ದದೆಗಲ್‌ದ ಸ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

 ೧೬ ನವೆಂಬರ ರಂದು ದದೆಗಲ್‌ದ ಸ.ಹಿ.ಪ್ರಾ. ಶಾಲೆಯಲ್ಲಿ ಇನ್ನರ್ ವ್ಹೀಲ್  ವತಿಯಿಂದ ಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಮುಖ್ಯೋಪಾಧ್ಯಯನಿಯರಾದ ಲಲಿತಾ ಶಾಸ್ರ್ತಿಯವರು ವಹಿಸಿ ಕೊಂಡಿದ್ದರು. ಇನ್ನರ್‌ವ್ಹೀಲ್ ಸದಸ್ಯರಾದ ಡಾ. ರಾಧಾ ಕುಲಕರ್ಣಿ ಯವರು ಮಕ್ಕಳನ್ನು ಉದ್ದೇಶಿಸಿ ನೆಹರು ರವರ ಮಕ್ಕಳ ಪ್ರೀತಿಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು. ಇನ್ನೋರ್ವ ಸದಸ್ಯರಾದ ಸಾವಿತ್ರಿ ಮುಜುಮದಾರ ರವರು ಮಲಾಳ ಶಿಕ್ಷಣ ಪ್ರೇಮ ಹಾಗೂ ಹೋರಾಟದ ಬಗ್ಗೆ ಮಕ್ಕಳೀಗೆ ಉದಾಹರಣೆ ಮೂಲಕ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿದರು. ಇನ್‌ರ್‌ವ್ಹೀಲ್  ಅಧ್ಯಕ್ಷರಾದ ಪಾರ್ವತಿ ಪಾಟೀಲ ರವರು ಮಕ್ಕಳ ಸರ್ವೊತೋಮುಖ ಬೆಳವಣಿಗೆಯ ಬಗ್ಗೆ ಮಾತನಾಡಿದರು. ಡ್ರಾಯಿಂಗ್, ಕ್ರೀಡೆ, ಚಿತ್ರಕಲೆ, ಸ್ಪರ್ಧೆ ಏರ್ಪಡಿಸಿ ಬಹುಮಾನ ಕೊಡಲಾಯಿತು. ಇನ್ನರ್‌ವ್ಹೀಲ್ ಸದಸ್ಯರಾದ ವಾಣಿಶ್ರೀ ಮಠದ,ವಿಜಯಾ ಕೊರ್ಲಹಳ್ಳಿ, ಶುಭಾಂಗಿ ಅವರಾದಿ ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕಿಯರಾದ ಶ್ರೀದೇವಿ, ಮಂಜುನಾಥ ಹಾಗೂ ಬಸವರಾಜ ನಿರೂಪಿಸಿ ವಂದಿಸಿದರು. ನಂತರ ಮಕ್ಕಳಿಗೆ ಸಿಹಿ ಹಂಚಲಾಯಿತು.

Please follow and like us:
error