ಬಸವಮಹಾಮಾನವ ನಾಟಕ

 ಕೊಪ್ಪಳ:  ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಆಂಗವಾಗಿ    ಕೈಲಾಸಮಂಟಪದಲ್ಲಿ  ಇಂದು ದಿನಾಂಕ ೧೭ ರಂದು ಸಾಯಂಕಾಲ ೭ ಗಂಟೆಗೆ ಬಸವಮಹಾಮಾನವ  ಎಂಬ ನಾಟಕ ಪ್ರದರ್ಶನವಿರುತ್ತದೆ.  ಗಂಗಾವತಿಯ ಶರಣ ಸಂಸ್ಕೃತಿ ಕಲಾ ವೇದಿಕೆಯ ತಂಡದಿಂದ ಪ್ರದರ್ಶನಗೊಳ್ಳಲಿರುವ ಈ ನಾಟಕವು ಮಹಾನ್ ಮಾನವತಾವಾದಿ ಬಸವಣ್ಣನವರ ಜೀವನದಲ್ಲಿನ ಕ್ರಾಂತಿಕಾರಕ ಸಂಗತಿಗಳನ್ನು ಕುರಿತು ಸಮಗ್ರ ವಿಷಯವನ್ನು ಒಳಗೊಂಡಿರುತ್ತದೆ. ರಚನೆ  ಅಯ್ಯಪ್ಪಯ್ಯ ಹೂಡಾ ರಾಯಚೂರು, ನಿರ್ದೇಶನ   ಎಂ.ಪರುಶುರಾಮಪ್ರಿಯ.ಗಂಗಾವತಿ ಮಾಡಿರುತ್ತಾರೆ. ಕಾರಣ ಕೊಪ್ಪಳದ ಮಹಾಜನತೆ ಈ ನಾಟಕ ಪ್ರದರ್ಶನವನ್ನು ನೋಡಬೇಕಾಗಿ ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ. 
Please follow and like us:
error