ಯತ್ನಟ್ಟಿ ಗ್ರಾಮಸ್ಥರ ಸ್ವಾಭಿಮಾನದ ಹೋರಾಟಕ್ಕೆ ಸಂದ ಜಯ

ಕೊಪ್ಪಳ : ಯತ್ನಟ್ಟಿ ಭಾಗ್ಯನಗರ ನಡುವೆ ಸೇತುವೆ ನಿರ್ಮಾಣಕ್ಕಾಗಿ ಕೈಗೊಂಡ ಹೋರಾಟ ಕೊನೆಗೂ ಜಯದೊಂದಿಗೆ ಕೊನೆಗೊಂಡಿದೆ. ೨೦೦೪ ರಲ್ಲಿ ಎಸ್.ಎಮ್. ಕೃಷ್ಣ ಸರ್ಕಾರದಲ್ಲಿ ೧.೪೬ ಲಕ್ಷಗಳು ಅನುಮೋದನೆಯಾಯತಿಉ. ಆನಂತರ ಸಮ್ಮಿಶ್ರ ಸರ್ಕಾರ ರಚಿಸಿದ. ಜೆ.ಡಿ.ಎಸ್. ಮತ್ತು ಬಿ.ಜೆ.ಪಿ. ಸರ್ಕಾರದಲ್ಲಿ ಮುಖ್ಯ ಮಂತ್ರಿಗಳಾದ ಕುಮಾರಸ್ವಾಮಿಯವರ ನೆಲೋಗಿಪುರ ಗ್ರಾಮ ವಾಸ್ತವ್ಯಕ್ಕೆ ಬಂದಾಗ ಮನವಿ ಕೊಟ್ಟಿದ್ದೇವೆ. ಆ ಸರ್ಕಾರದಲ್ಲಿ  ೭ ಕೋಟಿ ೪೬ ಲಕ್ಷಗಳು ಅನುಮೋದನೆಯಾಯಿತು. ಈಗ ಈ ಸರ್ಕಾರದ ಅವಧಿಯಲ್ಲಿ ಶಾಸಕರು ೪ ಕೋಟಿಗೆ ಅನುಮೋದನೆ ಮಾಡಿಸಿದ್ದಾರೆ. ಆದಷ್ಟು ಬೇಗನೆ ಕ್ರಿಯಾ ಯೋಜನೆ ಮತ್ತು ಎಸ್ಟಿಮೇಟ್‌ನ್ನು ಸರ್ಕಾರಕ್ಕೆ ವರದಿ ಕಳುಹಿಸಬೇಕು. ತೀವೃಗತಿಯಲ್ಲಿ ಕಾಮಗಾರಿಯನ್ನು ನಡೆಸಬೇಕೆಂದು ಗ್ರಾಮಸ್ಥರ ಒತ್ತಾಯ.
ಹೋರಾಟದಲ್ಲಿ ಜಗದೀಶ ಹೆಬ್ಬಳ್ಳಿ, ಮರಿಯಪ್ಪ ಹೆಚ್. ಪೂಜಾರ, ಪ್ರಭುಗೌಡ ಪೋಲಿಸ್ ಪಾಟೀಲ, ಮಂಜುನಾಥ ಹೆಬ್ಬಳ್ಳಿ, ಲಿಂಗರಾಜ ಪಲ್ಲೇದ, ಬಸವರಾಜ ಮಾರಿ, ರಾಮಣ್ಣ ಬಂಡ್ಯಾಳ, ರಾಮಣ್ಣ ಪೂಜಾರ, ದ್ಯಾನಪ್ಪ ಮಂಗಳೂರು, ಶಿವನಗೌಡ ಹೊಸಮನಿ ಇನ್ನೂ ಮುಂತಾದವರು ನೇತೃತ್ವವಹಿಸಿದ್ದರು.
ಹೋರಾಟಕ್ಕೆ ಬೆಂಬಲಿಸಿ ಭಾಗವಹಿಸಿದವರು ಶ್ರೀನಿವಾಸ ಹ್ಯಾಟಿ ಭಾಗ್ಯನಗರ ತಾಲೂಕ ಪಂಚಾಯತ ಸದಸ್ಯರು, ವಿರುಪಾಕ್ಷಗೌಡ ರಾಮತಾಳ ನರೆಗಲ್ಲ ಓಜಿನಹಳ್ಳಿ ಗ್ರಾಮ ಪಂಚಾಯತ ಸದಸ್ಯರು. ಮಹಿಳೆಯರು ಮತ್ತು ಹಿರಿಯರು ಕಿರಿಯರು ಗ್ರಾಮಸ್ಥರು ಬೆಂಬಲ ವ್ಯಕ್ತಪಡಿಸಿದರು.
Please follow and like us:
error