ಜಿಲ್ಲೆಯ ಬರ ಪರಿಸ್ಥಿತಿಯ ಪರಿಶೀಲನೆ

ಜಿಲ್ಲೆಯ ಬರ ಪರಿಸ್ಥಿತಿಯ ಪರಿಶೀಲನೆಗಾಗಿ  ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಪ್ರಾದೇಶಿಕ ನಿರ್ದೇಶಕ ಡಾ. ಸಿ. ಅನ್ಬಾಜ್‌ಗನ್, ಕೇಂದ್ರ ಜಲ ಆಯೋಗದ ಅಧೀಕ್ಷಕ ಅಭಿಯಂತರ ರಂಗಾರೆಡ್ಡಿ, ಯೋಜನಾ ಆಯೋಗದ ಡೆಪ್ಯುಟಿ ಅಡ್ವೈಸರ್ ರಾಜ್‌ಪಾಲ್ ಸಿಂಗ್ ಅವರನ್ನೊಳಗೊಂಡ  ಕೇಂದ್ರ ಬರ ಅಧ್ಯಯನ ತಂಡ ಶುಕ್ರವಾರ ಯಲಬುರ್ಗಾ ತಾಲೂಕಿನ ಇಟಗಿ, ಮಂಡಲಗಿರಿ, ಬಿನ್ನಾಳ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸಿತು.  ಬೆಂಗಳೂರಿನ ಕೃಷಿ ಇಲಾಖೆ ಜಂಟಿನಿರ್ದೇಶಕ ನಾರಾಯಣ ರೆಡ್ಡಿ, ಸಹಾಯಕ ಆಯುಕ್ತ ಶರಣಬಸಪ್ಪ, ಜಂಟಿಕೃಷಿ ನಿರ್ದೇಶಕ ಬಾಲರೆಡ್ಡಿ ಮುಂತಾದವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
Please follow and like us:
error