ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ

  ದಿ  ೧೬/೦೧/೨೦೧೩ ರಂದು ಹಿಂದೂಸ್ಥಾನ ಕೊಕೋಕೋಲಾ ಕಾರ್ಮಿಕರು ಏಳು ವರ್ಷಗಳಿಂದ  ದುಡಿಯುತ್ತಿರುವರನ್ನು ಖಾಯಂ ಗೊಳಿಸಲು ಪ್ರತಿ ತಿಂಗಳ ವೇತನ ೧೦೦೦೦ ರೂಪಾಯಿ ಹೆಚ್ಚಿಸಲು  ಒತ್ತಾಯಿಸಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ  ಪ್ರಾರಂಭಿಸಿದ್ದಾರೆ. ಕಳೆದ ೧ ವರಿ ವರ್ಷದಿಂದ ಖಾಯಂಯಾತಿ ಮತ್ತು ವೇತನ ಹೆಚ್ಚಳ ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ಹತ್ತಾರು ಮನವಿ ಪತ್ರವನ್ನು ಸಲ್ಲಿಸಿ ಕಂಪನಿಯ ಆಡಳಿತ ಮಂಡಳಿಗೆ ವಿನಂತಿಸಿದರು. ಬೇಡಿಕೆಗಳನ್ನು ನಿರ್ಲ್ಯಕ್ಷ ಮಾಡಲಾಗಿದೆ. ೨೦೧೦ ಅಕ್ಟೊಬರ್ ತಿಂಗಳಲ್ಲಿ ಕಾರ್ಮಿಕ ಸಂಘಟನೆ ಮತ್ತು ಆಡಳಿತ ಮಂಡಳಿ ಒಪ್ಪಂದದ ಪ್ರಕಾರ ಪ್ರತಿ ವರ್ಷ ಕನಿಷ್ಠ ೨೦ ಕಾರ್ಮಿಕರನ್ನು ಖಾಯಂಗೊಳಿಸುವುದು ಹಾಗೂ ವೇತನ ಹೆಚ್ಚಳಗೊಳಿಸಲು ತಿರ್ಮಾನಿಸಲಾಯಿಗಿತ್ತು ಆಡಳಿತ ಮಂಡಳಿ ಕಾರ್ಮಿಕರ ಅನೇಕ ಬೇಡಿಕೆಗಳನ್ನು ಈಡೇರಿಸದೇ ನಿರ್ಲ್ಯಕ್ಷವನ್ನು ಸಹಿಸಿಕೊಳ್ಳದ ಕಾರ್ಮಿಕರು ಪ್ರಥಮ ಹಂತವಾಗಿ ಕಪ್ಪು ಬಟ್ಟ್ಟೆ ಧರಿಸಿ ಕೆಲಸದಲ್ಲಿ ಮುಂದುವರೆದು ಪ್ರತಿಭಟನೆ ಮುಂದುವರೆಸಲಿದ್ದಾರೆ. ಆಡಳಿತ ಮಂಡಳಿ ಮತ್ತು ಕಾರ್ಮಿಕರ ಅಧಿಕಾರಿಗಳು ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಹೋರಾಟದ ಸ್ವರೂಪವನ್ನು ಬದಲಾಯಿಸುವ ಸಂಭವವಿದೆ ಹಿಂದೂಸ್ಥಾನ ಕೋಕೋಕೋಲಾ  ಬೇವರೆಜೆಸ್ ಪ್ರವೇಟ್ ಲಿಮೀಟೆಡ್ ಹಿರೆಬಗನಾಳ ಕಂಪನಿಯ ಗೇಟಿನ ಮುಂದುಗಡೆ ನೂರಾರು ಕಾರ್ಮಿಕರು ಬೇಡಿಕೆಗಳನ್ನು ಈಡೇರಿಸಬೇಕೆಂದು  ಘೋಷಣೆಗಳೊಂದಿಗೆ ಪ್ರತಿಭಟನಾ ಪ್ರಾರಂಭಿಸಿದರು. ಇದರ ನೇತೃತ್ವವನ್ನು ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎನ್.ರಾಘವೇಂದ್ರ ಅಧ್ಯಕ್ಷರಾದ ಉಮೆಶ ಗಣಪ, ಉಪಾಧ್ಯಕ್ಷರಾದ ಪಂಪಣ್ಣ ಹಂದ್ರಾಳ, ಎನ್.ರಾಘವೇಂದ್ರ ಪ್ರಧಾನ ಕಾರ್ಯದರ್ಶಿಗಳು ಚನ್ನಪ್ಪ ಸಿದ್ದಾಪೂರ, ನಿಂಗಯ್ಯ ಶಸಿಮಠ, ಮರಿಯಪ್ಪ ಕುಂಬಾರ, ಟಿ.ಯು.ಸಿ.ಐ ಜಿಲ್ಲಾ ಅಧ್ಯಕ್ಷರಾದ ಬಸವರಾಜ ನರೆಗಲ್ಲರವರು ಹಾಜರಿದ್ದರು.  
Please follow and like us:
error