ರಂಗ ಕಲೆ ಮನುಷ್ಯನ ಮಾನಸಿಕ ಪರಿಧಿಯನ್ನು ವಿಸ್ತರಿಸುತ್ತದೆ – ಕೆ. ಎಂ. ಸಯ್ಯದ್

 ಕೊಪ್ಪಳ, ಡಿ. ೧೬ : ರಂಗ ಕಲೆ ಮನುಷ್ಯನ ಮಾನಸಿಕ ಪರಿಧಿಯನ್ನು ಬಿಚ್ಚುವ, ಬೌದ್ಧಿಕ ನೆಲೆಯಲ್ಲಿ ಅವತಾರಗೊಳ್ಳುವ, ಬುದ್ಧಿಯನ್ನು ವಿಸ್ತರಿಸುವ ಮಹಾ ಮಾಧ್ಯಮವಾಗಿದೆ ಎಂದು ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಮುಖಂಡರಾದ ಕೆ. ಎಂ. ಸಯ್ಯದ್ ಅವರು ಹೇಳಿದರು.
ಅವರು ಶನಿವಾರ ನಗರದ ಸಾಹಿತ್ಯಭವನದಲ್ಲಿ ರಂಗ ನಿರ್ದೇಶಕ ಕೆ. ಹುಸೇನಸಾಬ ಹಿರೇಮನ್ನಾಪುರ ಅವರ ಸಹಾಯಾರ್ಥ ತಾಲೂಕು ರಂಗ ಕಲಾವಿದರ ಸಂಘ, ಅಭಿನವ ಕನ್ನಡ ಕಲಾ ಹವ್ಯಾಸಿ ಸಂಘ ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಹನಮಂತರಾವ್ ಕಂದಗಲ್ ವಿರಚಿತ ರಕ್ತರಾತ್ರಿ ನಾಟಕವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಸಿನಿಮಾ, ಟಿವಿ ಹಾವಳಿಯಿಂದಾಗಿ ನಾಟಕವನ್ನು ನೋಡುವ ಹವ್ಯಾಸ ಕ್ಷೀಣಿಸುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಹಬ್ಬ, ಜಾತ್ರೆ ಆಚರಣೆ ಸಂದರ್ಭದಲ್ಲಿ ನಾಟಕಗಳನ್ನು ಪ್ರದರ್ಶಸಿ ಇಂದಿಗೂ ನಾಟಕ ಕಲೆಯನ್ನು ಜೀವಂತವಾಗಿಡಲು ಶ್ರಮಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮವನ್ನು ಜಿ. ಪಂ. ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಅವರು ಉದ್ಘಾಟಿಸಿದರು. ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸಿ. ಎಸ್. ರಾಜಾರಾಂ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರಕಾರಿ ಅಭಿಯೋಜಕ ಬಿ.ಎಸ್. ಪಾಟೀಲ್, ನ್ಯಾಯವಾದಿ ಭೂಸನೂರಮಠ, ಕಸಾಪ ನಿಕಟಪೂರ್ವ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್, ಹಿರಿಯ ನ್ಯಾಯವಾದಿ ಅಸೀಫ್‌ಅಲಿ, ನಗರಸಭೆ ಸದಸ್ಯರಾದ ಶಕುಂತಲಾ ಹುಡೇಜಾಲಿ, ಇಂದಿರಾ ಭಾವಿಕಟ್ಟಿ, ಜಾಕಿರ್‌ಹುಸೇನ್ ಕಿಲ್ಲೇದಾರ್, ರವಿ ಪುರುಷೋತ್ತಮ, ಅಶೋಕ ದೇಸಾಯಿ, ಕಲಾವಿಜ ಕೆ. ರುದ್ರಪ್ಪ ಸೇರಿದಂತೆ ಅನೇಕರು ಪಾಲೊಂಡಿದ್ದರು. 

Leave a Reply