ಡಿ.೧೭ ರಿಂದ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ಫಲಪೂಜಾ ಮಹೋತ್ಸವ

  ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಐತಿಹಾಸಿಕ ಹಂಪಿ ಕ್ಷೇತ್ರದ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ಫಲಪೂಜಾ ಮಹೋತ್ಸವ ಕಾರ್ಯಕ್ರಮ ಡಿ.೧೭ ರಿಂದ ೧೯ ರವರೆಗೆ ನಡೆಯಲಿದೆ.
ಫಲಪೂಜಾ ಮಹೋತ್ಸವ ಅಂಗವಾಗಿ  ಡಿ.೧೭ ರ ಮಂಗಳವಾರ ರಾತ್ರಿ ೮.೩೦ ಗಂಟೆಗೆ ಶ್ರೀ ಮನ್ಮುಖ ತೀರ್ಥದಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವ ಜರುಗಲಿದೆ. ಡಿ.೧೯ ರಂದು ಗುರುವಾರ ರಾತ್ರಿ ೧೦.೦೦ ಗಂಟೆಗೆ ಶ್ರೀ ಚಕ್ರ ತೀರ್ಥ ಕೋದಂಡರಾಮಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಯ ಫಲಪೂಜಾ ಮಹೋತ್ಸವ ಜರುಗಲಿದೆ. ಡಿ. ೧೭ ರಿಂದ ೧೯ ರವರೆಗೆ ವಿರೂಪಾಕ್ಷೇಶ್ವರಸ್ವಾಮಿಯವರಿಗೆ ವಿಜಯನಗರದ ಅರಸರಾದ ಶ್ರೀ ಕೃಷ್ಣದೇವರಾಯರು ಸಮರ್ಪಿಸಿದ ನವರತ್ನ ಖಚಿತವಾದ ಸುವರ್ಣಮುಖ ಕಮಲದೊಂದಿಗೆ ಅಲಂಕರಿಸಲಾಗುವುದು.  ಸರ್ವ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯಕ್ಷೇತ್ರಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹಂಪಿಯ   ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನ ಸಮಿತಿಯ ಕಾರ್ಯ ನಿರ್ವಾಹಣಾಧಿಕಾರಿ ಪ್ರಕಾಶರಾವ್  ತಿಳಿಸಿದ್ದಾರೆ.

Related posts

Leave a Comment