ಕಲ್‌ತಾವರಗೇರಾ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಕೊಪ್ಪಳ : ದಿನಾಂಕ ೧೧-೧೨-೨೦೧೨ ರಂದು ಕೊಪ್ಪಳ ತಾಲೂಕಿನ ಕಲ್‌ತಾವರಗೇರಾ ಗ್ರಾಮ ಪಂಚಾಯತಿಯ ೨೦೧೦ ರ ಎರಡನೆ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಸಭೆ ಜರುಗಿತು. ಶ್ರೀಮತಿ ಅಮರವ್ವ ಅಮರಪ್ಪ ಅಧ್ಯಕ್ಷರಾಗಿ. ಶ್ರೀಮತಿ ಮಂಗಳಮ್ಮ ದುರಗೇಶ ಉಪಾಧ್ಯಕ್ಷರಾಗಿ ಅವಿರೊಧವಾಗಿ ಆಯ್ಕೆಯಾದರು.   ಸತ್ಯ ನಾರಾಯಣ ನಾಯಕ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪಂಚಾಯತ್ ರಾಜ್ ಇಂಜನಿಯರಿಂಗ್ ಉಪ ವಿಭಾಗ ಕೊಪ್ಪಳ ಇವರು ಚುನಾವಣೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು ಒಟ್ಟು ೧೯ ಜನ ಸದಸ್ಯರು ಸಭೆಯಲ್ಲಿ ಹಾಜರಿದ್ದರು.  ಶರಣಯ್ಯ ಸಸಿಮಠ ಪಂಚಾಯತ ಅಭಿವೃದ್ಧಿ ಅಧಿಖಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮ ನಿರ್ವಹಿಸಿದರು. ಗ್ರಾ. ಪಂ. ಸಿಬ್ಬಂದಿ ಭಾಗವಹಿಸಿದ್ದರು.

Leave a Reply