ಕೆ ಮೂರು ತಾಸು ಅಂದ್ರೂ ಎಂಟು ದಿನಕ್ಕೆ…? ದಿನದಿಂದ ದಿನಕ್ಕೆ ರಾತ್ರಿ ಮೆಸೇಜ್‌ಗಳ ಸುರಿಮಳೆ. ರಾತ್ರಿ ಪೂರ್ತಿ ಮೆಸೇಜ್‌ಗಳದ್ದೇ ಕಾರುಬಾರು! ದಿನದ ಬೆಳಗ್ಗೆಯೂ ಮೊಬೈಲ್ ಸೈಲೆಂಟ್ ಮೋಡ್. ಮನೆಯಲ್ಲಿ ಎಲ್ಲಿ ಗೊತ್ತಾಗಿಬಿಡುತ್ತೋ ಎಂಬ ಭಯ! ಆದ್ರೂ ಅದ್ರಲ್ಲಿ ಅದೆಂತಹುದೋ ಪ್ರೀತಿ.
‘ರೀ…’, ‘ಡಾಲಿ…’, ‘ಚಿನ್ನು…’, ‘ಮುದ್ದು…’, ‘ಪುಟ್ಟ…’, ‘ಕೋತಿಮರಿ…’, ‘ಗೂಬೆ…’ ನಡುರಾತ್ರಿಯ ‘ಚೀ ಕಳ್ಳ!’, ‘ತುಂಟ!’ ಎಂಬ ಮೆಸೇಜ್ ಕೂಡ ಕಳಿಸಿಯಾಯ್ತು. ಆ ಕಡೆಂದ ಅದೇ ರೀತಿಯ ಮೆಸೇಜ್ ವಾಪಾಸ್ ಬಂದಾಯ್ತು… ಇದ್ರಲ್ಲಿ ಯಾರ್‍ದು ಹೆಚ್ಚು…? ಯಾರ್‍ದು ಕಡಿಮೆ…? ಅಂತ ಅನಿಸಿದ್ದು ಗೊತ್ತಾಗ್ತಿಲ್ಲ.. ಗೊತ್ತಾಗಲ್ಲ ಕೂಡ!
ಒಟ್ಟಿನಲ್ಲಿ ಇಬ್ರೂ ಪ್ರೀತಿ ಮಾಡಿದ್ವಿ. ಅದು ಇಷ್ಟು ಜೆಟ್ ಸ್ಪೀಡ್‌ನಲ್ಲಿ. ಇಬ್ರಲ್ಲೂ ಮೊದ್ಲ ಮೆಸೇಜ್‌ನಲ್ಲೇ ‘ಪ್ರೀತಿಯ ನಕಾಶೆ’ ಬಿಡಿಸಿದ್ವಿ…
ಪ್ರೀತೀನಾ ಕೇಳಿದ್ದೆ. ನೋಡಿದ್ದೆ. ಆದ್ರೆ ಸ್ವಂತ ಅನುಭ”ಸಿದ್ದಿಲ್ಲ. ಲವ್ ಅಷ್ಟು ಅಸಹಾಯಕತೆ, ಅಪ್ರಾಪ್ತತೆಯಂತಹದ್ದು. ಇದನ್ನು ನಾನು ಅನುಭವಿಸ್ತಿದೀನಿ ಅಂತನ್ನುಷ್ಟರಲ್ಲೇ ನನ್ನ ಮನದ ಕೊನೆಯ ಭಾಗದಲ್ಲಿ ಶನಿ ದೇವ ಕಾಗೆಯ ಮೇಲೇರಿ ‘ಇದು ಪ್ರೀತಿಯಲ್ಲವೇ ಹುಚ್ಚು ಕೋಡಿ’ ಅನ್ನಬೇಕೇ! ಆಗಲೇ ನನ್ನ ಮನ ಎಚ್ಚರವಾಗಿದ್ದು!
ನನಗೋಸ್ಕರ ಅವು ಅಷ್ಟು ದೂರದಿಂದ ‘ನನ್ನೂ’ರಿಗೆ ನೋಡಲು ಬಂದದ್ದು. ಅದು ಬರೀ ‘ನನ್ನ’ನ್ನು ನೋಡಲು ಮಾತ್ರ ಬಂದದ್ದು. ಅಷ್ಟು ದೂರದಿಂದ ಅದು ನಾನ್ನೂರು ಕಿ.ಮೀ.ಗಳಷ್ಟು ಟ್ರಾವೆಲ್ ಮಾಡಿ.
ಇದನ್ನು ಕನ್ನಡಿ ಮುಂದೆ ನಿಂತು ಹತ್ತಾರು ಬಾರಿ ನನ್ನನ್ನು ನಾನೇ ಪ್ರಶ್ನೆ ಮಾಡಿಕೊಂಡೆ. ನಾನು ನೋಡಲು ಅಷ್ಟೇನೂ ಚೆನ್ನಾಗಿಲ್ಲ ಅಲ್ವಾ! ಅಂತಂದುಕೊಂಡೆ. ಸ್ವಲ್ಪ ತೆಳ್ಳಗಿದೀನಿ. (ಹುಡುಗೀರು ಹಾಗೇ ಇರಬೇಕು, ಅದು ರೂಲ್ಸ್ ತಾನೆ!) “ಸ್ವಲ್ಪ ಬಿಳಿ ಬಣ್ಣವನ್ನು ಮೈಮೇಲೆ ಹಚ್ಚಿದಂತೆ ಇದೀನಿ. ಅಷ್ಟು ಕಪು ಅಲ್ಲ… ಅಷ್ಟು ಬಿಳುಪೂ ಅಲ್ಲ. ಆದ್ರೆ ನೋಡಲು ತುಂಬಾ ಲಕ್ಷಣವಂತೆ” ಅಂತ ನನ್ನ ಅತ್ತೆ ಗುಣಗಾನ ಮಾಡಿದ್ರು.
ನಿಜ… ನಾನು ಲಕ್ಷಣವಾಗಿದೀನಿ. ಬರೀ ಬಣ್ಣ ರೂಪವನ್ನು ತಿದ್ದುವುದಿಲ್ಲ. ತೋರಿಸುವುದಿಲ್ಲ. ‘” ರಿಯಲ್ಲೀ ಲೈಕ್ಸ್ ” “ತ್ ಎ ಟ್ರೂ ಲವ್’. ಹಾಗಂತ ಅವನ ಮೆಸೇಜ್‌ಗಳನ್ನು ನೋಡಿದಾಗಲೆಲ್ಲಾ ಅಂದುಕೊಳ್ಳುತ್ತಿದ್ದೆ.
