ರಮಜಾನ್ ಹಬ್ಬದ ಶುಭ ಕೋರಲು ಬಂದ ಸಂಸದ ಸಂಗಣ್ಣ ಕರಡಿಗೆ ಸನ್ಮಾನ.

ಕೊಪ್ಪಳ: ಜು:೧೮, ಲೋಕಸಭಾ ಕ್ಷೇತ್ರದ ಸಂಸದ ಸಂಗಣ್ಣ ಕರಡಿಯವರು ಇಂದು ಬೆಳಿಗ್ಗೆಯೇ ಗಂಗಾವತಿ ತಾಲೂಕಿನ ಭಾಗಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಜೆ ಸುಮಾರಿಗೆ ನಗರದ ಪಲ್ಟನ ಓಣಿಯಲ್ಲಿಯ ತಮ್ಮ ಮುಸ್ಲೀಮ್ ಅಭಿಮಾನಿಗಳನ್ನು ಭೇಟಿಯಾಗಿ ರಮಜಾನ್ ಹಬ್ಬದ ಶುಭಾಶಯ ಹೇಳಿದರು.ರಾಜಕೀಯದಲ್ಲಿ ಬಂದ ಸಂಗಣ್ಣ ಕರಡಿ ಅವರು ಅಂದಿನಿಂದ ತಮ್ಮನ್ನು ಗೌರವಿಸುವ ಅಭಿಮಾನಿಗಳ ಪ್ರಮುಖರ ಮನೆಗಳಿಗೆ ಹಬ್ಬದ ದಿನಗಳಲ್ಲಿ  ಭೇಟಿ ನೀಡುತ್ತಾ ಬಂದಿದ್ದು, ಅದರಂತೆ ಈ ಬಾರಿಯು ರಮಜಾನ್ ಹಬ್ಬದ ಶುಭಾಶಯ ಹೇಳಲು ಪಲ್ಟನ ಓಣಿಯಲ್ಲಿಯ ತಮ್ಮ ಅಭಿಮಾನಿ ಸೈಯ್ಯದ್ ನೂರುಲ್ಲಾ ಖಾದ್ರಿ ಅವರ ಮನೆಗೆ ಭೇಟಿ ನೀಡಿ ಸೇರಿದ ಓಣಿಯ ಹಿರಿಯರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.ಅಭಿಮಾನಿ ಸೈಯ್ಯದ್ ನೂರುಲ್ಲಾ ಖಾದ್ರಿ ಅವರಿಂದ ಸಂಗಣ್ಣ ಕರಡಿ ಅವರು ಸನ್ಮಾನ ಸ್ವೀಕರಿಸಿ, ನಂತರ ಮಾತನಾಡಿ ರಮಜಾನ್ ಹಬ್ಬವು ಎಲ್ಲಾ ಧರ್ಮಗಳೊಂದಿಗೆ ಸೌಹಾರ್ದತೆ ಹಾಗೂ ಶಾಂತಿಯ ಸಂದೇಶ ನೀಡುತ್ತದೆ ಎಂದು ಹೇಳಿದರು.ಪಲ್ಟನ್ ಓಣಿಯ ಹಿರಿಯ ಶುಜ್ಜುಸಾಬ ಕವಲೂರ, ಖಾದ್ರಿಸಾಬ, ಅಬ್ದುಲ್ ಅಜೀಜ್, ಗವಿಸಿದ್ದಪ್ಪ ಕಂದಾರಿ, ಕರೀಮ್‌ಸಾಬ, ಗೌಸ್ ಬೇಪಾರಿ, ಪಾಶಾ ತಳಕಲ್, ಗಫಾರ್ ಗೊಂಡಬಾಳ, ಫೇರೂಜ್ ಮಾನವಿಕರ್, ಇಬ್ರಾಹಿಮ್ ಭವಾನಿ,  ಇನ್ನೂ ಅನೇಕ ಓಣಿಯ ಯುವಕರು ಭಾಗವಹಿಸಿದ್ದರು.

Please follow and like us:

Related posts

Leave a Comment