fbpx

ರಾಷ್ಟ್ರೀಯಬಸವದಳದವರಿಂದ ನಾಳೆ ಆಧ್ಯ ವಚನಕಾರ ಜೇಡರ ದಾಸಿಮಯ್ಯನವರ ಜಯಂತಿ

ಗಂಗಾವತಿ,೨೮- ಬಸವಣ್ಣನವರ ಹಿರಿಯ ಸಮಕಾಲಿನ ಶರಣ ಆಧ್ಯ ವಚನಕಾರ ಜೇಡರ ದಾಸಿಮಯ್ಯನವರ ಜಯಂತಿಯನ್ನು ನಗರದ ಸರೋಜಾನಗರದಲ್ಲಿರುವ  ಬಸವಮಂಟಪದಲ್ಲಿ ರಾಷ್ಟ್ರೀಯ ಬಸವದಳದವರಿಂದ ದಿ,೨೯.ರವಿವಾರ  ಹಮ್ಮಿಕೊಳ್ಳಲಾಗಿದೆ. 
   ಪ್ರತೀವಾರ ಒಬ್ಬ ಶರಣರ ಜಯಂತಿ ಆಚರಿಸಲಾಗುವದು ಈವಾರ ಬಸವಣ್ಣನವರ ಹಿರಿಯ ಸಮಕಾಲಿನ ಶರಣ ಆಧ್ಯ ವಚನಕಾರ ಜೇಡರ ದಾಸಿಮಯ್ಯನವರ ಜಯಂತಿ ಆಚರಿಸಲಾಗುವದು.ಜೇಡರ ದಾಸಿಯ್ಯ ವರ ಭಾವಚಿತ್ತಕ್ಕೆ ಪೊಜೆ ಸಲ್ಲಿಸಿ .ಪ್ರತಿ ರವಿವಾರವಾರದ ಪದ್ದತಿಯಂತೆ ಪ್ರಾರ್ತನೆ, ವಚನ ಪಠಣ ನಂತರ ವೇದಿಕೆ ಕಾರ್ಯಕ್ರಮ ಜರುಗುವದು. 
    ಈಕಾರ್ಯಕ್ರಮದಲ್ಲಿ ಶರಣ ಜೇಡರ ದಾಸಿಮಯ್ಯ ಕುರಿದು ಬಿಜೆಪಿಯ ರಾಜ್ಯ ಹಿರಿಯಮುಖಂಡರಾದ  ತಿಪ್ಪೇರುದ್ರ ಸ್ವಾಮಿ ವಕೀಲರು ಮತ್ತು ನಿವೃತ್ತ ನಾಡ ತಹಸಿಲ್ದಾರ್ ಕೆ.ಬಾಲಪ್ಪ ಮಾತನಡಲಿದ್ದಾರೆ,ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷ ಕೆ.ಪಂಪಣ್ಣ ವಹಿಸುವರು. ಪ್ರಾಸ್ಥಾವಿವಾಗಿ ನಿವೃತ್ತ ಪ್ರಾಚಾರ್ಯರಾದ ಓ.ಎಂ. ಬೊಳ್ಳೊಳ್ಳಿ  ಯವರು ಮಾತನಾಡಲಿದ್ದಾರೆ. ಕಾರಣ ಬಸವಾಭಿಮಾನಿಗಳು, ಜೇಡರ ದಾಸಿಮಯ್ಯನವರ ಸಮಾಜದವರು ಆಗಮಿಸಿ ಶರಣರ ಕೃಪೆಗೆ ಪಾತ್ರರಾಗ ಬೇಕೆಂದು ಪ್ರಕಟಣೆ ಮೂಲಕ ರಾ.ಬಸವದಳದ ಕಾರ್ಯದರ್ಶಿ ವಿನಂತಿಸಿದ್ದಾರೆ.
Please follow and like us:
error

Leave a Reply

error: Content is protected !!