ಅಂದು ಬೆಳ್ಳಂಬೆಳಿಗ್ಗೇನೆ ಎಂಟು ಗಂಟೆಗೆ ಭೇಟಿಯಾಗಬೇಕಿತ್ತು. ಮಧ್ಯಾಹ್ನ ಒಂದು ಗಂಟೆ ಆಯ್ತು ‘ಡಾಲಿ’ನ ಭೇಟಿಯಾಗಲು. ನನ್ನ ಸ್ಕೂಟಿ ಗಾಡಿಯನ್ನು ಒರೆಸದೆ ಅದೆಷ್ಟು ದಿನಗಳಾಗಿದ್ದವೋ…? ಅದನ್ನು ಸ್ವಲ್ಪವೂ ಒರೆಸದೆ ಧೂಳಿನಲ್ಲಿಯೆ ಸ್ಟಾರ್‍ಟ್ ಮಾಡಿ ಅದರ ಕಿವಿ ಹಿಂಡಿದೆ.
ನಿಜ ಹೇಳ್ಲಾ. ಆಗ ಸ್ಕೂಟಿ ನನ್ನ ಆದೇಶವನ್ನು ಪಾಲಿಸುತ್ತಿದ್ದಿಲ್ಲ. ಅದಕ್ಕೆ ನಾನು ಹೋಗೋ ದಾರಿ ಮೊದ್ಲೇ ಗೊತ್ತಿತ್ತು ಅನ್ನಿಸ್ತಿದೆ. ಯಾವ ದಾರಿಯ, ಯಾವ ಮೇನ್ ರೋಡ್, ಯಾವ ಕ್ರಾಸ್, ಯಾವ ರೈಟ್‌ನಲ್ಲಿ ನನ್ನ ‘ಇನಿಯ’ ಇದಾನೆ ಎಂದು. ಹಾಗಂತ ನನ್ನ ಮನಸು ಒಂದು ಗೂಗಲ್ ಮ್ಯಾಪ್‌ನ ರೆಡಿ ಮಾಡಿಕೊಂಡಿತ್ತು. ಅದನ್ನು ಕಾಪಿ ಮಾಡಿಕೊಂಡ ರೀತಿ ನನ್ನ ಸ್ಕೂಟಿ ಹೊಗೆ ಉಗುಳುತ್ತಾ ಜಿಂಕೆಯಂತೆ ಓಡುತ್ತಿತ್ತು.
ಡಾಲಿ ಇದ್ದ ಜಾಗ ಹತ್ರ ಬಂದಂತೆ ಆತನ ಆಕೃತಿ ಸ್ಪಷ್ಟವಾಗಿ ನನ್ಗೆ ಕಾಣಲಾರಂಬಿsಸಿತು. ಮೊಬೈಲ್ ಆತನ ಕಿವಿ ಹತ್ರ ಇತ್ತು. ಏನೋ ಮಾತಾಡುತ್ತಿದ್ದ. ಯಾರ ಜೊತೆಗೆ ಮಾತಾಡ್ತಿರಬಹುದು…? ಹುಡುಗಿ ಜೊತೆ ಇರಬಹುದಾ….? ಎಂದು ಮುಂದೆ ರೋಡ್ ನೋಡ್ದೆ ಅವನತ್ತ ನೋಡುತ್ತ ಹತ್ರ ಬಂದೆ.
ನನ್ನ ಹುಡುಗ ಅಷ್ಟು ರಸ್ತೆ, ಕ್ರಾಸ್, ಸಿಗ್ನಲ್‌ಗಳು, ಜನರ ತಲೆಗಳ ಮಧ್ಯೆ ‘ಫೋಕಸ್ಡ್’ ಆಗಿ ನನಗೆ ಕಾಣ್ತಿದ್ದ. ಅವನನ್ನು ‘ಝೂಮ್ ಇನ್’ ಮಾಡಿ ಸಾಧ್ಯವಾದಷ್ಟು ದೂರದಿಂದಲೇ ನೋಡಿ ಸಂತೋಷಪಟ್ಟೆ. ಸಮಾಧಾನ ಆತು. ‘ಆ’ ಕ್ಷಣ ನಾನೇ ಸೂಟ್ ಆಗಲ್ಲೇನೋ ಅಂತ ಉಗುಳು ನುಂಗುತ್ತಾ ಹಾರ್‍ನ್ ಮಾಡ್ದೆ ಅವನ ಮುಂದೆ ನಿಂತು… ಬರುವಾಗ ಕನ್ನಡಿ ಮುಂದೆ ನಿಂತು ನಾನೇನೂ ಹೆಚ್ಚು ಮೇಕಪ್ ಮಾಡಿಕೊಂಡಿದ್ದಿಲ್ಲ. ನನ್ಗೆ ಗೊತ್ತಿತ್ತು. ಡಾಲಿಗೆ ಬಹಳ ಮೇಕಪ್ ಇಷ್ಟಾಗಲ್ಲ ಎಂದು ತುಂಬಾ ಸಿಂಪಲ್ಲಾಗಿ ತಲೆ ಸ್ನಾನ ಮಾಡಿ, ವೈಟ್ ಚೂಡಿದಾರ ಹಾಕಿದ್ದೆ.
ಪಾಪ ಆ ಪ್ರಾಣಿನೇ ಬಿಸಲಲ್ಲಿ ನಿಂತು ಎಲ್ಲಿ ಕಪ್ಪಾಗಿಬಿಡ್ತಾನೋ ಏನೋ ಅನ್ನೋ ಸಣ್ಣ ಅನುಮಾನ ನನ್ಗೆ ಕಾಡಿತ್ತು. ಇವು ಇನ್ನು ಮುಂದೆ ‘ನನ್ನ ಆಸ್ತಿ’ ಅಂತ ನನ್ಗೇ ನಾನೇ ಆದೇಶ ಮಾಡಿಕೊಂಡೆ. ನಿಜವಾಗ್ಲೂ ನನ್ಗೆ ‘ಡಾಲಿ ಹುಡುಗ’ ಇಷ್ಟವಾಗಿದ್ದ…
ಅವ್ನ ಮುಖ ನೋಡಿದ್ರೆ ‘ಮೋಸಂಬಿ’ ನೆನಪಾಗುತ್ತಿತ್ತು. ಮುಖದ ಮೇಲೆ ಎಲ್ಲೂ ಒಂದೇ ಒಂದು ಪ್ರಾಯದ ಪಿಂಪಲ್ಲು ಕೂಡ ಇಲ್ಲ. ನನ್ಗೆ ನನ್ನ ಬಗ್ಗೇನೆ ಸಿಟ್ಟು ಬಂತು. ನನಗ್ಯಾಕೆ ನಾಲ್ಕು ಪಿಂಪಲ್ಲು! ಎಂದು ಶಪಿಸಿಕೊಂಡೆ. ಆದರೆ ಇವತ್ತು ಪಿಂಪಲ್ಲು ಅಷ್ಟು ದೊಡ್ಡದಾಗಿ ಕಾಣ್ತಿಲ್ಲ. ದಿಟ್ಟಿಸಿ ನೋಡಿದ್ರೆ ಮಾತ್ರ ಕಾಣುತ್ತೆ ಎಂದು ಸಮಾಧಾನಪಟ್ಟುಕೊಂಡೆ.
