fbpx

ಶಾಲೆ ಬಂದ್ ಮಾಡಿರುವ ಖಾಸಗಿ ಶಾಲೆಗಳ ಒಕ್ಕೂಟದ ನಿರ್ಧಾರ ಸರಿಯಲ್ಲ : ಎಸ್.ಎಫ್.ಐ

 ಕೊಪ್ಪಳ : ಖಾಸಗಿ ಶಾಲೆಗಳು ಕರೆ ಕೊಟ್ಟರಿವ ಬಂದ್ ಸರಿಯಾದುದ್ದಲ್ಲ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಆರೋಪಿಸಿದೆ. ಎಸ್.ಎಫ್.ಐ ಹಾಗೂ ಶಿಕ್ಷಣ ತಜ್ಞರ ಹೋರಾಟದ ಭಾಗವಾಗಿ ೨೦೦೯ ರಲ್ಲಿ ಜಾರಿಯಾದ ಮಕ್ಕಳ ಉಚಿತ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿ ಮಾಡುವಲ್ಲಿ ಖಾಸಗಿ ಶಾಲೆಗಳು ಮತ್ತು ಸರಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಕೇವಲ ೫೦% ಮಾತ್ರ ಈ ಕಾಯ್ದೆ ಜಾರಿಯಾಗಿದ್ದು ಈ ಅಂಕಿ ಅಂಶ ನೋಡಿದರೆ ಸರಕಾರ ಮತ್ತು ಖಾಸಗಿ ಶಾಲೆಗಳು ಯೋಜನೆಯನ್ನು ಜಾರಿ ಮಾಡುವಲ್ಲಿ ವಿಫಲವಾಗಿವೆ ಎಂಬುದನ್ನು ತೋರಿಸುತ್ತದೆ.
ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿ ಮಾಡುವದರ ಬದಲು ಸರಕಾರದ ಮೇಲೆ ಆಮಿಷದ ಹೆಸರಲ್ಲಿ ಒತ್ತಡ ಹೇರಿ ಒಂದು ವಾರಗಳ ಕಾಲ ಶಾಲೆಗಳನ್ನು ಬಂದ್ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿರುವುದು ಸರಿಯಾದ ಕ್ರಮವಲ್ಲ. ಖಾಸಗಿ ಶಾಲೆಗಳ ಬಾಲೋಂಗೋಚಿಯಾಗಿ ಕೆಲಸ ಮಾಡುತ್ತಿರುವ ಸರಕಾರ ಕಾಯ್ದೆಯ ಜಾರಿಗೆ ಕಾಳಜಿ ವಹಿಸುತ್ತಿಲ್ಲ. ಸರಕಾರ ಮತ್ತು ಖಾಸಗಿ ಶಾಲೆಗಳ ಕಿತ್ತಾಟದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ಕೂಡಲೆ ಖಾಸಗಿ ಶಾಲೆಗಳು ಬಂದ್ ನಿಂದ ಹಿಂದೆ ಸರಿದು ಶಾಲೆಗಳನ್ನು ಪುನರಾರಂಭ ಮಾಡಬೇಕು ಹಾಗೂ ಸರಕಾರ ಈ ಕಾಯ್ದೆಯನ್ನು ಸಂಪೂರ್ಣ ಜಾರಿ ಮಾಡಲು ಮುಂದೆ ಬರಬೇಕು ಇಲ್ಲದಿದ್ದರೆ ಎಸ್.ಎಫ್.ಐ ರಾಜ್ಯಾದ್ಯಾಂತ ಹೋರಾಟ ನಡೆಸಲಿದೆ ಎಂದು ಎಸ್.ಎಫ್.ಐ ಜಿಲ್ಲಾಧ್ಯಕ್ಷ ಗುರುರಾಜ್ ದೇಸಾಯಿ. ಜಿಲ್ಲಾ ಮುಖಂಡರಾದ ಸುಬಾನ್ ಸಯ್ಯದ್, ಯಮನೂರಪ್ಪ ಹೋಸಪೇಟೆ, ದೇವರಾಜ್ ನಾಯ್ಕರ್. ರಾಜೇಶ್ವರಿ, ಶಿವಕುಮಾರ್ ಸೇರಿದಂತೆ ಇತರರು ಎಚ್ಚರಿಸಿದ್ದಾರೆ.
Please follow and like us:
error

Leave a Reply

error: Content is protected !!