ಕೊಪ್ಪಳದ ಗವಿ ಸಿದ್ದೇಶ್ವರ ಜಾತ್ರೆಯಲ್ಲಿ ವ್ಯಕ್ತಿಯ ಬರ್ಬರ ಕೊಲೆ.

ಕೊಪ್ಪಳ-01-
ಕಳೆದ ತಡರಾತ್ರಿ ಈ ಘಟನೆ ನಡೆದಿದ್ದು, ಕಳೆದ 5 ದಿನಗಳ ಹಿಂದೆಯಷ್ಟೇ ಕೊಪ್ಪಳದಲ್ಲಿ
ಆರಂಭವಾಗಿರುವ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಕೊಲೆ ನಡೆದಿದ್ದು ಎಲ್ಲರನ್ನೂ ಬೆಚ್ಚಿ
ಬೀಳುವಂತೆ ಮಾಡಿದೆ. ಆದರೆ ಹತ್ಯೆಯಾದ ವ್ಯಕ್ತಿ ಯಾರು ಎಲ್ಲಿಯವನು ಎಂದು ತಿಳಿದು
ಬಂದಿಲ್ಲ. ಕುತ್ತಿಗೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ್ದು,
ರಕ್ತಸಿಕ್ತವಾಗಿ ಬಿದ್ದಿದ್ದ ಮೃತ ದೇಹವನ್ನು ಕಂಡ ಸ್ಥಳೀಯರು ಕೊಪ್ಪಳ ನಗರ ಪೊಲೀಸರಿಗೆ
ವಿಷಯ ಮುಟ್ಟಿಸಿದ್ದಾರೆ. ಯಾರೋ ಬೇರೆ ಕಡೆ ಕೊಲೆ ಮಾಡಿ ಇಲ್ಲಿ ಬಿಸಾಡಿ ಹೋಗಿದ್ದಾರೆ
ಎಂಬ ಅನುಮಾನ ವ್ಯಕ್ತವಾಗಿದೆ.
Please follow and like us:
error