ಕುಕನೂರು : ಆ ೨೧ ರಂದು ಸಾಹಿತ್ಯ ಪೂರ್ಣಿಮೆಗೆ ಚಾಲನೆ

ಕೊಪ್ಪಳ ಜಿಲ್ಲೆ ಕುಕನೂರಿನ ತಾಯಿ ಪ್ರಕಾಶನ ಹಾಗೂ ಅಪ್ಪಳಿಸು ಪಾಕ್ಷೀಕ ಪತ್ರಿಕಾ ಬಳಗದ ಆಶ್ರಯದಲ್ಲಿ ಪ್ರತಿ ಹುಣ್ಣಿಮೆಗೊಮ್ಮೆ ಸಾಹಿತ್ಯ ಪೂರ್ಣಿಮೆ ಕಾರ್ಯಕ್ರಮ ಆಯೋಜಿಸಲಾಗಿದೆ ಈ ನಿಮಿತ್ಯ ಅಗಷ್ಠ ೨೧ ರಂದು ನೂಲ ಹುಣ್ಣಿಮೆ ಎಂದು ಕುಕನೂರಿನ ಅನ್ನದಾನೇಶ್ವರ ಮಠದಲ್ಲಿ ಸಂಜೆ ೬:೩೦ ರಿಂದ ೭:೩೦ ರ ವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಗಜೇಂದ್ರಗಡದ ಭೂಮರಡ್ಡಿ ಕಾಲೇಜಿನ ಪ್ರ್ರಾಚಾರ್ಯರಾದ ಡಾ. ಎಸ್.ಎನ್ ಶಿವರಡ್ಡಿ ಅವರು ಕವಿ ಕಾವ್ಯ ಕುರಿತು ಉಪನ್ಯಾಸ ನೀಡುವುದರ ಮೂಲಕ ಚಾಲನೆ ನೀಡಲಿದ್ದಾರೆ. ಹಿರಿಯ ಸಾಹಿತಿಗಳಾದ ಡಾ.ಕೆ.ಬಿ ಬ್ಯಾಳಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.  
ನಂತರ ನಡೆಯಲಿರುವ ಕವಿಗೋಷ್ಠಿಯಲ್ಲಿ  ಸಾಹಿತಿಗಳಾದ ಎ.ಪಿ ಮುಧೋಳ, ಸಿದ್ಲಿಂಗಯ್ಯ ಹಿರೇಮಠ, ವೈ.ಚಮಸಾಬ, ಮಹೇಶ ಸಬರದ, ಎನ್.ಜಡೀಯಪ್ಪ, ಸೌಮ್ಯ ರಾಣಿ, ಎಮ್.ಎನ್. ಉಕುಮನಾಳ, ಆರ್.ಪಿ.ರಾಜೂರು ಶರಣಪ್ಪ ಕೋಪ್ಪದ, ಎಸ್.ಎಮ್. ಕಿಂದ್ರಿ, ಎನ್.ಟಿ. ಸಜ್ಜನ, ಗುದ್ನೇಪ್ಪ ಹೆಗಡೆ, ಭೊಜರಾಜ ಸೊಪ್ಪಿಮಠ, ಕಲ್ಲಪ್ಪ ಕವಳಕೇರಿ, ಸುರೇಶ ಉಡಪಿ, ಮೊದಲಾದವರು ಭಾಗವಹಿಸಲಿದ್ದು, ಪ್ರತಿ ತಿಂಗಳು ಒಂದೆ ತಾಸಿನಲ್ಲಿ ಯಶಸ್ವಿಗೊಳ್ಳುವ ಈ ಕಾರ್ಯಕ್ರಮವು ವಿಶೇಷತೆಯನ್ನು ಹೊಂದಿದೆ. ಆಸಕ್ತರು ಭಾಗವಹಿಸಬೇಕೆಂದು ಕಾರ್ಯಕ್ರಮದ ಸಂಚಾಲಕರಾದ ಪತ್ರಕರ್ತ ರುದ್ರಪ್ಪ ಭಂಡಾರಿ   ತಿಳಿಸಿದ್ದಾರೆ.   

Leave a Reply