ಶರೀರಕ್ಕೆ ಸಾವುಂಟು ವಿಚಾರಕ್ಕಲ್ಲ -ಎಕ್ಕರನಾಳ

ಕೊಪ್ಪಳ: ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೬೬ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು. ಶಿಕ್ಷಕ ಡಬ್ಲೂ.ಎಚ್.ಎಕ್ಕರನಾಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ತಮ್ಮ ಸಂಗೋಳ್ಳಿ ರಾಯಣ್ಣ, ಬೆಂಕಿ ಚಂಡು ಎಂಬ ಕವಿತೆಗಳನ್ನು ಹಾಡುವ ಮೂಲಕ ಕವಿಸಮಯಕ್ಕೆ ವಿಶೇಷ ಮೆರಗು ನೀಡಿದರು, ಕವಿಸಮಯದ ಕವಿಗಳನ್ನುದ್ದೇಶಿಸಿ ಮೌಲ್ಯಯುತ ಮಾತುಗಳನ್ನಾಡಿದರು. ಸಾವು ಶರೀರಕ್ಕೆ ಹೊರತು ಮನುಷ್ಯನ ವಿಚಾರಕ್ಕಲ್ಲ, ವಿಚಾರಗಳು ಯಾವತ್ತೂ ಶಾಶ್ವತ ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ವಿಠ್ಠಪ್ಪ ಗೋರಂಟ್ಲಿ- ಸಾವು, ಎ.ಪಿ.ಅಂಗಡಿ- ಗಳಿಸಿದ ಆಸ್ತಿ, ಪುಷ್ಪಲತಾ ಏಳುಬಾವಿ- ಮತ್ತೆ ಬಂದು ಸ್ವಾತಂತ್ರ ದಿನ, ಶ್ರೀನಿವಾಸ ಚಿತ್ರಗಾರ- ಎಲ್ಲಿದೆ ಅಗಸ್ಟ್ ೧೫?, ರೇಣುಕಾ ಕರಿಗಾರ್- ಕ್ಷಮಿಸು, ಪುಷ್ಪಾವತಿ ಮೂಲಿಮನಿ- ಸೇಂದಿ,ಸರಾಯಿ, ಎನ್.ಜಡೆಯಪ್ಪ – ಚುಟುಕು, ಬಸವರಾಜ ಚೌಡಕಿ- ಚುಟುಕುಗಳು, ಮಾನಪ್ಪ ತಳವಾರ- ಶಾಹಿರಿಗಳು, ಶಾಂತಪ್ಪ ಬಡಿಗೇರ್- ನೆನಪಿನಂಗಳದಲ್ಲಿ, ಎಂ.ಡಿ.ಹುಸೇನ್- ಜಿಪುಣ ಕವನಗಳನ್ನು ವಾಚನ ಮಾಡಿದರು.
ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಕವಿಸಮಯದಲ್ಲಿ ವಾಚಿಸಿದ ಎಲ್ಲರ ಕವನಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತ ಅಧ್ಯಯನ ಶೀಲತೆಯಿಂದ ಕಾವ್ಯದ ಸಾಧ್ಯಾಸಾಧ್ಯತೆಗಳನ್ನು ಕಂಡುಕೊಂಡು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್‍ಯಕ್ರಮವನ್ನು ಎನ್.ಜಡೆಯಪ್ಪ ನಿರ್ವಹಿಸಿದರೆ ವಂದನಾರ್ಪಣೆಯನ್ನು ಶಿವಪ್ರಸಾದ ಹಾದಿಮನಿ ನೆರವೇರಿಸಿದರು. ಶಿವಾನಂದ ಹೊದ್ಲೂರ, ಸುರೇಶ ಮೇಟಿ, ಗಿರಡ್ಡಿ ಸೋಮರಡ್ಡೇರ್, ಬಸವರಾಜ ಸಂಕನಗೌಡ್ರು ಉಪಸ್ಥಿತರಿದ್ದರು.

Leave a Reply