ನಾನು ‘ಹತ್ರೀ…ಗಾಡಿ…’ ಅಂತಂದಾಗ ಅವು ಸಣ್ಣಗೆ ನಡುಗಿದ್ದ… ಚೂರು ಭಯ ಇತ್ತು… ಅಫ್‌ಕೋರ್ಸ್ ನನ್ಗೂ ಸ್ವಲ್ಪ ಇತ್ತು. ಆದ್ರೂ ನನ್ನ ಸ್ಕೂಟಿಯ ಹಿಂದೆ ಕೂತಿರೋ ಹುಡುಗನ ಜತೆ ಗಂಟೆಗಟ್ಟಲೆ ಮಾತಾಡಿದೀನಿ. ಮುತ್ತುಗಳು ಟ್ರಾನ್ಸ್‌ಫಾರ್ ಆಗಿದಾವೆ. ಆದ್ರೆ ಯಾಕೋ ಅದೊಂಥರ ರೀತಿಯ ಅನುಭೂತಿ ಎದುರಿಗಿದ್ದಾಗ!
ಅವು ನನ್ನ ಸ್ಕೂಟಿ ಹತ್ತಿದ ಕೂಡ್ಲೇ ನಾನು ಸ್ಕೂಟಿಯ ಕಿವಿ ಹಿಂಡಿದೆ. ಅದು ಎಲ್ಲಿಗೆ ಹೋಗಬೇಕೋ ತೋಚದೆ ಲೆಫ್ಟ್, ರೈಟ್ ಕಡೆಗೆ ವಾಲತೊಡಗಿತು. ಕುಡಿದವರಂತೆ! ಎಲ್ಲಿಗೆ ಅಂತ ನನ್ನ ‘ಸವಾರಿ’ ಪ್ರಶ್ನೆ ಮಾಡಿದಹಾಗಿತ್ತು.
ನನಗಾದ್ರೂ ಏನು ಗೊತ್ತು? ಧೈರ್ಯದಿಂದ ಪೂರ್ತಿಯಾಗಿ ಕಿವಿ ಹಿಂಡಿದೆ ಅಷ್ಟೆ. ನ”ಬ್ಬರನ್ನು ಹೊತ್ತ ಸ್ಕೂಟಿ ಇದೊಳ್ಳೆ ‘ಸವಾಸ’ ಆಯ್ತಲ್ಲ ಇವರ್‍ದು. ‘ಎಲ್ಲಿಗೆ’ ಅಂತ ಗೊತ್ತಿಲ್ಲ, ಆದ್ರೂ ಹೋಗಬೇಕು. ‘ನನ್ನ ಕರ್ಮ’ ಎಂದು ಗೊಣಗ್ತಾ, ಹೊಗೆ ಬಿಡುತ್ತಾ ಓಡಲು ಶುರುಮಾಡಿತು.
ನನ್ನ ಹಿಂದೆ ಡಾಲಿ ಕೂತಿದ್ದ. ಗಾಳಿಯಲ್ಲಿ ಹಾರಾಡುತ್ತ, ತೇಲುತ್ತಿದ್ದ ನನ್ನ ವೇಲು ‘ನನ್ನ’ವನ ಮುಖಕ್ಕೆ ಬಡಿಯುತ್ತಿತ್ತು. ಅದನ್ನು ಹಿಡಿದು ನಮಿಬ್ಬರ ಮಧ್ಯದ ಜಾಗದಲ್ಲಿ ಇಡುತ್ತಿದ್ದ. ಆದ್ರೆ ನನ್ನ ಕೂದಲು ಮಾತ್ರ ಪದೇ ಪದೇ ಡಾಲಿಯ ಮುಖವನ್ನು ಸ್ಪರ್ಶಿಸಿ ಸಂತೋಷಪಡುತ್ತಿತ್ತು. ಡಾಲಿ ಕೈಗಳಿಂದ ತನ್ನ ಮುಖವನ್ನು ಪ್ರತಿ ಬಾರಿ ಕೈ ಅಡ್ಡ ಮಾಡಿ ಸರಿಸಿಕೊಳ್ಳುತ್ತಿದ್ದ.
ರೋಡ್ ಅಂದ್ಮೇಲೆ ಹಂಪ್ಸ್, ಟ್ರಾಪಿsಕ್ ಎದ್ರಿಗೆ ಬರೋ ಗಾಡಿಗಳು ಎಲ್ಲವೂ ಇದ್ದವು. ಎದ್ರಿಗೆ ಬಂದ ಗಾಡಿ ನನ್ನ ಸ್ಕೂಟಿಯನ್ನು ಗುದ್ದಲು ಬಂದಿತ್ತು. ಸ್ವಲ್ಪದ್ರಲ್ಲೇ ಟಚ್ ಆಗೋದು ಮಿಸ್ ಆಗಿತ್ತು. ಅದ್ರಲ್ಲಿ ನನ್ನ ತಪ್ಪಿತ್ತು. ಲೆಫ್ಟ್‌ಗೆ ಹೋಗೋದು ಬಿಟ್ಟು ರೈಟ್ ಸೈಡ್ ಕಡೆಗೆ ಸ್ವಲ್ಪ ವಾಲಿತ್ತು. ನನ್ನ ಸ್ಕೂಟಿ ಎದುರಿನ ಗಾಡಿಗೆ ಕಿಸ್ ಮಾಡೋ ಚಾನ್ಸ್ ಸ್ವಲ್ಪದ್ರಲ್ಲೇ ಮಿಸ್ಸಾಗಿತ್ತು. ಆ ಗಾಡಿಯ ಸವಾರ ‘ಇಬ್ರೂ ಸಾಯೋಕೆ ಹೋಗ್ತಿದಿರಾ?’ ಎಂದು ಜೋರಾಗಿ ನಮ್ಗೆ ಕೇಳಿಸುವಂತೆ ಬೈದ.
