ಶಾಲಾ ಆವರಣದಲ್ಲಿಯ ಅನಧಿಕೃತ ಕಟ್ಟಡ ನೆಲಸಮ

ಕೊಪ್ಪಳ : ಲೇಬಗೇರಿ ಗ್ರಾಮ ಪಂಚಾಯತಿಯ ಹಟ್ಟಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅನಧಿಕೃತವಾಗಿ ಕಟ್ಟಲಾಗಿದ್ದ  ಕಟ್ಟಡವನ್ನು ೨೬-೧೨-೨೦೧೧ರಂದು ತೆರವುಗೊಳಿಸಲಾಯಿತು. ಶಾಲಾ ಆವರಣದಲ್ಲಿ ಅನಧಿಕೃತವಾಗಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು . ಸೂಕ್ತ ಪೊಲೀಸ್ ಬಂದೋಬಸ್ತಿನೊಂದಿಗೆ ಕಟ್ಟಡವನ್ನು ಜೆಸಿಬಿಯಿಂದ ಕೆಡವಲಾಯಿತು. ಈ ಸಮಯದಲ್ಲಿ ಬಿಇಓ ಉಮೇಶ ಪೂಜಾರ, ಶಿಕ್ಷಣ ಸಂಯೋಜಕ ಸೋಮಶೇಖರ ಹರ್ತಿ, ಬಿಆರ್‌ಪಿ ವಿರೇಶ ನಿಡಗುಂದಿ, ಬಿಆರ್‌ಪಿ ಪ್ರಭು ಬಳಿಗಾರ, ಸಿಆರ್ ಪಿ ದ್ಯಾಮಣ್ಣ ಅಬ್ಬಿಗೇರಿ, ಗ್ರಾಮ ಪಂಚಾಯತ್ ಸದಸ್ಯರಾದ ರಾಮಣ್ಣ ಚೌಡಕಿ, ಗಂಗಪ್ಪ ಉಳ್ಳಾಗಡ್ಡಿ,ಎಸ್‌ಡಿಎಂಸಿ ಅಧ್ಯಕ್ಷರಾದ ಬೀರಪ್ಪ, ಶಾಲಾ ಮುಖ್ಯೋಪಾಧ್ಯಯರಾದ ಶ್ರೀನಿವಾಸ ಚಿತ್ರಗಾರ, ಪಿಎಸ್ ಐ ಸಜ್ಜನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 
Please follow and like us:
error