ಹಗಲುವೇಷ ಕಲಾವಿದ ವಿಭೂತಿ ಗುಂಡಪ್ಪನವರೊಂದಿಗೆ ಸಂವಾದ

 ನಗರದ ಎಸ್.ಕೆ.ಎನ್.ಜಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ವಿಭೂತಿ ಗುಂಡಪ್ಪನವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ’ರಂಗಭೂಮಿ ಮತ್ತು ಹಗಲುವೇಷ ಕಲಾವಿದರು’ ಕುರಿತು ವಿಭೂತಿ ಗುಂಡಪ್ಪನವರು ತಮ್ಮ ಜೀವನಾನುಭವವನ್ನು ಹಂಚಿಕೊಂಡರು. ರಾಮಾಯಣ ಮತ್ತು ಮಹಾಭಾರತವನ್ನು ಮನೆ ಮನೆಗೆ ತಲುಪಿಸುವಲ್ಲಿ ಹಗಲುವೇಷ ಸಮುದಾಯದ ಕೊಡುಗೆ ಅಪಾರವಾದುದು ಎಂದು ತಿಳಿಸಿದರು. 
       ಇದೇ ಸಂದರ್ಭದಲ್ಲಿ ಆಧುನಿಕ ರಂಗಭೂಮಿ ಮತ್ತು ಜನಪದ ಕಲಾವಿದರ ಬದುಕು ದುಸ್ತರವಾಗಿದೆ ಎಂದರು. ಎಮ್.ಎ ಕನ್ನಡ ವಿದ್ಯಾರ್ಥಿಗಳು ಗುಂಡಪ್ಪವನರೊಂದಿಗೆ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಕವಿ ರಮೇಶ ಗಬ್ಬೂರ್, ವಿಭೂತಿ ಉಮೇಶ, ರಾಜಕುಮಾರ್, ಕುಮಾರಸ್ವಾಮಿ ಉಪಸ್ಥಿತರಿದ್ದರು. ಕನ್ನಡವಿಭಾಗದ ಜಾಜಿ ದೇವೇಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಹಸನ್ಮಿಯ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಗವಿಸಿದ್ದಪ್ಪ ಹಂದ್ರಾಳ್ ನಿರೂಪಿಸಿದರು.
Please follow and like us:

Leave a Reply