You are here
Home > Koppal News > ಜೆಸ್ಕಾಂ ವೃತ್ತ ಕಛೇರಿಯನ್ನು ಕೊಪ್ಪಳದಲ್ಲಿ ಪ್ರಾರಂಭಿಸಲು ಆಗ್ರಹ

ಜೆಸ್ಕಾಂ ವೃತ್ತ ಕಛೇರಿಯನ್ನು ಕೊಪ್ಪಳದಲ್ಲಿ ಪ್ರಾರಂಭಿಸಲು ಆಗ್ರಹ

ಕೊಪ್ಪಳ : ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಯ ವೃತ್ತ ಕಛೇರಿಯನ್ನು ಬಹುದಿನಗಳ ನಂತರ ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಸ್ಥಾಪಿಸಬೇಕು ಎಂಬ ಜನರ ಬೇಡಿಕೆ ಈಡೇರಿದೆ ವಿವಿಧ ಕಾರ್ಯಗಳಿಗಾಗಿ ಗ್ರಾಹಕರು ಪದೇ ಪದೇ ರಾಯಚೂರಿಗೆ ಹೋಗುವುದನ್ನು ತಪ್ಪಿಸಲು ಹಾಗೂ ಜನರ ಮನೆಬಾಗಿಲಿಗೆ ಆಡಳಿತ ಒಯ್ಯುವ ಸಲುವಾಗಿ ಜೆಸ್ಕಾಂ ವೃತ್ತ ಕಛೇರಿಯನ್ನು ನೂತನ ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿಸಲು ಮುಂದಾಗಿರುವುದು ಸ್ವಾಗತ ಆದರೆ ಜೆಸ್ಕಾಂನ ಕಲ ಅಧಿಕಾರಿಗಳ ಸ್ವಾರ್ಥ ಹಾಗೂ ಠಿಕಾವಣೆಯಿಂದಾಗಿ ಈ ಕಛೇರಿಯನ್ನು ಕೊಪ್ಪಳ ಬದಲಾಗಿ ಮುನಿರಾಬಾದ್‌ನಲ್ಲಿ ಸ್ಥಾಪಿಸಲಾಗುತ್ತಿದೆ. ಅಧಿಕಾರಿಗಳ ಈ ದುರಾಲೋಚನೆಗೆ ಕೇಂದ್ರ ಪ್ರತಿನಿಧಿಗಳು ಸಾತ್ ನೀಡಿದ್ದಾರೆ ಇದರಿಂದಾಗಿ ಜನತೆಯ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರದಲ್ಲಿರಬೇಕಾದ ಪ್ರಮುಖ ಸರಕಾರಿ ಕಛೇರಿಯೊಂದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸ್ವಾರ್ಥಕ್ಕಾಗಿ ಮುನಿರಾಬಾದಿನಲ್ಲಿ ಸ್ಥಾಪನೆಗೊಳ್ಳುತ್ತದೆ. ಈ ಕ್ರಮವನ್ನು ಕರ್ನಾಟಕ ನವನಿರ್ಮಾಣ ಸೇನೆ ಸಂಘಟನೆಯು ಉಗ್ರವಾಗಿ ಖಂಡಿಸಿದೆ.
ಜೆಸ್ಕಾಂ ಅಧಿಕಾರಿಗಳು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಮುನಿರಾಬಾದಿನಲ್ಲಿ ಪ್ರಾರಂಭಿಸಲು ಹೊರಟಿದ್ದಾರೆ. ಇದರ ವಿರುದ್ದ ಸಂಘಟನೆಯು ಉಗ್ರವಾದ ಹೋರಾಟ ಮಾಡಲಾಗುತ್ತದೆ. ಮುನಿರಾಬಾದಿನಲ್ಲಿ ಪ್ರಾರಂಭಿಸುವುದನ್ನು ಬಿಟ್ಟು ಕೊಪ್ಪಳದಲ್ಲಿ ಪ್ರಾರಂಭಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಕ.ನ.ಸೆ ರಾಜ್ಯ ಸಂಚಾಲಕರ  ವಿಜಯಕುಮಾರ ಕವಲೂರು  ಇಂಧನ ಸಚಿವರಾದ ಡಿ.ಕೆ.ಶಿವಕುಮಾರರಿಗೆ ಸಲ್ಲಿಸಲಾದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪುರಖಾನ ಅಹಮ್ಮದ ,ಆನಂದ ಮಡಿವಾಳರ ,ಶಾಂತು ಕೌಜಗೇರಿ ,ವಿರೇಶ ಅಂಗಡಿ ಉಪಸ್ಥಿತರಿದ್ದರು. 

Leave a Reply

Top