ಮಹಿಳೆಯರಿಗೆ ಅಗತ್ಯ ರಕ್ಷಣೆ ಬೇಕು

ಕೊಪ್ಪಳ: ಸೆ.೧೬.: ಇತ್ತಿಚಿನ ದಿನಗಳಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಘಟನೆಗಳಿಂದ ಸಮಾಜದ ಮಹಿಳೆಯರಲ್ಲಿ ಭಯ ಹಾಗೂ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕಳೆದ ಡಿಸೆಂಬರ್ ನಲ್ಲಿ ದೆಹಲಿ ಬಸ್ಸನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಆ ವಿದ್ಯಾರ್ಥಿನಿಯ ಸಾವು ದೇಶದ ಜನತೆಯಲ್ಲಿ ಅತ್ಯಂತ ಕಳವಳ ಮೂಡಿಸಿತು. ಈ ಘಟನೆ ಮಾಸುವ ಮುನ್ನವೇ ಮುಂಬೈ ಶಕ್ತಿ ಮಿಲ್ಸನಲ್ಲಿ ಪತ್ರಕರ್ತೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಜನರಲ್ಲಿ ದಿಗ್ಭ್ರಮೆಯುಂಟುಮಾಡಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಹಿಳೆಯರಿಗೆ ಅಗತ್ಯ ರಕ್ಷಣೆ ನೀಡಬೇಕೆಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ದೇಶದ ಈ ದುರಾವಸ್ಥೆಯನ್ನು ತಹಬಂದಿಗೆ ತರುವಲ್ಲಿ ಕೇಂದ್ರ ರಾಜ್ಯ ಸರಕಾರಗಳು ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು. ಮಹಿಳಾ ಅತ್ಯಾಚಾರ ದೌರ್ಜನ್ಯ ಪ್ರಕರಣಗಳ ತಾರ್ಕಿಕ ಮತ್ತು ತ್ವರಿತ ಇಥ್ಯಥ್ಕ್ಕೆ ವಿಶೇಷ ನ್ಯಾಯಾಲಯಗಳ ರಚನೆಯಾಗಬೇಕು. ಅತ್ಯಾಚಾರಿಗಳಿಗೆ ಉಗ್ರಶಿಕ್ಷೆ ವಿಧಿಸಲು ದೇಶದ ಕಾನೂನಿಗೆ ತಿದ್ದುಪಡಿ ತರಬೇಕು, ಅಲ್ಲದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕಾತಿ ಅದರಲ್ಲೂ ವಿಶೇಷವಾಗಿ ಮಹಿಳಾ ಸಿಬ್ಬಂದಿ ನಿಯೋಜನೆ ಆಗಬೇಕೆಂದು ಆಗ್ರಹಿಸಿದರು, ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷರಾದ ಹೇಮಲತಾ ನಾಯಕ, ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿ, ಸಂಸದರಾದ ಶಿವರಾಮೇಗೌಡ, ಪ್ರದಾನ ಕಾರ್ಯದರ್ಶಿಗಾಳಾದ ಸುಜಾತ ಗೊರ್ಲೆಕೊಪ್ಪ, ಶಾಂತಕ್ಕ ಹಿರೇಮಠ, ಶ್ಯಾಮಲಾ ಕೊನಾಪುರ, ಮಧುರಾ ಕರ್ಣಂ, ನಗರಾಧ್ಯಕ್ಷರಾದ ಹೇಮಾವತಿ ಮಂಗಳೂರು, ಉಪಾಧ್ಯಕ್ಷರಾದ ಅಕ್ಕಮ್ಮ ನಂದಿಹಾಳಮಠ, ನಗರಸಭೆ ಸದಸ್ಯರಾದ ಸುವರ್ಣ ನಿರಲಗಿ, ನಿರ್ಮಲಾ ಕಾರಟಗಿ, ಅಕ್ಕಮ್ಮ, ಅಪ್ಪಣ್ಣ ಪದಕಿ, ಪೀರಾಹುಸೇನ್ ಹೊಸಳ್ಳಿ, ಗವಿಸಿಸದ್ದಪ್ಪ ಚಿನ್ನೂರು, ಪ್ರಾಣೇಶ ಮಾದನೂರು, ಸದಾಶಿವಯ್ಯ ಹಿರೇಮಠ, ರಾಜು ಬಾಕಳೆ, ಇನ್ನೂ ಮುಂತಾದವರು ಭಾಗವಹಿಸಿದ್ದರು ಎಂದು ಜಿಲ್ಲಾ ಬಿ.ಜೆ.ಪಿ. ವಕ್ತಾರರಾದ ಚಂದ್ರಶೇಖರ ಪಾಟೀಲ್ ಹಲಗೇರಿ  ತಿಳಿಸಿದ್ದಾರೆ.
Please follow and like us:
error