ಕೆಎಸ್‌ಆರ್‌ಟಿಸಿ ಭ್ರಷ್ಟಾಚಾರ ಮತ್ತು ಕಾರ್ಮಿಕ ವಿರೋಧಿ ನೀತಿ ವಿರುದ್ಧ ಪ್ರಗತಿಪರ ಸಂಘಟನೆಗಳಿಂದ ಹೋರಾಟ

  ಕೆಎಸ್‌ಆರ್‌ಟಿಸಿಯ ಭ್ರಷ್ಟ ಅಧಿಕಾರಿಗಳ ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಜೂನ್ ೧೯ ರಂದುಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಮಂಜುನಾಥ ಜಿ. ಗೊಂಡಬಾಳ  ತಿಳಿಸಿದ್ದಾರೆ.
ಅವರು ಈ ಕುರಿತು ಪ್ರಕಟಣೆ ನೀಡಿದ್ದು, ಪ್ರಗತಿಪರನ ಸಂಘಟನೆಗಳ ನೇತೃತ್ವದಲ್ಲಿ, ಇರಿಯ  ಹೋರಾಟಗಾರರು, ಪತ್ರಕರ್ತರೂ ಆದ ವಿಠ್ಠಪ್ಪ ಗೋರಂಟ್ಲಿಯವರ ಮುಖಂಡತ್ವದಲ್ಲಿ ಜೂನ್ ೧೯ ರಂದು ನಗರದ ಕೆಎಸ್‌ಆರ್‌ಟಿಸಿಯ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಒಂದು ದಿನದ ಸಾಂಕೇತಿಕ ಧರಣಿಯನ್ನು ಹಮ್ಮಿಕೊರ್ಳಳಲಾಗಿದ್ದು, ಸರಕಾರ ಅದಕ್ಕೆ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ಅನಿರ್ಧಾಷ್ಟಾವಧಿಗೆ ಮುಂದುವರೆಸಲಾಗುವದು ಎಂದು ತಿಳಿಸಿದ್ದಾರೆ.                 
       ಕೊಪ್ಪಳದಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿರುವ ಕೆಎಸ್‌ಆರ್‌ಟಿಸಿಯ ನೌಕರ ಹಾಗೂ ಕಾರ್ಮಿಕ ಮುಖಂಡ ವೈ. ರವೀಂದ್ರರಿಗೆ ಮತ್ತು ಅಲ್ಲಿಯೇ ಉತ್ತಮವಾಗಿ ಕೆಲಸ ಮಾಡುತ್ತಿರುವ ಅವರ ಪತ್ನಿಗೆ ನೀಡುತ್ತಿರುವ ಕಿರುಕುಳವನ್ನು ಮುಖ್ಯವಾಗಿ ಖಂಡಿಸಲು ಪ್ರಗತಿಪರ ಸಂಘಟನೆಗಳ ಸಭೆ ಸೇರಿ ಈ ಹೋರಾಟವನ್ನು ರೂಪಿಸಲಾಗಿದೆ. ಇದಕ್ಕೂ ಮುಂಚೆ ಸಂಬಂಧಿಸಿದ ಅಧಿಕಾರಿಗಳನ್ನು ಅನೇಕ ಭಾರಿ ನೇರವಾಗಿ ಭೇಟಿ ಮಾಡಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲಾಗಿದ್ದರೂ ಯಾವುದೇ ಕ್ರಮತೆಗೆದುಕೊಳ್ಳದೇ ನಿರ್ಲಕ್ಷ ಮಾಡಿರುವದನ್ನು ಖಂಡಿಸಿ ಹೋರಾಟ ಮಾಡಲಾಗುತ್ತಿದೆ.   ಅನೇಕ ದಲಿತ ರಾಜಕೀಯ ಮುಖಂಡರು ಹೋರಾಟದಲ್ಲಿ ಪಾಲ್ಗೊಳ್ಳುವರು. ಹೋರಾಟದಲ್ಲಿ ಕೆಎಸ್‌ಆರ್‌ಟಿಸಿಯ ಭ್ರಷ್ಟ ಅಧಿಕಾರಿಗಳನ್ನು ವರ್ಗ ಮಾಡುವದು, ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವದು ಹಾಗೂ ಕಾರ್ಮಿಕ ವಿರೋಧಿ ನೀತಿಯನ್ನು ಹೊಂದಿರುವದನ್ನು ಖಂಡಿಸಿ ತುರ್ತು ಕ್ರಮಕ್ಕೆ ಸರಕಾರವನ್ನು ಒತ್ತಾಯಿಸಲಾಗುವದು ಎಂದು ತಿಳಿಸಿದ್ದಾರೆ.
Please follow and like us:
error