ಅಲ್ಲಿವರ್‍ಗೆ ನಗ್ತಾ ಕೂತಿದ್ದ ಡಾಲಿ ಹುಡುಗನಿಂದ ನನ್ಗೆ ‘ಗಾಡಿ ನಿಲ್ಲಿಸು’ ಎಂಬ ಆದೇಶ ಬಂತು.
ನಾನು ‘ಯಾಕೆ?’ ಅಂತ ಒಂದೂ ಪ್ರಶ್ನೆ ಮಾಡ್ದೆ ಸುಮ್ಮನೆ ಲೆಫ್ಟ್‌ಸೈಡಿನಲ್ಲಿ ಸ್ಕೂಟಿ ನಿಲ್ಲಿಸಿದೆ. ಅವು ಮುಂದೆ ಕೂಡು’ ಎಂದ. ತಾನೇ ಗಾಡಿ ತೆಗೆದುಕೊಂಡ. ಆಗ ಸ್ಕೂಟಿ ನನ್ನನ್ನು ನೋಡಿ ಮುಸಿಮುಸಿ ನಗ್ತಿದೆ ಅನಿಸ್ತಿತ್ತು.
ಅವು ನನ್ನ ಸ್ಕೂಟಿಯನ್ನು ಬಹಳ ಜೋರಾಗಿಯೇ ಕಿ” “ಂಡಿಬಿಟ್ಟ. ಆದರೆ ರ್‍ಯಾಶ್ ಆಗಿ ಅಲ್ಲ! ಸ್ವಲ್ಪ ಕೋಪವಿತ್ತು (ಹುಡುಗರಿಗೆ ಇರಬೇಕಾದ್ದೆ!) ಆ ಕ್ಷಣ ‘ಈ ಹುಡ್ಗ ನನ್ಗೆ ಸುಪರ್‍ಬ್!’ ಅನಿಸಿತು. ಆದ್ರೆ ಸ್ವಲ್ಪ ‘ಕುಳ್ಳ’ ಅಂತನಿಸಿತು. ಅದೇನೋ ಖು… ಅದೇನೋ ಮಾಯೆ… ಅದೇನೇನೋ… ಸುಮ್ಮನೆ ಹಾಗೇ ಒಂದು ‘ಲಾಂಗ್ ಡ್ರೈವ್’ ಮಾಡಬೇಕೆನಿಸಿತು. ಅವು ಗಾಡಿ ಓಡಿಸುತ್ತಿದ್ರೆ ನನ್ಗೆ ಭಯ ಆಗ್ತಿದ್ದಿಲ್ಲ. ಸುಮ್ಮನೆ ಹಾಗೆ ಅವನನ್ನು ಬಾಚಿ ಮಲಗಿಬಿಡಲಾ ಅಂತ ನನ್ನ ‘ಕಳ್ಳ ಮನಸು’ ಗೀತೆ ಹಾಡಲಾರಂಬಿsಸಿತು.
‘ಏನಾದ್ರೂ ಮಾತಾಡ್ರಿ…’ ಎಂದು ವರಾತೆ ತಗ್ದ… ನಾನು ಸು”ದ್ದೆ.
‘ಎಲ್ಲಿಗೆ ಹೋಗಬೇಕೋ ಅದನ್ನಾದ್ರೂ ಹೇಳ್ರಿ…’ ಅಂತ ತಿರುಗಿ ತಿರುಗಿ ಕೇಳ್ತಿದ್ದ.. ಆ ರೀತಿ ಕೇಳ್ತಿದ್ದಾಗಲೆಲ್ಲಾ ನಾನು ತುಂಬಾ ಹತ್ರದಿಂದ ಒಂದೂ ಪಿಂಪಲ್ಲು ಇಲ್ಲದ ಡಾಲಿ ಕೆನ್ನೆ ನೋಡಿ ಅಸೂಯೆಯಾಗುತ್ತಿತ್ತು. (ಇವನ್ದು ಹುಡುಗಿ ರೀತಿ ಸಾಫ್ಟ್ ಮುಖ ಅಂತಂದುಕೊಂಡೆ) ಅವು ಮಾತಾಡ್‌ಸಿತಿದ್ರೆ ಅವ್ನ ಮೋಸಂಬಿ ಕೆನ್ನೆ ಕರೆಕ್ಟಾಗಿ ನನ್ನ ತುಟಿ ಮುಂದೇನೇ “ಹರಿಸುತ್ತಿತ್ತು. ಆಗ ನಾನು ‘ಮುತ್ತು ಕೊಟ್ಟು ಬಿಡ್ಲಾ’ ಅಂತ ಕಳ್ಳ ಮನಸು ಪಿಳ್ಳೆ ನೆವ ಹುಡುಕುತ್ತಿತ್ತು. ನನ್ಗೆ ನಾನೇ ತಲೆ ಬಡಿದುಕೊಂಡೆ. ಬೈದುಕೊಂಡೆ.
ನನ್ನ ಹುಡುಗ ಇನ್ನು ಕೇಳದೇ ಹೋದ್ರೆ ‘ಲಾಸ್’ ಆಗುತ್ತೆ ಅಂದುಕೊಂಡು ಕೇಳಿಯೇಬಿಟ್ಟ.
‘ಕೊಡ್ರೀ… ಕೊಟ್ಟುಬಿಡ್ರೀ…’ ಎಂದು ಪೀಡಿಸಲು ಆರಂಬಿsಸಿದ, ಡ್ರೈವ್ ಮಾಡ್ತಲೇ…
ನನ್ಗೆ ಒಳಗೊಳ್ಗೆ ಸಂತೋಷ… ಆದರೆ ಹೊರಗಡೆ ದೊಡ್ಡ ಗಂಬಿsರತೆ, ಒಳಗೊಳ್ಗೆ ಸಂತಸದ ನಗು. ಮನಸು ಕೊಡಲು ಒಪ್ಪಿಬಿಟ್ಟಿತು. ಸಾಲು ಸಾಲು ಮುತ್ತುಗಳು ಸುರಿಮಳೆಗೈಯಬೇಕೆನಿಸಿತ್ತು. ಸಾಧ್ಯವಾದರೆ ‘ಮೊಸಂಬಿ’ಯನ್ನು ತಿಂದುಬಿಡಬೇಕೆಂದು ಕೂಡ ಅನಿಸ್ತು.
