ಅತ್ಯಾಚಾರ ಪ್ರಕರಣ ಆರೋಪಿಗೆ ೦೭ ವರ್ಷ ಜೈಲು ಶಿಕ್ಷೆ.

ಕೊಪ್ಪಳ, ಫೆ.೨೬ (ಕ
ವಾ) ಮದುವೆಯಾಗುವುದಾಗಿ ನಂಬಿಸಿ ಸುಮಾರು ಎಂಟು ತಿಂಗಳುಗಳಿಂದ ಯುವತಿಯೋರ್ವಳ ಮೇಲೆ
ಅತ್ಯಾಚಾರ ಎಸಗಿ, ಮೋಸ ಮಾಡಿದ ಆರೋಪಿಯೋರ್ವನಿಗೆ ಕೊಪ್ಪಳ ಜಿಲ್ಲಾ ಮತ್ತು ಸತ್ರ
ನ್ಯಾಯಾಲಯ ೦೭ ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
     ಕೊಪ್ಪಳದ
ಕುವೆಂಪು ನಗರದ ನಿವಾಸಿಯಾದ ಆರೋಪಿ ರುದ್ರೇಶ ಬಡಿಗೇರ ಎಂಬಾತ ಯುವತಿಯೋರ್ವಳನ್ನು ಪರಿಚಯ
ಮಾಡಿಕೊಂಡು, ಬಳಿಕ ಪ್ರೀತಿಸುವುದಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಅಲ್ಲದೆ
ಮದುವೆಯಾಗುವುದಾಗಿ ನಂಬಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಇದರಿಂದ ಯುವತಿ
ಗರ್ಭಿಣಿಯಾಗಿದ್ದು, ಸುಮಾರು ಎಂಟು ತಿಂಗಳಿನಿಂದ ಪ್ರೀತಿಸುವುದಾಗಿ, ಮದುವೆಯಾಗುವುದಾಗಿ
ನಂಬಿಸಿ ಅತ್ಯಾಚಾರ ಎಸಗಿ, ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ನಗರ
ಪೊಲೀಸ್ ಠಾಣೆಯ ಆಗಿನ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ ಬಿರಾದಾರ್ ತನಿಖೆ ಕೈಗೊಂಡು,
ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.    
    
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ನಾಗರತ್ನ ಅವರು
ಫೆ.೨೫ ರಂದು, ಆರೋಪಿತನಿಗೆ ಭಾ.ದಂ.ಸಂ ಕಲಂ: ೩೭೬ ಅಡಿ ಅಪರಾಧಕ್ಕಾಗಿ ೭ ವರ್ಷ ಶಿಕ್ಷೆ
ಮತ್ತು ೧೦ ಸಾವಿರ ರೂಪಾಯಿ ದಂಡ ಹಾಗೂ ಕಲಂ: ೪೧೭ ಅಡಿ ಅಪರಾಧಕ್ಕಾಗಿ ೧೦ ತಿಂಗಳ ಸಜೆ
ಮತ್ತು ಐದು ಸಾವಿರ ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸಾರ್ವಜನಿಕ ಅಭಿಯೋಜಕ
ಎಂ.ಎ. ಪಾಟೀಲ ಅವರು ಅಭಿಯೋಜನದ ಪರವಾಗಿ ವಾದ ಮಂಡಿಸಿದ್ದರು.
Please follow and like us:
error

Related posts

Leave a Comment