ಫ್ಲೆಕ್ಸ ಕಟ್ಟದಿರಲು ಮನವಿ :ಮಾಧ್ಯಮ ಕೇಂದ್ರ ಸ್ಥಾಪನೆ :ದಾಸೋಹಕ್ಕೆ ರೊಟ್ಟಿಯ ಕಾಣಿಕೆ

ಫ್ಲೆಕ್ಸ ಕಟ್ಟದಿರಲು ಮನವಿ
ಕೊಪ್ಪಳ :  ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ಎಲ್ಲೆಂದರಲ್ಲಿ ಫ್ಲೆಕ್ಸ (ಈಟex) ಗಳನ್ನು ಕಟ್ಟುವ ರೂಢಿ ಮಾಡಿಕೊಂಡಿದ್ದಾರೆ.    ಈ ವರ್ಷ ಜನವರಿ ೧೮ ರಂದು ಜರುಗಲಿರುವ ಜಾತ್ರಾ ಸಮಯದಲ್ಲಿ ಶ್ರೀಗವಿಮಠ, ರಸ್ತೆ, ಹಾಗೂ ಜಾತ್ರಾ ಅಂಗಡಿಗಳ ಆವರಣದಲ್ಲಿ ಫ್ಲೆಕ್ಸಗಳನ್ನು ಕಟ್ಟಬಾರದೆಂದು  ಶ್ರೀ ಗವಿಮಠದಿಂದ ಪ್ರಕಟಿಸಲಾಗಿದೆ.  
ಮಾಧ್ಯಮ ಕೇಂದ್ರ ಸ್ಥಾಪನೆ  :  ಕೊಪ್ಪಳ :  ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ  ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಪತ್ರಿಕಾ ಹಾಗೂ ದೂರದರ್ಶನ ಮಾಧ್ಯಮದ ಪತ್ರಕರ್ತರಿಗಾಗಿ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ದಿನಾಂಕ ೧೫-೦೧-೨೦೧೪ ರಂದು ಇದು ಉದ್ಘಾಟನೆಯಾಗಲಿದೆ. ಮಾಧ್ಯಮ ಬಳಗದವರು ಇದರ ಪ್ರಯೋಜನ ಪಡೆಯಬೇಕೆಂದು ಶ್ರೀಗವಿಮಠದ  ತಿಳಿಸಿದೆ. 
ದಾಸೋಹಕ್ಕೆ ರೊಟ್ಟಿಯ ಕಾಣಿಕೆ :   ಕೊಪ್ಪಳ : ಸಂಸ್ಥಾನ ಶ್ರೀ ಗವಿಮಠದ ಜಾತ್ರೆಗೆ ದಿನಗಣನೆ ಪ್ರಾರಂಭವಾಗಿದ್ದು, ಮಹಾದಾಸೋಹಕ್ಕೆ ಪ್ರತಿ ದಿನ ದವಸ ಧಾನ್ಯ ರೊಟ್ಟಿಯ ಕಾಣಿಕೆಗಳು ನಿರಂತರವಾಗಿ ಹರಿದು ಬರುತ್ತಿವೆ. ಇಂದು ಕೂಡ ಮರಕಟ್ ಗ್ರಾಮದ ಭಕ್ತರು ೨೦೦೦ ರೊಟ್ಟಿಗಳನ್ನು ಮಹಾದಾಸೋಹಕ್ಕೆ ಕಾಣಿಕೆಯಾಗಿ ಸಮರ್ಪಿಸಿದರು. ಪೂಜ್ಯ ಶ್ರೀಗಳು ಕಾಣಿಕೆ ನೀಡಿದ ಭಕ್ತರನ್ನು ಆಶೀರ್ವದಿಸಿದರು.
Please follow and like us:
error

Related posts

Leave a Comment