ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ಬೀದಿ ನಾಟಕ ಪ್ರದರ್ಶನ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ದೇವದಾಸಿ ಪುನರ್ವಸತಿ ಯೋಜನೆ ಹಾಗೂ ಸಮುದಾಯ ಸಾಂಸ್ಕೃತಿಕ ಕಲಾ ಸಂಸ್ಥೆಯ ಕಲಾ ತಂಡದವರಿಂದ ಶ್ರೀ ಕ್ಷೇತ್ರ ಹುಲಿಗಿ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸಾಮಾಜಿಕ ಅನಿಷ್ಠ ದೇವದಾಸಿ ಪದ್ದತಿ ನಿರ್ಮೂಲನೆ ಕುರಿತು ಹುಡುಗಾಟ-ಹುಡುಕಾಟ ಬೀದಿ ನಾಟಕ ಪ್ರದರ್ಶನ ಹಾಗೂ ಜಾಗೃತಿ ಗೀತೆಗಳ ಮೂಲಕ ಜನ ಜಾಗೃತಿ ಮೂಡಿಸಲಾಯಿತು.
ಸಮುದಾಯ ಸಾಂಸ್ಕೃತಿಕ ಕಲಾ ತಂಡದ ನಾಯಕ ಹಾಗೂ ಅಧ್ಯಕ್ಷ ವೈ. ಬಿ. ಜೂಡಿ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಬೀದಿ ನಾಟಕದಲ್ಲಿ ಕಲಾವಿದರಾದ ಶರಣಪ್ಪ ಬನ್ನಿಗೋಳ, ವೀರೇಶ ಹಿರೇಮಠ, ಪ್ರಕಾಶ ಗೊಂಡಬಾಳ, ಮಂಜುನಾಥ ಗೊಂಡಬಾಳ, ಲಲಿತಾ ಪುಜಾರ ಹಾಗೂ ಯಲ್ಲಾಲಿಂಗ ಅಭಿನಿಯಿಸಿದ್ದರು.
Please follow and like us:
error