ಎಫ್.ಡಿ.ಐ. ಪರ ಇರುವ ಪಕ್ಷಗಳನ್ನು ಸೋಲಿಸಿ ದೇಶ ಉಳಿಸಿ : ಸಿ.ಪಿ.ಐ.ಎಂ.ಎಲ್.

 ಎಫ್.ಡಿ.ಐ. ದಿಂದ ದೇಶದ ಮಧ್ಯಮ ಹಾಗೂ ಸಣ್ಣ ವ್ಯಾಪಾರಿಗಳು ತತ್ತರಿಸಿ ಹೋಗಿದ್ದಾರೆ. ಈ ಚುನಾವಣೆಯ ನಂತರ ಬಹುರಾಷ್ಟ್ರೀಯ ಕಂಪನಿಗಳು ಬಲಗೊಂಡು ದೇಶಿಯ ಚಿಲ್ಲರೆ ಮಾರ್ಕೆಟ್ ಮತ್ತು ಕೃಷಿಯನ್ನು ಕಬಳಿಸುವ ಪ್ರಮಾದವಿದೆ. ಇದರಿಂದ ಕೊಟ್ಯಾಂತರ ಜನರು ನಿರುದ್ಯೋಗಿಗಳಾಗಲಿದ್ದಾರೆ, ಅದರಿಂದಾಗಿ ಎಫ್.ಡಿ.ಎ. ಬೆಂಬಲಿಸುವ ಪಕ್ಷಗಳನ್ನು ತಿರಸ್ಕರಿಸಬೇಕೆಂದು ಮತದಾರರಲ್ಲಿ ಸಿ.ಪಿ.ಐ.ಎಂ.ಎಲ್ ಲಿಬರೇಷನ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಸನಗೌಡ ಸುಳೆಕಲ್  ಮನವಿ ಮಾಡಿದ್ದಾರೆ.
ಕಾರ್ಪೋರೇಟ್ ಮಿಡಿಯಾ ದಿಂದ ಕೆಲ ವ್ಯಕ್ತಿಗಳನ್ನು ವೈಭವೀಕರಿಸಿ ಅವರೇ ದೇಶವನ್ನಾಳಲು ಅರ್ಹರೆಂದು ಪ್ರತಿಪಾದಿಸುತ್ತಿರುವುದು ೧೨೦ ಕೋಟಿ ಭಾರತೀಯರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದಿದ್ದಾರೆ.  ವಿದೇಶಿ ಕಂಪನಿಗಳ ದಾಳಿಯಿಂದ ದೇಶದ ಕೃಷಿ, ಕೈಗಾರಿಕೆಗಳು ಮತ್ತು ಚಿಲ್ಲರೆ ವ್ಯಾಪಾರ ನಷ್ಟಕ್ಕೊಳಗಾಗಿ ಮಧ್ಯಮ ವರ್ಗದ ಜನರು ತಮ್ಮ ಬದುಕನ್ನು ಕಳೆದುಕೊಳ್ಳಲಿದ್ದಾರೆ. ಬರಲಿರುವ ಈ ಪ್ರಮಾದವನ್ನು ಪ್ರಜ್ಞಾವಂತರು ಮತ್ತು ಮಧ್ಯಮ ವರ್ಗದ ಜನರು ಗುರುತಿಸಿ ಬಿಜೆಪಿ ಮತ್ತು ಕಾಂಗ್ರೇಸ್‌ಗಳನ್ನು ತಿರಸ್ಕರಿಸಬೇಕೆಂದು ಸಿ.ಪಿ.ಐ.ಎಂ.ಎಲ್. ಪಕ್ಷ   ಕೋರಿದೆ.

Related posts

Leave a Comment