ಅಹಲ್ಯಾಬಾಯಿ ಹೋಳ್ಕರ್ ಶಿವಶರಣೆ,ದಾಸೋಹಿ ದಕ್ಷ ಆಡಳಿತಗಾರಾಗಿದ್ದರು-ಡಾ.ಪಾರ್ವತಿ ಪೂಜಾರ

 ಭಾರತದ ರಾಜಕೀಯ ಇತಿಹಾಸದಲ್ಲಿ ಕೆಲವು ಮಹಿಳೆಯರಲ್ಲಿ ಚಿರಸ್ಥಾಯಿಯಾದ ಮುಖ್ಯ ಹೆಸರು ಯಾವುದೇ ರಾಜಕೀಯ ಪುರುಷ,ಸ್ತ್ರೀಯರು ಮಾಡದೇ ಇರುವ ಕಾರ್ಯವನ್ನು ಅಹಲ್ಯಾ ಬಾಯಿ ಹೋಳ್ಕರ್ ಅವರು ಮಾಡಿದ ವರ್ಣರಂಜಿತ ವ್ಯಕ್ತಿತ್ವ ಹೊಂದಿದ ಆದರ್ಶ ಮಹಿಳೆಯಾಗಿದ್ದರು ಎಂದು ಹಿರಿಯ ಸಾಹಿತಿಗಳು ಹಾಗೂ ಕೊಪ್ಪಳಸ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯದ ಕನ್ನದ ಪ್ರಾಧ್ಯಾಪಕರಾದ ಡಾ.ಪಾರ್ವತಿ ಪೂಜಾರ ಹೇಳಿದರು.
    ಅವರು ತಾಲೂಕಿನ ಭಾಗ್ಯನಗರದ ಹುನುಮಂತಪ್ಪ ಅಂಡಗಿಯವರ ಚುಟುಕು ನಿವಾಸದಲ್ಲಿ ಕನಕ ಸಾಂಸ್ಕೃತಿಕ ಪರಿಷತ್ತು ಹಮ್ಮಕೊಂಡಿದ್ದ ೯ನೇ ಮನೆ ಮನೆಯಲ್ಲಿ ಹಾಲುಮತ ಸಂಸ್ಕೃತಿಕ ದರ್ಶನ ಕಾರ್ಯಕ್ರಮದಲ್ಲಿ ’ಅಹಲ್ಯಾಬಾಯಿ ಹೋಳ್ಕರ್’ ಅವರ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
    ಅಹಲ್ಯಾಬಾಯಿಯವರು ಇಂದೂರ ಸಂಸ್ಥಾನದ ರಾಣಿಯಾಗಿ ಅತ್ಯುತ್ತಮ ಎತ್ತರಕ್ಕೆ ನಿಲ್ಲುತ್ತಾರೆ.ತಮ್ಮ ಆಡಳಿತದ ಅವಧಿಯಲ್ಲಿ ೩೩ ವರ್ಷಕ್ಕಿಂತಲೂ ಹೆಚ್ಚುಕಾಲ,ಧ್ಯಾನ,ಧರ್ಮ,ದಾಸೋಹ,ಜನಸೇವೆ,ಶಿವನಸೇವೆ,ಪ್ರಜಾಸೇವೆ ಅಲ್ಲದೇ ದಕ್ಷ ಆಡಳಿತದ ಮತ್ತು ರಣರಂಗ ಹಿಗೇ ವಿವಿಧ ಭಾಗಗಳಲ್ಲಿ ಕರ್ಮಯೋಗಿ ಯಾಗಿ ಕಾಲ ಕಳೇದ ತೇಜಸ್ವಿನಿ ಎಂದರೆ ತಪ್ಪಾಗಲಾರದು.
      ಅಹಲ್ಯಾಬಾಯಿ ಸರಕಾರದ ಪರವಾಗಿ ವಕಾಲತ್ತು ವಹಿಸಿ ಪ್ರಜೆಗಳ ಸೇವೆಗಾಗಿ ಹಂಬಲಿಸುತ್ತಿದ್ದಳು.ಇಂದೂರ ಸಂಸ್ಥಾನದ ಬಂಡಾರದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಳು.ಮುತ್ಸದ್ದಿ ರಾಜಕಾರಣಿಯಾಗಿ ಕಾರ್ಯ ನಿರ್ವಹಣೆ ಮಾಡಿದ ಅಹಲ್ಯಾಬಾಯಿ ಹಲವಾರು ಪುಸ್ತಕಗಳನ್ನು ಸಂಸ್ಕೃತ ಮತ್ತು ಮರಾಠಿ ಭಾಷೆಯಲ್ಲಿ ಬರೆದಿದ್ದಾಳೆ.ಇವರ ಕುರಿತು ಇಂಗ್ಲೀಷ್,ಮರಾಠಿಯಲ್ಲಿ ಹಲವಾರು ಪುಸ್ತಕಗಳು ಪ್ರಕಟವಾಗಿರುವುದನ್ನು ಕಾಣಬಹುದು.ಅವರ ಆದರ್ಶ ಮಯ ಜೀವನ ಇಂದಿನ ಮಹಿಳೆಯರಿಗೆ ದಾರಿದೀಪವಾಗಿದೆ ಎಂದು ಡಾ.ಪಾರ್ವತಿ ಪೂಜಾರ ಅವರು ಅಭಿಪ್ರಾಯ ಪಟ್ಟರು.
