ಕೊಪ್ಪಳ : ಹಜ್ರತ್ ಸೈಯ್ಯದ್ ಷಾಹ್ ಪೀರ್ ಪಾಷಾ ಖಾದ್ರಿ (ರ.ಅ) ರವರ ಉರುಸೆ ಫರೀಫ್

 – ಕೊಪ್ಪಳ ನಗರದ ಪಲ್ಟನ್ ಓಣಿಯ ಹಜ್ರತ್ ಸೈಯ್ಯದ್ ಷಾಹ್ ಪೀರ್ ಪಾಷಾ ಖಾದ್ರಿ (ರ.ಅ)ರವರ ಉರುಸೆ ಫರೀಫ್ ನಡೆಯಲಿದೆ. ದಿನಾಂಕ : ೧೬-೧-೨೦೧೪ ಗುರುವಾರ ರಾತ್ರಿ ೮-೦೦ ಗಂಟೆಗೆ ಗಂಧ, ದಿ. ೧೭-೦೧-೨೦೧೪ ಶುಕ್ರವಾರ ಉರುಸೆ ಷರೀಫ್ ಹಾಗೂ ದಿನಾಂಕ : ೧೮-೦೧-೨೦೧೪ ಶನಿವಾರ ಜಿಯಾರತ್ ಕಾರ್ಯಕ್ರಮಗಳು ನಡೆಯಲಿದೆ.
ಅಲ್‌ಹಾಜ್ ಸೂಫಿ ಮುಹಮ್ಮದ್ ಬಕ್ಷಿತಸ್ಕೀನ್ ಷಾಹ್ ನಖ್ಷಬಂದಿ ಉಲ್ ಖಾದ್ರಿರವರ ನೇತೃತ್ವದಲ್ಲಿ ಸದರಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ದಿ. ೧೬-೦೧-೨೦೧೪ ಗುರುವಾರ ಸಾಯಂಕಾಲ ೮-೦೦ ಗಂಟೆಗೆ ಸಂದಲ್ ಷರೀಫ್ ನಡೆಯಲಿದ್ದು, ದಿನಾಂಕ : ೧೭-೦೧-೨೦೧೪ ಶುಕ್ರವಾರ ರಾತ್ರಿ ೧೦-೦೦ ಗಂಟೆಯಿಂದ ಉರುಸೆ ಶರೀಫ್‌ನ ಕಾರ್ಯಕ್ರಮದಲ್ಲಿ ಹೈದ್ರಾಬಾದ್‌ನ ಹಜ್ರತ್ ಮುಫ್ತಿಮಹ್ಮದ್ ಹನೀಫ್‌ಸಾಬ್ ನಖ್ಷಬಂದಿರವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ. ದಿನಾಂಕ : ೧೮-೦೧-೨೦೧೪ ರಂದು ಬೆಳಿಗ್ಗೆ ೭-೦೦ ಗಂಟೆಗೆ ಜಿಯಾರತ್ ಫಾತೆಹಾ ಹಾಗೂ ಹಜ್ರತ್ ಮುಹ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಆಸಾರ್ ಷರೀಪ್ ಜಿಯಾರತ್ ಮತ್ತು ಅನ್ನಸಂತರ್ಪಣೆಯೊಂದಿಗೆ ಉರುಸೆ ಶರೀಫ್‌ನ ಕಾರ್ಯಕ್ರಮಗಳು ಮುಕ್ತಾಯವಾಗಲಿವೆ.
ಸರ್ವರೂ ಸದರಿ ಉರುಸೆ ಷರೀಫ್‌ನ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ದುರ್ಗಾ ಮ್ಯಾನೇಜ್‌ಮೆಂಟ್ ಕಮೀಟಿಯ ಅಧ್ಯಕ್ಷರಾದ ಸೈಯ್ಯದ್ ನೂರುಲ್ಲಾಖಾದ್ರಿ, ಖಜಾಂಚಿ ಫೆರೋಜ್ ಮಾನ್ವಿಕರ್ ಹಾಗೂ ಕಾರ್ಯದರ್ಶಿ ಪಾಷಾ ತಳಕಲ್ ಮತ್ತು ದರ್ಗಾ ಕಮೀಟಿಯ ಸರ್ವ ಸದಸ್ಯರು   ವಿನಂತಿಸಿಕೊಂಡಿದ್ದಾರೆ.

Leave a Reply