ಕೊನೆಗೆ ತುಂಬಾ ಡೀಸೆಂಟ್ ಆಗಿ ಒಂದು ಹೂ ಮುತ್ತನ್ನು ಡಾಲಿ ಕೆನ್ನೆಗೆ ಅರ್ಪಿಸಿದೆ. ಉಹುಂ… ಇಲ್ಲ… ಅವನಿಗೆ ಸಮಾಧಾನ ಆಗ್ತಿಲ್ಲ. ‘ಸಾಲದು’ ಎಂದ. ಇನ್ನು ಬೇಕು… ಇನ್ನೊಂದೇ ಒಂದು… ಎಂದು ಪದೇ ಪದೇ ಪದೇ ಪೀಡಿಸಲು ಶುರುಮಾಡಿದ. ಆತನ ರಚ್ಚೆಗೆ ಮನ ಮೌನವಾಗಿ ಸ್ಪಂದಿಸಿ ಸುರಿಮಳೆಗೈದೆ. ಆಗ ‘ಡಾಲಿ’ ಎಲ್ಲೋ ತೇಲಿಹೋದ ಗುಂಗಲ್ಲಿದ್ದ.
‘ಇದೆಲ್ಲ’ ನಡೆತೀರೋದು ನಿಜನಾ? ಅಂತ ಉದ್ಗರಿಸಿದ. ನಾನು ಕೂಡ್ಲೇ ಡಾಲಿ ಕೈ ಚಿವುಟಿದೆ… ‘ಅಮ್ಮಾ…’ ಅಂತ ಚೀರಿದ. ಮತ್ತೆ ಇನ್ನು ಸ್ವಲ್ಪ ಜೋರಾಗಿಯೇ ಚಿವುಟಿದೆ. ‘ಮ್ಮಾ…’ ಎಂದು ಜೋರಾಗಿ ಚೀರಿದ. ಹೂಂ. ಇದು ನಿಜ್ಜ. ಕನಸಲ್ಲ. ನಾನು ನೋಡ್ತಿರೋದು, ಕಾಣ್ತಿರೋದು ‘ಸತ್ಯ’ ಎಂದು ಮಂಗನಂತೆ ಜೋರಾಗಿ ಚೀರಾಡಿದ.
ಮಾತಾಡ್ತಾ, ಮಾತಾಡ್ತಾ, ತನ್ನ ಬಗ್ಗೆ, ತನ್ನ ಮನೆ ಬಗ್ಗೆ, ಮನೆಯವರ ಬಗ್ಗೆ, ಮೊದಲ ಬಾರಿ ನಮಿಬ್ಬರ ಪರಿಚಯ, ಫಾರ್ವಡ್ ಮೆಸೇಜ್‌ಗೆ ನಾನು ಅಚ್ಚರಿಯೆಂಬಂತೆ ರೆಸ್ಪಾನ್ಸ್ ಮಾಡಿದ್ದು…, ಪ್ರೀತಿ ಶುರುವಾದ ರೀತಿ, ಹೀಗೆ ಇಬ್ರೂ ಪರಸ್ಪರ ಸ್ಕೂಟಿ ಡ್ರೈವ್ ಮಾಡ್ತಲೇ ಮಾತಾಡಿಕೊಂಡೆವು!
ಹೀಗೆ ಮಾತಾಡ್ತ… ಮಾತಾಡ್ತ… ಸಿಟಿಂದ ಸುಮಾರು ಅರವತ್ತು ಕಿ.ಮಿ. ದೂರ ಬಂದಿದ್ದೇವೆ. ನಾನು ಹೋಗಬೇಕು ಅಂದುಕೊಂಡಿದ್ದ ಬೆಟ್ಟ ದಾರಿ ತಪ್ಪಿ ಹೋಗಿತ್ತು. ಆಗ ‘ಮೊಸಂಬಿ’ ಹುಡುಗ ರೊಳ್ಳಿ ತೆಗೆಯಲು ಶುರು ಮಾಡಿದ. ಸ್ಕೂಟಿಯ ‘ಕಿವಿ ಹಿಡಲು’ ಈಗ ನನ್ನಿಂದ ಆಗ್ತಿಲ್ಲ ಎಂದ. ‘ನೀನೇ ಡ್ರೈವ್ ಮಾಡು’ ಅಂದ.
ಈ ರೀತಿ ರೊಳ್ಳಿ ತೆಗೀಲಿಕ್ಕೆ ಒಂದು ಕಾರಣವೂ ಇತ್ತು.
ಅದೇನೆಂದ್ರೆ. ಗಾಡಿಯಲ್ಲಿ ಬರುವಾಗ ನಾನು ಒಂದು ಸಣ್ಣ ತಪು ಮಾಡಿಬಿಟ್ಟಿದ್ದೆ. ಸ್ಪೀಡ್ ಬ್ರೇಕರ್‌ನಲ್ಲಿ ನಾನು ಎಲ್ಲಿ ಬೀಳ್ತೀನೋ ಎಂಬ ಭಯದಲ್ಲಿ ಆಕಸ್ಮಿಕವಾಗಿ ಅವನನ್ನು ಅಪ್ಪಿಕೊಂಡುಬಿಟ್ಟೆ. ಸ್ಪೀಡ್ ಬ್ರೇಕ್ ಹೋದ ನಂತರವೂ ಸ್ವಲ್ಪ ಹೊತ್ತು ಹಾಗೆಯೇ ಇದ್ದೆ! ಅದೇನೋ ಒಂದು ರೀತಿಯ ದಿವ್ಯ ಅನುಭವ. ಅದೆಷ್ಟೋ ಧೈರ್ಯ ಆಗ ನನ್ನಲ್ಲಡಗಿತ್ತು. ಅಪ್ಪಿಕೊಂಡಾಗ ಮನಸಿಗೆ ಹೆಚ್ಚು “ತವೆನಿಸುತ್ತಿತ್ತು.
‘ನೀನೇ ಡ್ರೈವ್ ಮಾಡು’ ಎಂದು ಪೀಡಿಸಲು ಶುರು ಮಾಡಿದ.
ಕೊನೆಗೆ ಒಲ್ಲದ ಮನಸ್ಸಿನಲ್ಲಿ ನಾನೇ ಸ್ಕೂಟಿಯನ್ನು ತೆಗೆದುಕೊಂಡೆ. ಬಂದ ದಾರಿಗೆ ‘ಯು ಟರ್ನ್’ ತೆಗೆದುಕೊಂಡೆ. ವಾಪಾಸು ಬರುವಾಗ ಅವನು ಸುಮ್ಮನಿರಬೇಕಾ? ಹೇಳ್ದೇ-ಕೇಳ್ದೇ ಅಪ್ಪಿಕೊಂಡ! ಗಟ್ಟಿಯಾಗಿ. ಉಸಿರುಗಟ್ಟುವಂತೆ! ಖುಯಾಯ್ತು. ಗಾಬರಿಯಾಯ್ತು. ಆಶ್ಚರ್ಯವಾಯ್ತು. ನನ್ನ ಗಿಡ್ಡುಗೆ ಅದೆಲ್ಲಿಂದ ಧೈರ್ಯ ಬಂತೆಂದು ಆಶ್ಚರ್ಯಪಟ್ಟೆ.
