ನ.೦೭ ಮತ್ತು ೦೮ ರಂದು ಬೃಹತ್ ಉದ್ಯೋಗ ಮೇಳ.

ಕೊಪ್ಪಳ,
ನ.೦೫ (ಕ ವಾ)  ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉದ್ಯೋಗ
ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ
ಹಾಗೂ ಕರ್ನಾಟಕ ವಾಣಿಜ್ಯೋದ್ಯಮ ಸಂಘ, ವಿಜಯಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ‘ಬೃಹತ್
ಉದ್ಯೋಗ ಮೇಳ’ ನ.೦೭ ಮತ್ತು ೦೮ ರಂದು ಎರಡು ದಿನಗಳ ಕಾಲ ವಿಜಯಪುರ ಜಿಲ್ಲೆಯ
ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಪಟ್ಟಣದಲ್ಲಿರುವ ವಿ.ವಿ.ಅಸೋಸಿಯೇಷನ್‌ನ ಶ್ರೀ
ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಲಿದೆ.
     ಖಾಸಗಿ
ಉದ್ಯೋಗದಾತರಿಗೆ ತಮ್ಮ ಸಂಸ್ಥೆಯಲ್ಲಿ ಇರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು
ಅರ್ಹ ಅಭ್ಯರ್ಥಿಗಳನ್ನು ಒದಗಿಸುವ ಹಾಗೂ ವಿವಿಧ ವಿದ್ಯಾರ್ಹತೆ ಹಾಗೂ ತರಬೇತಿ ಹೊಂದಿ
ಉದ್ಯೋಗ ಅರಸುತ್ತಿರುವ ಉದ್ಯೋಗಾರ್ಥಿಗಳಿಗೆ ಖಾಸಗಿ ರಂಗದಲ್ಲಿ ಉದ್ಯೋಗ ಅವಕಾಶ
ಕಲ್ಪಿಸುವುದು ಈ ಬೃಹತ್ ಉದ್ಯೋಗ ಮೇಳದ ಉದ್ದೇಶವಾಗಿದೆ. ಮೇಳದಲ್ಲಿ ಖಾಸಗಿ
ಉದ್ಯೋಗದಾತರನ್ನು ಹಾಗೂ ಉದ್ಯೋಗಾರ್ಥಿಗಳನ್ನು ಒಂದೇ ಸೂರಿನಡಿ ಸೇರಿಸಿ, ಪರಸ್ಪರರ
ಉದ್ದೇಶಗಳ ಸಫಲತೆಗೆ ಅನುಕೂಲ ಒದಗಿಸಲಾಗುವುದು. ಮೇಳದಲ್ಲಿ ಖಾಸಗಿ ರಂಗದ ಸುಮಾರು ೧೦೦
ಉದ್ಯೋಗದಾತರು ಭಾಗವಹಿಸಿ, ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂದರ್ಶನ
ನಡೆಸಿ, ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಎಸ್.ಎಸ್.ಎಲ್.ಸಿ ಉತ್ತೀರ್ಣ ಅಥವಾ
ಅನುತ್ತೀರ್ಣಗೊಂಡಿರುವವರು, ಪಿ.ಯು.ಸಿ, ಐ.ಟಿ.ಐ, ಡಿಪ್ಲೋಮಾ, ಜೆ.ಓ.ಸಿ ಹಾಗೂ ಇತರೆ
ತಾಂತ್ರಿಕ ಮತ್ತು ತಾಂತ್ರಿಕವಲ್ಲದ ಸರ್ಟಿಫಿಕೇಟ್ ಕೋರ್ಸುಗಳ ಶೈಕ್ಷಣಿಕ ಅರ್ಹತೆ
ಹೊಂದಿರುವ ಉದ್ಯೋಗಾರ್ಥಿಗಳು, ಪದವೀಧರರು, ಸ್ನಾತಕೋತ್ತರ ಪದವೀಧರರು, ತಾಂತ್ರಿಕ
ಪದವೀಧರರು, ವೃತ್ತಿಪರ ಪದವೀಧರರು ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸೂಕ್ತ
ಉದ್ಯೋಗಾವಕಾಶವನ್ನು ಪಡೆದುಕೊಳ್ಳುವಂತೆ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ
ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.
Please follow and like us:

Related posts

Leave a Comment