ಆಟೋನಗರದಲ್ಲಿ ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ

 ಗಂಗಾವತಿ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮತ್ತು ಅಖಿಲ ಭಾರತ ವಿದ್ಯಾರ್ಥಿ ಸಂಘ ಹಾಗೂ ಕ್ರಾಂತಿಕಾರಿ ಯುವಜನ ಸಂಘದಿಂದ ಸೆಪ್ಟಂಬರ್ ೧೭ರಂದು ರಾಯಚೂರು ರಸ್ತೆಯಲ್ಲಿನ ಆಟೋನಗರದ ಪ್ಲಾಟ್ ನಂ.೧೧೧ರಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಲಾಗುವುದು ಎಂದು ಸಂಘಟನೆಗಳ ಪರವಾಗಿ ಟಿ. ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಸತ್ಯ ಸಂಗತಿಗಳನ್ನು ಮುಚ್ಚಿಹಾಕಿ ಸುಳ್ಳುಗಳನ್ನು ವೈಭವೀಕರಿಸುತ್ತಾ, ವಿದ್ಯಾರ್ಥಿಗಳನ್ನು ಕೋಮುವಾದಿ ದಾರಿಯಲ್ಲಿ ಎಳೆಯುವ ಪ್ರಯತ್ನ ನಡೆಯುತ್ತಿದ್ದು, ಹೈದ್ರಾಬಾದ್ ಸಂಸ್ಥಾನದಲ್ಲಿ ೧೯೪೦ ರಿಂದ ೧೯೪೮ರವರೆಗೆ ನಡೆದ ಸತ್ಯ ಇತಿಹಾಸದ ಬಗ್ಗೆ ಚರ್ಚಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 
ವಿದ್ಯಾರ್ಥಿಗಳು, ಯುವಜನರು, ಕಾರ್ಮಿಕರು ಹಾಗೂ ಪ್ರಗತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು   ತಿಳಿಸಿದ್ದಾರೆ. 
Please follow and like us:
error