You are here
Home > Koppal News > ಶ್ರೀ ವಿಶ್ವಕರ್ಮ ಜಯಂತಿ.

ಶ್ರೀ ವಿಶ್ವಕರ್ಮ ಜಯಂತಿ.

ಇತ್ತೀಚೆಗೆ ದಿ.೧೭ರಂದು ಭಾಗ್ಯನಗರದ ೭ನೇ ವಾರ್ಡ ಕದಂಭ ನಗರದ ಶ್ರೀ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ೩ ನೇ ವರ್ಷದ ಶ್ರೀ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯೆಕ್ಷ ಅಶೋಕ ವೇದಪಾಠಕ ಪಾಲ್ಗೊಂಡಿದ್ದರು. ಅಧ್ಯೆಕ್ಷ ವೀರಣ್ಣ ಅಕ್ಕಸಾಲಿಗರ ಮಾತನಾಡಿ ಶ್ರೀ ವಿಶ್ವಕರ್ಮ ಪ್ರಭು ಎಲ್ಲ ಕುಶಲ ಕರ್ಮಿಗಳಿಗೆ ಸುಖಃ ಸಮೃದ್ಧಿಯನ್ನು ಉಂಟುಮಾಡಲೆಂದು ಆಶಿಸಿರು. ಕಾರ್ಯಕ್ರಮವನ್ನು ವಿರೇಶ ಎನ್.ಪತ್ತಾರ ಸ್ವಾಗತಿಸಿದರು, ಶಿವಪ್ಪ ಬಡಿಗೇರ, ಶ್ರೀಮತಿ ಶಾರದಮ್ಮ, ಹಾಗೂ ಎಲ್ಲ ಸದಸ್ಯರು, ಸಮಾಜ ಭಾಂದವರು, ಭಕ್ತಾಧಿಗಳು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಕಾರ್ಯದರ್ಶಿ ವಿರೇಶ ಪಿ ವಂದಿಸಿದರು.                                          
                                        

Leave a Reply

Top