fbpx

ಕೊಪ್ಪಳದಲ್ಲಿ ಡಿವಿಡಿ ಥೇಟರ್ ಪ್ರಾರಂಭಿಸಲಾಗುವದು

ಕೊಪ್ಪಳ, ಡಿ. ೩೦. ನಗರದಲ್ಲಿ ಹಳೆಯ ಕನ್ನಡ ಹಾಗೂ ಅಂತರಾಷ್ಟ್ರೀಯ ಉತ್ತಮ ಚಲನಚಿತ್ರ ಹಾಗೂ ಕಿರು ಚಿತ್ರಗಳ ಪ್ರದರ್ಶನಕ್ಕೆ ಉತ್ತಮವಾದ ಮಲ್ಟಿಮೀಡಿಯಾ ಡಿವಿಡಿ ಚಿತ್ರಮಂದಿರವನ್ನು ಬೆಳ್ಳಿ ಮಂಡಲ ಮೂಲಕ ಪ್ರಾರಂಭಿಸಲಾಗುವದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಹೇಳಿದರು.
ಅವರು ನಗರದಲ್ಲಿಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲ, ಯುವಚೇತನ ಶ್ರೀ ಶಿವರಾಜ ತಂಗಡಗಿ ಅಭಿಮಾನಿಗಳ ವೇದಿಕೆ, ಬ್ಲ್ಯೂಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ|| ವಿಷ್ಣುವರ್ಧನ ಪುಣ್ಯ ಸ್ಮರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಚಿತ್ರರಂಗ ಒಂದು ಸಣ್ಣ ಉದ್ಯಮವಾಗಿದ್ದರೂ ಸಹ ಅದು ಎಲ್ಲಾ ಸಮುದಾಯಗಳನ್ನು ತನ್ನೊಳಗೆ ತೆಗೆದುಕೊಂಡ ಒಂದು ಶಕ್ತಿಯಾಗಿದೆ, ಅದನ್ನು ಆರಾಧಿಸುವವರ ಸಂಖ್ಯೆಯುವ ದೊಡ್ಡದಿದೆ, ಅದನ್ನು ಮನಗಂಡು ಡಾ|| ಭಾರತಿ ಕುಟುಂಬ ವಿಷ್ಣು ಸ್ಮರಣೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು ಅವರಿಗೆ ನಾವೂ ಸ್ಪಂದಿಸಬೇಕು ಎಂದರು. 
ಖ್ಯಾತ ಗಾಯಕ ಸದಾಶಿವ ಪಾಟೀಲ ವಿಷ್ಣುಗೀತೆ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಕಿ, ಗಮಕ ಕಲಾವಿದೆ ಅನುಸೂಯಾ ಶಾಸ್ತ್ರೀ ಜಹಗೀರದಾರ ಮಾತನಾಡಿ, ವಿಷ್ಣು ರಾಜ್ ನಂತರ ನಿಲ್ಲುವ ಮೇಉ ನಟ, ಅವರನ್ನು ಆರಾಧಿಸದವರು ಯಾರಿದ್ದಾರೆ, ಅವಿನ್ನಷ್ಟು ವರ್ಷ ನಮ್ಮ ಜೊತೆ ಇರಬೇಕಿತ್ತು, ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಕೌಕಂಬಿಕ ಎಲ್ಲ ಬಗೆಯ ಪಾತ್ರಗಳಿಗೆ ಜೀವ ತುಂಬಿದ ಮಹಾನ್ ಕಲಾವಿದ ಎಂದರು.
ವೀರ ಕನ್ನಡಿಗ ಸಂಘದ ಶಿವಾನಂದ ಹೊದ್ಲೂರ ಅಧ್ಯಕಷತೆವಹಿಸಿ ಮಾತನಡಿ, ಚಲನಚಿತ್ರರಂಗದಲ್ಲಿ ಕೊಪ್ಪಳ ಆಗೊಮ್ಮೆ ಈಗೊಮ್ಮೆ ಮಾತ್ರ ಎನ್ನುವಂತೆ ಇದೆ, ಕೊಪ್ಪಳ ಬೆಳ್ಳಿ ಮಂಡಲ ಮಂಜುನಾಥನ ನೇತೃತ್ವದಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ, ಚಿತ್ರ ರಂಗದಲ್ಲಿ ಗೊಂಡಬಾಳ ಕಾಲಿಡುತ್ತಿದ್ದು ಪ್ರತಿಯೊಬ್ಬರು ಸಹಕರಿಸಬೇಕು, ಎಲ್ಲರೂ ಕನ್ನಡ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸಬೇಕು ಎಂದರು. 
ಪುಣ್ಯಸ್ಮರಣೆ ನಿಮಿತ್ಯ ಹಮ್ಮಿಕೊಂಡಿದ್ದ ಭಾವಗೀತೆ ಮತ್ತು ಚಲನಚಿತ್ರ ಗೀತೆ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. 
ಗವಿಸಿದ್ದಪ್ಪ ಕರ್ಕಿಹಳ್ಳಿ ಸ್ವಾಗತಿಸಿದರು, ಸುನಿತಾ ಪ್ರಾರ್ಥಿಸಿದರು, ಶಿಕ್ಷಕ ಎಸ್. ಎಂ. ಗೌಡರ ಕಾರ್ಯಕ್ರಮ ನಿರೂಪಿಸಿದರು, ನಿವೇದಿತಾ ವಂದಿಸಿದರು.
ಬಹುಮಾನ ವಿಜೇತರು : ಭಾವಗೀತೆ – ರಮ್ಯಾ ಕುಲಕರ್ಣಿ ಮತ್ತು ಸುನಿತಾ ಒಂಟೆತ್ತಿನವರ (ಪ್ರಥಮ) ರೂಪಾ ಬೆಲ್ಲದ (ದ್ವಿತಿಯ) ಶೃತಿ ಬಂಗಾಳಿಗಿಡದ (ತೃತಿಯ) ಚಲನಚಿತ್ರ ಗೀತೆ – ಪೂರ್ಣಿಮಾ ಬಾಲಾಗವಿ (ಪ್ರಥಮ) ಮಂಜುಳಾ ಅರಕೇರಿ (ದ್ವಿತಿಯ) ಮತತು ಮೇಘಶ್ರೀ ಮ್ಯಾಗೇರಿ (ತತೀಯ).
Please follow and like us:
error

Leave a Reply

error: Content is protected !!