You are here
Home > Koppal News > ಕೊಪ್ಪಳ : ೫೩ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕೊಪ್ಪಳ : ೫೩ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

 ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದ ಬುಧವಾರದಂದು ಕೊಪ್ಪಳ ಜಿಲ್ಲಾ ವ್ಯಾಪ್ತಿಯ ೫ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೫೩ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಏ. ೧೭ ರಂದು ಒಟ್ಟು ೦೯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.  ನೆಕ್ಕಂಟಿ ನಾಗರಾಜ್- ಬಿ.ಎಸ್.ಆರ್., ಶಿವಕುಮಾರ್ ವಡೆಯರಹಳ್ಳಿ- ಎನ್.ಸಿ.ಪಿ., ಮಂಜುನಾಥ  ಈರಪ್ಪ- ಸಿ.ಪಿ.ಐ(ಎಂ.ಎಲ್), ಕೆ.ಎಂ. ಸೈಯದ್- ಕೆ.ಜೆ.ಪಿ, ರವಿಕುಮಾರ ಕೃಷ್ಣಮೂರ್ತಿ- ಬಿ.ಎಸ್.ಆರ್., ಕೆ. ಬಸವರಾಜ ಹಿಟ್ನಾಳ- ಪಕ್ಷೇತರ, ಮೋಹನಗೌಡ ಪಾಟೀಲ- ಪಕ್ಷೇತರ, ಉಮೇಶ್ ಬಣಕಾರ್- ಪಕ್ಷೇತರ ಮತ್ತು ನಿರ್ಮಲ ಮಲ್ಲಿಕಾರ್ಜುನ ಹಡಪದ- ಬಿ.ಎಸ್.ಪಿ. ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.
  ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಏ. ೧೭ ರಂದು ಒಟ್ಟು ೧೦ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.  ಪುರದಪ್ಪ ಗುರುಲಿಂಗಪ್ಪ- ಪಕ್ಷೇತರ, ಸಂಗಮೇಶ್ ಶೇಖರಯ್ಯ ಹಿರೇಮಠ- ಪಕ್ಷೇತರ, ಹನುಮಂತಪ್ಪ ಮಲ್ಲಾಡ್- ಪಕ್ಷೇತರ, ಅಮರೇಗೌಡ ಪಾಟೀಲ್ ಬಯ್ಯಾಪುರ- ಕಾಂಗ್ರೆಸ್, ಶಿವಕುಮಾರ ತಿಮ್ಮನಗೌಡ- ಪಕ್ಷೇತರ, ಫಕೀರಪ್ಪ ಚಳಗೇರಿ- ಕೆಜೆಪಿ, ಶರಣಪ್ಪ ಕೆ.- ಜೆ.ಡಿ.ಎಸ್., ಎಂ. ರಾಜಶೇಖರಗೌಡ- ಬಿಎಸ್‌ಆರ್., ಮರಿಯಪ್ಪ ಮಡಿವಾಳರ- ಪಕ್ಷೇತರ ಮತ್ತು ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ- ಜೆ.ಡಿ.ಯು ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.
  ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧೧ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.  ಮಂಜುಳಾ ಪಂಪನಗೌಡ- ಬಿಎಸ್‌ಆರ್., ಶರಣಬಸವ ಬಸನಗೌಡ- ಪಕ್ಷೇತರ, ನಾರಾಯಣಪ್ಪ ಐಲಿ- ಪಕ್ಷೇತರ, ಎಂ. ಖಾದರಸಾಬ್- ಪಕ್ಷೇತರ, ಎನ್. ನಾಗರಾಜ್- ಪಕ್ಷೇತರ, ಜೆ. ವಿಜಯಕುಮಾರ್- ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ, ಫರೀದುದ್ದೀನ್- ಪಕ್ಷೇತರ, ಬಸವರಾಜ ಪಾಟೀಲ್ ಅನ್ವರಿ- ಕೆಜೆಪಿ, ಪರಣ್ಣ ಮುನವಳ್ಳಿ- ಬಿಜೆಪಿ, ಹೆಚ್.ಆರ್. ಶ್ರೀನಾಥ್- ಕಾಂಗ್ರೆಸ್ ಮತ್ತು ಇಕ್ಬಾಲ್ ಅನ್ಸಾರಿ- ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
  ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧೧ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ದುರ್ಗಪ್ಪ ತಂದೆ ಐಯ್ಯಪ್ಪ- ಬಿ.ಎಸ್.ಪಿ., ಪರಶುರಾಮ ಚಲುವಾದಿ- ಪಕ್ಷೇತರ, ಸಿದ್ದಪ್ಪ ಅಕ್ಕಿಗುಣಿ- ಪಕ್ಷೇತರ, ನಾಗರಾಜ ಕೊಳಜಿ- ಪಕ್ಷೇತರ, ಚನ್ನಬಸವನಗೌಡ ಪೋಲಿಸ್ ಪಾಟೀಲ್- ಕೆಜೆಪಿ, ಪಂಪಾಪತಿ- ಜೆ.ಡಿ.ಎಸ್., ಗಂಗಮ್ಮ ಈಶಣ್ಣ ಗುಳಗಣ್ಣವರ್- ಬಿಎಸ್‌ಆರ್., ದ್ಯಾಮಣ್ಣ ಶಂಕರಪ್ಪ ಜಮಖಂಡಿ- ಪಕ್ಷೇತರ, ಸಿ.ಎಂ. ಸೋಮಶೇಖರ್- ಪಕ್ಷೇತರ, ಗಾಣಿಗೇರ ಮಲ್ಲಿಕಾರ್ಜುನ- ಪಕ್ಷೇತರ ಮತ್ತು ಶಿವಶಂಕರ ಲಿಂಗರಾಜದೇಸಾಯಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
  ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧೨ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಲಂಕೇಶ್- ಪಕ್ಷೇತರ, ಪ್ರಕಾಶ್ ರಾಠೋಡ್- ಜೆ.ಡಿ.ಎಸ್., ರಾಮಾನಾಯಕ್- ಬಿ.ಜೆ.ಪಿ., ನಾಗರಾಜ ವಡ್ಡರ್- ಪಕ್ಷೇತರ, ಶಾಮೀಲಪ್ಪ ಯಮನಪ್ಪ- ಪಕ್ಷೇತರ, ಮುಕುಂದರಾವ್ ಭವಾನಿಮಠ- ಬಿ.ಎಸ್.ಆರ್., ಗ್ಯಾನಮ್ಮ ಚೌಡಕಿ- ಸಿಪಿಐ(ಎಂ.ಎಲ್), ಬಸವರಾಜ ಧಡೇಸುಗೂರ- ಕೆ.ಜೆ.ಪಿ., ಕೆ.ಹೆಚ್. ಹುಲುಗಣ್ಣ- ಸರ್ವಜನತಾ ಪಾರ್ಟಿ, ಶಂಕರ್ ಗಣಪತಿ ಲಮಾಣಿ- ಪಕ್ಷೇತರ, ಶ್ರೀಧರ್- ಬಿಎಸ್‌ಪಿ ಮತ್ತು ವಿಠ್ಠೋಬ ಬಾಲದಾಸಪ್ಪ- ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ  ತಿಳಿಸಿದೆ.

Leave a Reply

Top