You are here
Home > Koppal News > ಸಡಗರ ಸಂಭ್ರಮದಿಂದ ಈದುಲ್-ಫಿತ್ರ ಆಚರಣೆ.

ಸಡಗರ ಸಂಭ್ರಮದಿಂದ ಈದುಲ್-ಫಿತ್ರ ಆಚರಣೆ.

ಕೊಪ್ಪಳ:೧೮, ನಗರದ ಹುಲಿಕೆರೆ ಹತ್ತಿರ ಇರುವ ಹೊಸ ಈದ್ಗಾ ಮೈದಾನದಲ್ಲಿ ಬೆಳೆಗ್ಗೆ ೧೦.೦೦ ಘಂಟೆಗೆ ನಗರದ ಮುಸ್ಲಿಂ ಬಾಂದವರು ಹೊಸ ಬಟ್ಟೆಗಳನ್ನು ತೊಟ್ಟುಕೊಂಡು ಸಂಭ್ರಮ ಸಡಗರದಿಂದ ರಂಜಾನ್ ಮಾಸಾಚಾರಣೆನಂತರ ಆಚರಿಸುವ ಹಬ್ಬವಾದ ಈದುಲ್ ಫಿತ್ರದಲ್ಲಿ ಪಾಲ್ಗೋಂಡು ಸಡಗರದಿಂದ ಈದ್ ಆಚರಣೆ ಮಾಡಿದರು. ಈ ಸಾಮುಹಿಕ ಪ್ರಾರ್ಥನೆಯಲ್ಲಿ ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳರವರು ಪಾಲ್ಗೋಂಡು ಮುಸ್ಲಿಂ ಬಾಂದವರಿಗೆ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಮಾಜನ್ನು ಮುಫ್ತಿ ನಜೀರ್ ಅಹೇಮದ್ ತಸ್ಕಿಂ ಪ್ರಾರ್ಥನೆಯನ್ನು ಸಲ್ಲಿಸಿ ವಿಶೇಷವಾಗಿ ನಾಡಿನಲ್ಲಿ ಕೊರತೆ ಇರುವ ಮಳೆಗಾಗಿ ಹಾಗೂ ಶಾಂತಿ ಸೌಹಾರ್ದತೆಗೆ ಅಲ್ಲಾನಲ್ಲಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಎಸ್.ಬಿ.ನಾಗರಳ್ಳಿ, ಗವಿಸಿದ್ದಪ್ಪ ಮುದುಗಲ್, ಸಮಾಜದ ಮುಖಂಡರಾದ ಮರ್ದಾನಅಲಿ ಅಡ್ಡೇವಾಲೆ, ಬಾಷುಸಾಬ್ ಕತೀಬ್, ಮುನೀರ್ ಕುಂಬಾರ ಓಣಿ, ಜಾಫರ್ ಖಾನ್, ಮಕ್ಬುಲ್ ಮನಿಯಾರ್, ಮೇಹಬುಬ್ ಮಚ್ಚಿ, ಜಾಫರ್ ತಟ್ಟಿ, ಅಕ್ಬರಪಾಷಾ ಪಲ್ಟನ್, ಅಬ್ದುಲ್ ಅಜೀಜ ಮಾನ್ವಿಕರ್, ಇನ್ನೂ ಅನೇಕ ಮುಸ್ಲಿಂ ಬಾಂದವರು ಈದ್ ಸಂಭ್ರಮಾಚರಣೆಯಲ್ಲಿ ಪಾಲ್ಗೋಂಡಿದ್ದರು.

Leave a Reply

Top