ಬಾಲಕ ಕಾಣೆ.

ಕೊಪ್ಪಳ, ಆ.೧೨ ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಸರ್ಕಾರಿ ಬಾಲಕರ ಬಾಲ ಮಂದಿರದಿಂದ ದುರ್ಗಾ ಪ್ರಸಾದ ತಂದೆ,ಕೃಷ್ಣ ಮಾದಿಗೋಳ (೧೨) ಎಂಬ ಬಾಲಕ ಆ.೧೧ ರಿಂದ ಕಾಣೆಯಾಗಿರುವ ನ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆ ಪಿ.ಎಸ್.ಐ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
  ಬಾಲಕನನ್ನು ಅಳವಂಡಿ ಪೊಲೀಸ್ ಠಾಣೆಯಿಂದ ತಾತ್ಕಾಲಿಕ ಪೋಷಣೆಗಾಗಿ ಆ.೧೦ ರಂದು ಬಾಲಮಂದಿರಕ್ಕೆ ವರ್ಗಾಯಿಸಲಾಗಿತ್ತು. ಆದರೆ, ಈ ಬಾಲಕ ಆ.೧೧ ರಂದು ಬೆಳಿಗ್ಗೆ ೦೫.೩೦ ಗಂಟೆಗೆ ಬಾಲಮಂದಿರದ ರಕ್ಷಕರ ಕಣ್ಣು ತಪ್ಪಿಸಿ ಹೊರಗೆ ಹೋದವನು ವಾಪಸ್ ಕೇಂದ್ರಕ್ಕೆ ಬಾರದೇ, ಎಲ್ಲಿಯೋ ಕಾಣೆಯಾಗಿದ್ದಾನೆ. ಕಾಣೆಯಾದ ಬಾಲಕನ ವಿವರ  ಇಂತಿದೆ.  ಹೆಸರು-ದುರ್ಗಾ ಪ್ರಸಾದ ವಯಸ್ಸು: ೧೨ ವರ್ಷ, ಸಾ||ಹೊಸಪೇಟೆ, ಜಿಲ್ಲೆ|| ಬಳ್ಳಾರಿ, ಎತ್ತರ-೦೪ ಫೀಟು ೦೭ ಇಂಚು, ತೆಳ್ಳನೆಯ ಮೈಕಟ್ಟು, ಕೋಲು ಮುಖ, ಕಪ್ಪು ಮೈಬಣ್ಣ, ಕಪ್ಪು ತಲೆ ಕೂದಲು ಹೊಂದಿದ್ದಾನೆ. ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ರೌಂಡ್ ನೆಕ್ ಟೀಶರ್ಟ್, ಖಾಕಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾನೆ. ಕನ್ನಡ, ತೆಲುಗು ಭಾಷೆ ಮಾತನಾಡುತ್ತಾನೆ. 
  ಈ ಚಹರೆಯುಳ್ಳ ಬಾಲಕ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಂಡಲ್ಲಿ ಅಥವಾ ಬಾಲಕನ  ಬಗ್ಗೆ ಮಾಹಿತಿ ಸಿಕ್ಕಲ್ಲಿ ನಗರ ಪೊಲೀಸ್ ಠಾಣೆ, ಕೊಪ್ಪಳ, ದೂರವಾಣಿ: ೦೮೫೩೯-೨೨೦೩೩೩, ನಗರ ಪೊಲೀಸ್ ಠಾಣೆಯ ಪಿ.ಐ, ಮೊಬೈಲ್: ೯೪೮೦೮೦೩೭೪೫, ಕೊಪ್ಪಳ ಕಂಟ್ರೋಲ್ ರೂಂ: ೦೮೫೩೯-೨೩೦೧೦೦, ೨೩೦೨೨೨ ಇವರನ್ನು ಸಂಪರ್ಕಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆ ಪಿ.ಎಸ್.ಐ ಕೋರಿದ್ದಾರೆ. 
Please follow and like us:
error