ನಿಂತಿದ್ದ ರೈಲಿನಲ್ಲಿ ಬೆಂಕಿ; ಇಬ್ಬರು ಸಜೀವ ದಹನ; ಏಳು ಮಂದಿಗೆ ಗಾಯ

 ಗುಲ್ಬರ್ಗ, ಅ.16: ನಿಂತಿದ್ದ ರೈಲಿನ ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಬ್ಬರು ಸಜೀವವಾಗಿ ದಹನಗೊಂಡು, ಏಳು ಮಂದಿ ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ಗುಲ್ಬರ್ಗ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಹೈದರಾಬಾದಿನಿಂದ ಬರುವ ಫಲಕ್‌ನಾಮ ಪ್ಯಾಸೆಂಜರು ರೈಲಿನಲ್ಲಿ ಈ ದುರಂತ ಸಂಭವಿಸಿದ್ದು, ಇಂದು ಮಧ್ಯಾಹ್ನ ಒಂದೂವರೆ ಸುಮಾರಿಗೆ ಗುಲ್ಬರ್ಗ ಸ್ಟೇಶನ್‌ಗೆ ರೈಲು ತಲುಪಿತ್ತು. ಬಳಿಕ ಅದು ಸೊಲ್ಲಾಪುರಕ್ಕೆ ತೆರಳವುದಿತ್ತು.
ಈ ಸಂದರ್ಭ ಬೋಗಿಯೊಂದರಲ್ಲಿ ಹಠಾತ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಬೋಗಿಯ ಒಳಗಿನ ಭಾಗ ಸುಟ್ಟು ಕರಕಲಾಯಿತೆನ್ನಲಾಗಿದೆ. ಇದರಿಂದಾಗಿ ಈ ಬೋಗಿಯೊಳಗಿದ್ದ ಇಬ್ಬರು ಸಾವನ್ನಪ್ಪಿದ್ದರೆ, ಏಳು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಎಸ್ಪಿ ಸಹಿತ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
Please follow and like us:
error