ಹೊರಗೆ ರೇಗಿದೆ…
ಮುತ್ತು ಕೊಟ್ಟ…
‘ಚೀ ಕಳ್ಳ’ ಎಂದೆ.
‘ಬಿಡು ಬಿಡು’ ಎಂದು ಗೋಗರ್‍ದೆ.
ಮತ್ತೊಮ್ಮೆ ನಾನು ಸ್ಕೂಟಿ ಕೆಡವಲು ಹೋದೆ. ಕೊನೆಗೆ ಆತನೇ ಗಾಡಿ ಓಡಲಾರಂಬಿsಸಿದ. ಆಗಂತೂ ಸುಮ್ಮನೆ ಅವ್ನ ಬೆನ್ನಿಗೆ ನನ್ನ ಕೆನ್ನೆಯನ್ನು ಇಟ್ಟು ‘ಮಬ್ಬುನಿದ್ದೆ’ ಮಾಡಲು ಶುರುಮಾಡಿದೆ. ಆಗ ಅದೇನೋ ಸಾವಧಾನ.
‘ಈ ಜೀವ’ ನನ್ನ ಜೊತೆ ಕಡೇ ತನಕ ಇರುತ್ತಾ…?!
ನನ್ನನ್ನು ಈ ರೀತೀನೇ ಸಲುಹುತ್ತಾ…?! ಅಂತ ಮನಸಿಗೆ ಪ್ರಶ್ನೆ ಮಾಡುತ್ತಾ ಡಾಲಿ ಮಾತುಗಳಿಗೆ ಉತ್ತರ ಕೊಡುತ್ತಾ ಹಾಯೆನಿಸುವಂತೆ ಅವ್ನ ಬೆನ್ನ ಮೇಲೆ ಮಲಗಿದೆ. ಕೊನ್ಗೆ ಸಿಟಿಗೆ ಬರುವಷ್ಟರ ಹೊತ್ತಿಗೆ ರಾತ್ರಿ ಒಂಬತ್ತು ಗಂಟೆ. ಇವೆಲ್ಲವುಗಳ ಮಧ್ಯೆ ನಾನು ಒಂದು ಪ್ರಶ್ನೆ ಮಾಡಿದ್ದೆ.
‘ಬೆಂಗಳೂರು ಹುಡುಗೀರು ನಿನ್ನ ಪ್ರಕಾರ ಎಂತಹವರು? ನನ್ನನ್ನು ಬಿಟ್ಟು!’
ಡಾಲಿ ರೆಡಿಮೇಡ್ ಆನ್ಸರ್ ಅನ್ನುವಂತೆ ‘ಡೈರೆಕ್ಟ್ ಪಿಕ್‌ಪಾಕೆಟರ್‍ಸ್’, ‘ಓಪನ್ ಪಿಕ್‌ಪಾಕೆಟರ್‍ಸ್’ ಅಂತಂದ.
ನಕ್ಕು ಸುಮ್ಮನಾದೆ. ಆದರೆ ನೀನು ನನ್ನ ‘ಮುದ್ದು ಹುಡುಗಿ’ ಎಂದ ಗಿಡ್ಡು ಡಾಲಿ.
ನಾನೇ ಡಾಲಿ ಉಳಿದುಕೊಂಡಿದ್ದ ಫ್ರೆಂಡ್ಸ್ ರೂಮಿಗೆ ಡ್ರಾಪ್ ಮಾಡಿಬಂದೆ. ಮನೆಗೆ ಬಂದಾಗ ನನ್ನ ಹತ್ರ ‘ನನ್ನವನು’ ಕೊಡಿಸಿದ್ದ ‘ಸಖಿ’ ತೆಲುಗು ಮೂವಿ ಡಿವಿಡಿ, ಅಡಿಗನ ‘ವೈಟ್‌ಟೈಗರ್’ ಪುಸ್ತಕ, ನನ್ಗೆ ಇಷ್ಟವಾದ ಕಾಟನ್ ‘ಪಂಜಾಬಿ ಡ್ರೆಸ್’ ಮತ್ತು ತಲೆಯಲ್ಲಿ ಮುಡಿದುಕೊಂಡಿದ್ದ ‘ದುಂಡುಮಲ್ಲಿಗೆ ಹೂ…’
ಇನ್ನೇನು ಬೇಕು…
ಇದು ನಮಿಬ್ಬರ ‘ಪ್ರೀತಿ’ಯ ಮೊದಲ ಶಾಪಿಂಗ್… ಅಂತ ತುಂಬ ಸಂತಸಪಟ್ಟೆ..
ಮತ್ತೆ ಅಂದು ರಾತ್ರಿನೇ ಸ್ಟಾರ್‍ಟ್ ಆಯ್ತು ಮೆಸೇಜಿಂಗ್. ಚಾಟ್ ಮಾಡ್ತಾ ಮಾಡ್ತಾ ಮಲಗಿದ್ದೇ ಗೊತ್ತಾಗ್ಲಿಲ್ಲ…. ಮರುದಿನ ಎದ್ದೇಳಲಿಕ್ಕಾಗುತ್ತಿಲ್ಲ. ಕಣ್ಣು ಬಿಡಕ್ಕಾಗ್ತಿಲ್ಲ… ಮೊಬೈಲ್‌ನಲ್ಲಿ ಮೆಸೇಜುಗಳ ರಾಶಿ… “ಸ್‌ಕಾಲ್‌ಗಳು ಅದ್ಟೆದ್ದವೋ… ನಿನ್ನೆಯ ಧೂಳು, ಡಸ್ಟ್, ಟ್ರಾಪಿsಕ್ಸ್, ಹೊಗೆ… ಎಲ್ಲ ಸೇರಿ ನನ್ನನ್ನು ಹೈರಾಣ ಮಾಡಿತ್ತು. ಪಾಪ ನನ್ನ ಹುಡುಗ ಬೆಳಗ್ಗೆಂದ “ಲ”ಲ ಅಂತ ಒದ್ದಾಡಿದ್ದ ಮೆಸೇಜ್‌ನಲ್ಲಿ… “ಸ್‌ಕಾಲ್‌ನಲ್ಲಿ…
ಸ್ವಲ್ಪ ಸಮಾಧಾನ ಅನಿಸಿ ಪೂರ್ತಿ ಕಣ್ಣುಬಿಟ್ಟಾಗ ಮಧ್ಯಾಹ್ನ ಹನ್ನೆರಡು. ಜ್ವರ, ನೆಗಡಿ, ಶೀತ, ಕೆಮ್ಮು ಎಲ್ಲವೂ ಒಮ್ಮೆಗೆ ಇಡೀ ಅದರ ಫ್ರೆಂಡ್ಸ್ ಗ್ರೂಫ್ ನನ್ನನ್ನು ಅಟ್ಯಾಕ್ ಮಾಡಿತ್ತು. ಸಂಜೆ ಫೋನ್ ಮಾಡಿ “ಚಾರ ತಿಳಿಸಿದೆ. ಕುಪಿತಗೊಂಡಿದ್ದ ಪ್ರಾಣಿ ತಂಣಗಾತು… ‘ಸರಿ ಇವತ್ತು ಸಿಗೋದಿಲ್ವಾ?!’ ಎನ್ನುವ ಬೇಜಾರು ಕಾಡುತ್ತಿತ್ತು ನನ್ನ ‘ಡಾಲಿ’ಗೆ.
