ಶಿಕ್ಷಣದಿಂದ ಮಾತ್ರ ಸರ್ವಾಂಗೀಣ ಅಭಿವೃದ್ಧಿ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ:ಫೆ-೨೧ : ಸಮಾಜವು ಆರ್ಥಿಕವಾಗಿ ಮುಂದುವರೆಯಲು ಶಿಕ್ಷಣ ಅತ್ಯವಶ್ಯಕ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು, ಇದರಿಂದ ವೈಯಕ್ತಿಕ ಅಭಿವೃದ್ಧಿ ಜೋತೆಗೆ ಸಮಾಜದ ಅಭಿವೃದ್ಧಿಯಾತಯಾಗುತ್ತದೆ. ಯಾರೊಬ್ಬರು ಶಿಕ್ಷಣ ಪಡೆಯಲು ವಂಚಿತರಾಗಬಾರದು ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು  ಹೇಳಿದರು. ಅವರು ನಗರದ ದಿಡ್ಡಿಕೇರಾ, ಶಿರಸಪ್ಪಯ್ಯನಮಠ, ಗಾಂದಿನಗರ, ಗೌರಿಅಂಗಳ ಓಣಿಯಲ್ಲಿ ಹೆಚ್.ಕೆ.ಡಿ.ಬಿ. ಅನುದಾನದ 
ಅಡಿಯಲ್ಲಿ ರೂ.೪೨ ಲಕ್ಷದ ಶಾಲಾ ಕೊಠಡಿ ಕಾಮಗಾರಿಯ ಭೂಮಿ ಪೂಜೆ ವಾರ್ಡ ನಂ:-೧೨ ಮತ್ತು ೨೬ರಲ್ಲಿ ರೂ.೨೬ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು  ಸರ್ಕಾರ ಬಡಮಕ್ಕಳ ಶೋಷಿತ ವರ್ಗಗಳ ಅಲ್ಪಸಂಖ್ಯಾತರ, ದಲಿತರ ಉದ್ದಾರಕ್ಕಾಗಿ ಅವರ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆತಂದಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಶ್ರಮಿಸಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ ಎ.ಪಿ.ಎಮ್.ಸಿ. ಅದ್ಯಕ್ಷರಾದ ಗವಿಸಿದ್ದಪ್ಪ ಮುದುಗಲ್, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಮಹೇಶ ಬಜಂತ್ರಿ, ಶ್ರೀಮತಿ ಸರಿತಾ ಸುಧಾಕರ, ವೀರಣ್ಣ ಸಂಡೂರು, ಬಾಷುಸಾಬ್ ಕತೀಬ್, ವಾಹೀದ್ ಸೂಂಪೂರು, ನೀಸಾರ ಸಾಬ್ ಕೊಲ್ಕಾರ, ಡಾ|| ಕಲೀಲ್ ಅಹಮೇದ, ಅಜ್ಜಪ್ಪ ಸ್ವಾಮಿ, ಮಹೇಬುಬ್ ಮಚ್ಚಿ, ಮಂಜುನಾಥಗಾಳಿ, ಬಾಬುಸಾಬ್ ಮಕೆಂದರ್, ನಜೀರ್ ಆದೋನಿ, ರಹೀಮ್ ಮಕಾಂದರ, ರಮೇಶ ಬೆಲ್ಲದ್, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.
Please follow and like us:
error