ಬೇವಿನಹಳ್ಳಿ : ಮಾರುತೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

  ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂಸಹ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಇದಕ್ಕೆ ಶ್ರೀ ಕಲ್ಮಠದ ನಾಗಭೂಶಣ ಶಿವಚಾರ್ಯ ಮಹಾಸ್ವಾಮಿಗಳು ಪರಮಪೂಜ್ಯ ಶ್ರೀಗಳುವರು ಧ್ವಜಾರೋಹಣ ನೇರವೇಸಿ ಚಾಲನೆ ನೀಡಿದರು.
        ಈ ಜಾತ್ರಾ ಮಹೋತ್ಸವದಲ್ಲಿ ಸಯ್ಯದ್ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಕೆ.ಎಮ್. ಸಯ್ಯದ್ ಕಿರ್ಲೋಸ್ಕರ್ ಕಾರ್ಖನೆ ಆಡಳಿತ ಮಂಡಳಿತದ ವ್ಯವಸ್ಥಾಪಕ ನಿರ್ದೆಶಕ ಆರ್.ವ್ಹಿ. ಗುಮಾಸ್ತೆ, ಸತೀಶ ಶಟ್ಟಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಅಮರೇಶ ಹಿಟ್ನಾಳ,ಭೀಮಣ್ಣ ಮೂಲಿಮನಿ, ಹನುಮಂತಪ್ಪ ಮಡ್ಡಿ ಮತ್ತಿತರರು ಪಾಲ್ಗೋಂಡಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿ ಸಮೂಹ ಈ ಜಾತ್ರಾಮಹೋತ್ಸವದಲ್ಲಿ ಪಾಲ್ಗೋಂಡು ತೇರನ್ನು ಎಳೆದು ಶ್ರೀಗಳವರ ಆಶಿರ್ವಾದ ಪಡೆದುಕೊಂಡರು.

Leave a Reply