‘ನೀನು ಇವತ್ತೇ ಊರಿಗೆ ಹೋಗುಬಿಡು’ ಎಂದೆ. ಅವನು ‘ಕೋಲೆಬಸವ’ ರೀತಿ ಹೇಳಿದ ಮಾತಿನಂತೆ ಅಂದು ರಾತ್ರಿಯೇ ಸಿಟಿ ಬಿಟ್ಟ. ನನ್ನ ನೋಡ್ದೇನೆ!
ಊರಿಗೆ ಹೋಗಾಯ್ತು.. ಮೆಸೇಜ್… ಫೋನ್‌ನಲ್ಲಿ ಅದ್ರಲ್ಲೂ ರಾತ್ರಿಯಾತಂದ್ರೆ ‘ಮುತ್ತು’ ಬೇಕು ಎಂದು ರಚ್ಚೆ “ಡಿಯಲಾರಂಬಿsಸಿದ. ನನ್ಗೆ ಇದು ಮೊದಲು ‘ಸರಿ’ ಅನಿಸುತ್ತಿತ್ತು.
ಆಮೇಲೆ ‘ಮುತ್ತಿಲ್ಲದೇ ಮಾತೇ ಇಲ್ಲ’ ಎನ್ನುವ ರೀತಿ ಬಂತು.
‘ಇಲ್ಲ’ ಇದು ಸರಿಯಲ್ಲ ಅಂದ್ರೂ, ‘ಸರಿ. ಓಕೆ.’ ಅನ್ನೋದು ಮತ್ತೆ ಅದೇ ರಾಗ… ಕೊನೆಗೆ ಐದು ದಿನದವರೆಗೆ ಕಾದು ಇನ್ನು ‘ಇದು’ ನನಗೆ ಸರಿಯೆನಿಸುತ್ತಿಲ್ಲ ಎಂಬ ಭಾವನೆ ಶುರುವಾಗತೊಡಗಿತು.
‘ಇದು ಯಾಕೋ ನನಗೆ ಅಟ್ರ್ಯಾಕ್ಶನ್ ಅನ್‌ಸ್ತಿದೆ… ನಿಜವಾಗ್ಲೂ’ ಅಂತ ಮೆಸೇಜ್ ಮಾಡಿಬಿಟ್ಟೆ. ನಾನು ಈ ರೀತಿ ಮೆಸೇಜ್ ಮಾಡಲು ಇದೊಂದೇ ಕಾರಣ ಆಗಿರಲಿಲ್ಲ.
ನಾನು ಹುಷಾರಿಲ್ಲದಾಗ ನನ್ನ ಅಪ್ಪ, ಅಮ್ಮ, ಮನೆಯವರು ಪ್ರೀತಿಸಿದ ರೀತಿ… ಅವ್ರ ಪ್ರೀತಿಯನ್ನ ಎಲ್ಲಿ ಕಳೆದುಕೊಳ್ಳುತ್ತೀನೇನೋ ಎಂಬ ಭಯ, ಮನೆ ಮರ್‍ಯಾದೆ ಎಲ್ಲಿ ಹಾಳಾಗುತ್ತೆ… ಅಕ್ಕನ ಸಂಸಾರಕ್ಕೆ ನಾನು ಮುಂದೆ ತೊಂದರೆಯಾಗಬಹುದಾ…? ನನ್ನ ಅಣ್ಣ ಯಾವ ಅವತಾರ ತಾಳಬಹ್ದು…? ಹೀಗೆ ಈ ರೀತಿಯ ಯೋಚ್ನೆಗಳ ಮಧ್ಯೆ ನನ್ನ ಅತ್ತೆ ಮಗ ನನ್ನನ್ನು ಮದುವೆಯಾಗುತ್ತೇನೆ ಅಂತ ಮನೆಗೆ ಹೇಳಿ ಕಳುಹಿಸಿದ ಸುದ್ದಿ… ಎಲ್ಲವೂ ಒಟ್ಟಿಗೆ ಕೂಡಿಬಂದಿದ್ದವು.
ಯಸ್. ‘ಇದು’ ಅಟ್ರ್ಯಾಕ್ಶನ್ನೇ ಅಂತ ಮನಸನ್ನು ಗಟ್ಟಿಮಾಡಿಕೊಂಡೆ. ‘ಪ್ರೀತಿ’ ಎಂಬ ಬರೀ ಎರಡಕ್ಷರದ ತೂತಿನ ದೋಣಿಗೆ ಬೀಳಬಾರದು ಎಂದು ಡಿಸೈಡ್ ಮಾಡ್ದೆ. ‘ಸ್ವಾರ್ಥಿ’ಯಾದೆ… ಇಷ್ಟು ದಿನದ ಪ್ರೀತಿಯನ್ನು, ಕನ್‌ಸರ್‍ನ್, ಚಿಲುಮೆ ಎಲ್ಲವನ್ನು ಕೂಡ್ಲೇ ‘ಬಿಟ್ಟುಬಿಡು’ ಎಂದು ನನ್ನನ್ನು ನಾನು ಮನವರಿಕೆ ಮಾಡಿಕೊಂಡೆ. ಮಾಡಿಕೊಳ್ಳುತ್ತ ಅತ್ತೆ… ಅತ್ತುಬಿಟ್ಟೆ…. ಅಳುಮುಂಜಿಯಾದೆ. ಅಳು ಸಹಿಸದ ಆ ಹುಡುಗನ ಮುಂದೆ ಫೋನ್‌ನಲ್ಲಿ ‘ಡಾಲಿ… ಐ ಮಿಸ್ ಯು, ಡಾಲಿ…’ ಮತ್ತೆ ಅಳು… ಅಳು…. ಅಷ್ಟೆ…. ಕೆನ್ನೆಗಳು ಇಡಿಯಾಗಿ ಅಳುವಿನ ಹನಿಂದ ಹರಿದುಹೋತು.