  ಕಾರ್ಯಕ್ರವನ್ನು ಕಾಗೀನೆಲೆ ಕನಕ ಗುರುಪೀಠದ ಧರ್ಮದರ್ಶಿಗಳಾದ ಹನುಮಂತಪ್ಪ ಅಂಗಡಿ ಉದ್ಘಾಟಿಸಿ ಮಾತನಾಡುತ್ತ ಕನಕ ಸಾಂಕ್ಕೃತಿಕ ಪರಿಷತ್ತು ಹಲವರು ವಿಭಿನ್ನ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ಸಮಾಜದಲ್ಲಿ ಹುಟ್ಟಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದರವರ ಪರಿಚಯ ಹಲವರಿಗೆ ಇಲ್ಲವಾಗಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರಿಂದ ನಾಡಿಗಾಗಿ ಮಡಿದ ಅನೇಕ ಮಹಾನ ವ್ಯಕ್ತಗಳ ಪರಿಯವಾಗುವುದರ ಜೊತೆಲ್ಲಿ ಅವರ ಜೀವನ  ಹಾಗೂ ಸಾಧನೆಯನ್ನು ತಿಳಿದು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳು ಸಾದ್ಯವಾಗಿತ್ತದೆ.ಹಾಲುಮತ ಸಮಾಜದ ಅನೇಕ ಮಾಹನ ವೀರರ ಭಾವಚಿತ್ರವನ್ನು ಸಂಗ್ರಹಿಸಿ ಅದನ್ನು ಪುಸ್ತಕ ರೂಪದಲ್ಲಿ ಹೊರತರುವಂತೆ ಸಲಹೆ ನೀಡಿದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರೇಣುಕಾ ಹನುಮಂತಪ್ಪ ಅಂಡಗಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ.ಮಾಹಂತೇಶ ಮಲ್ಲಗೌಡರ,ವೀರಕನ್ನಡಿಗ ಯುವಕ ಸಂಘದ ಅಧ್ಯಕ್ಷರಾದ ಶಿವಾನಂದ ಹೂದ್ಲೂರ,ಕನಕ ಸಾಂಸ್ಕೃತಿಕ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಸವರಾಜ ಆಕಳವಾಡಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತಪ್ಪ ಅಂಡಗಿ ಚಿಲವಾಡಗಿ,ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಡಾ.ಆರ್.ಎಂ.ಪಾಟೀಲ,ನಿವೃತ್ತ ಪ್ರಾಚಾರ್ಯರಾದ ಬಿ.ಜಿ.ಕರಿಗಾರ,ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಮುಖ್ಯಮಂತ್ರಿಗಳ ಪದಕ ವಿಜೇತರಾದ ಬಿ.ಎಫ್.ಬೀರನಾಯ್ಕರ,ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಖಜಾಂಚಿಗಳಾದ ಬಸವರಾಜ ಬಂಡಿಹಾಳ,ಶಾಂತಿ ಪ್ರಕಾಶನ ಸಂಚಾಲಕರಾದ ಮೊಹಮ್ಮದ್ ಫಹೀಮುದ್ದಿನ್,ಹಿರಿಯರಾದ ರಾಮಚಂದ್ರ ಮಾರ ,ಶಿಕ್ಷಕರದ ಮಹೇಶ ಹೊಸಮನಿ ಡೊಳ್ಳಿನ ಸಂಘದ ತಾಲೂಕ ಅಧ್ಯಕ್ಷರಾದ ಗುಡಸಪ್ಪ ಹಲಗೇರಿ ಮುಂತಾದವರು ಹಾಜರಿದ್ದರು.ಕಾಯಕ್ರಮವನ್ನು ಶಿಕ್ಷಕರಾದ ಸಿದ್ದನಗೌಡ ಮಾಲೀಪಾಟೀಲ ನಿರೂಪಿಸಿದರು.ಶಿಕ್ಷಕರಾದ ಸಿದ್ದಲಿಂದ ಅಂಬಾಸ ಸ್ವಾಗತಿಸಿ,ನರೇಂದ್ರ ಪಾಟೀಲ ವಂದಿಸಿದರು. 
Please follow and like us:
error