ಅವನಿಂದ ‘ಅಳಬೇಡ ಪ್ಲೀಸ್’ ಎಂಬ ಮಾತೇ ಪದೇ ಪದೇ ಹೊರಬರುತ್ತಿತ್ತು.
ಆಗ ಹುಡುಗ
“ಬಯದ ನೆರಳಲ್ಲಿ ಬದುಕಬೇಡ
ಬಯಸಿದ ಪ್ರೀತಿಯ ಬಿಡಬೇಡ…
ಆದರೂ
ಸೋಲು ಗೆಲುವಿನ ಈ ಬಾಳಿನಲ್ಲಿ ನೋವಿಲ್ಲದ ದಿನಗಳೇ ನಿನಗಿರಲಿ…
ಯಾವಾಗಲೂ ನಗುತಿರು…
ಮತ್ತಾವುದೇ ಕಾರಣಕ್ಕೂ ಪ್ಲೀಸ್ ಅಳಬೇಡ…
‘ನಿನ್ನ ಎಲ್ಲ ತೀರ್ಮಾನಗಳಿಗೆ ನನ್ನ ಒಪ್ಪಿಗೆ'” ಎಂಬ ಮೆಸೇಜ್ ಬಂತು.
ಅದು ನನ್ನ ಡಾಲಿ ಮನಸ್ಸು ಒಪ್ಪಿಕೊಂಡಿದ್ದು ಆಶ್ಚರ್ಯಕರ ರೀತಿ. ಆಗಲೇ ನನಗೆ ‘ಕಸಿ”ಸಿ’ಯಾಗಿದ್ದು. ಆತನಿಗೆ ಮೆಸೇಜ್, ಫೋನ್ ಮಾಡದೇ ಕಾಲ ನೂಕಲು ಶುರು ಮಾಡಿದೆ. ಊಹುಂ ಆಗಲಿಲ್ಲ. ಬಿಕಾಜ್ ಆಗ ನಾನು ಅವನನ್ನು ಹೆಚ್ಚಾಗಿ ಪ್ರೀತಿಸಲಾರಂಬಿsಸಿದೆ. ನಿಜವಾಗಿಯೂ ಪ್ರೀತಿಸುತ್ತಿದ್ದೆ.
ಅಟ್ರ್ಯಾಕ್ಶನ್ ಒಂದು ‘ನೆಪ’ವೇನೋ ಎಂದು ಆಗ ಮನಸು ಉಸಿರುಬಿಟ್ಟಿತು!
ಉಹುಂ. ಅವನನ್ನು ಬಿಟ್ಟಿರಲು ನನ್ನಿಂದ ಆಗದು. ಅವನಿಗೆ ಮೆಸೇಜ್ ಮಾಡಲು ಶುರು ಮಾಡಿದೆ. ಫೋನ್ ಮಾಡಿದೆ. ಯಾವುದಕ್ಕೂ ಅವನಿಂದ ಒಂದು ರಿಪ್ಲೈ ಇಲ್ಲ… ಅವು ನನ್ನನ್ನು ‘ಚೀಟರ್’ ಅಂದ. ‘ಐ ಹೇಟ್ ಯು ಅಂಡ್ ಗರ್ರ್‍ಸ್’ ಅಂದ. ಅವನಲ್ಲಿ ಇನ್‌ಡೈರೆಕ್ಟ್ ಆಗಿ ನಾನು ಸುಖಾಸುಮ್ಮನೆ ‘ದ್ವೇಷ’ದ ಬೆಂಕಿ ಹತ್ತಿಸಿಬಿಟ್ಟಿದ್ದೆ.
* * *
ಇದಿಷ್ಟು ಓದುವಷ್ಟರಲ್ಲಿ ಅಡುಗೆ ಮನೆಯ ಕುಕ್ಕರ್ ಜೋರಾಗಿ ಸೀಟಿ ಹೊಡೆಯುತ್ತಿತ್ತು. ಇದು ಎರಡನೆಯ ಸೀಟಿಯೋ ಅಥವಾ ಮೂರನೇ ಸೀಟಿಯೋ ಗೊತ್ತಾಗ್ಲಿಲ್ಲ. ಗಂಡ ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದ. ಮೂರು ತಿಂಗಳ ಪಾಪು ‘ಚಿನ್ನು’ ಮಲಗಿತ್ತು. ಏನೋ ಹುಡುಕಲು ಹೋಗಿ ಡೈರಿ ಸಿಕ್ತು. ಡೈರಿ ಮಧ್ಯದಲ್ಲಿದ್ದ ನಾಲ್ಕು ಪೇಜು ನನ್ನ ತಾರುಣ್ಯದ ಅಕ್ಷರಗಳು ಕಂಡವು. ನೋಡಿ ಹರಿದು ಹಾಕಲು ರೆಡಿಯಾದೆ. ಯಾಕೋ ಮನಸು ತಡೆಯಲಿಲ್ಲ. ಓದಿಬಿಟ್ಟೆ… ಪಾಪ ಆ ‘ಗಿಡ್ಡು ಡಾಲಿ’ ಈಗ ಎಲ್ಲಿದ್ದಾನೋ… ಬಹುಶಃ ಅವನಿಗೂ ಮದುವೆಯಾಗಿದೆಯಾ, ಆಗಿದ್ದರೆ ಎಷ್ಟು ಮಕ್ಕಳಿರಬಹುದು ಅಂತ ಅಂದುಕೊಳ್ಳುತ್ತಾ ಡೈರಿಗೆ ಕಡ್ಡಿ ಗೀಚಿದೆ…!!!
ಒಂದು ಚಿಗುರಿದ ಕತೆ ವ್ಯಥೆಯಂತೆ ಬೂದಿಯಾಗಿದ್ದು ನೋಡಿ ವಿಷಾದದ ನಗು ತುಟಿಯಂಚಲ್ಲಿ ತೇಲಿ ಕಣ್ಮರೆಯಾತು
Please follow and like us:
error